Easyjet Airline: ತೂಕ ಹೆಚ್ಚಾದ ಕಾರಣ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ವಿಲಕ್ಷಣ ಘಟನೆಯೊಂದು ಲಂಡನ್ ನಲ್ಲಿ ವರದಿಯಾಗಿದೆ. ಲಂಡನ್ ಮೂಲದ ಈಸಿಜೆಟ್ ಏರ್‌ಲೈನ್ (Easyjet Airline) ಕಂಪನಿಯ ವಿಮಾನ ಈಸಿಜೆಟ್ ಸ್ಪೇನ್‌ನ (Spain) ಲ್ಯಾಂಜರೋಟ್‌ನಿಂದ(Lanzarote) ಲಿವರ್‌ಪೂಲ್‌ಗೆ (Liverpool) ಟೇಕ್ ಆಫ್ ಮಾಡಬೇಕಾಗಿತ್ತು. ಆದರೆ ಇವರು 19 ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ. ಇದಕ್ಕೆ ಕಾರಣ ತೂಕದ ಹೆಚ್ಚಳ ಎಂದು ತಿಳಿದುಬಂದಿದೆ.
ಸರಿಯಾದ ಹವಾಮಾನವಿಲ್ಲದಿರುವುದು ಹಾಗೂ ಹೆಚ್ಚು ತೂಕದ ಪರಿಣಾಮದಿಂದ ಟೇಕ್ ಆಫ್‌ಗೆ (Too heavy Take-off) ತೊಂದರೆಯಾದ ಹಿನ್ನೆಲೆಯಲ್ಲಿ ವಿಮಾನ ಸಿಬ್ಬಂದಿಯು ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ವಿಮಾನದಿಂದ 19 ಪ್ರಯಾಣಿಕರನ್ನು ಕೆಳಗಿಳಿಸುತ್ತಿರುವ ದೃಶ್ಯಗಳನ್ನು ಪ್ರಯಾಣಿಕರೊಬ್ಬರು ಚಿತ್ರಿಕರಿಸಿ ಮೈಕ್ರೋಬ್ಲಾಗಿಂಗ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಪೈಲೆಟ್ (piolet) ಜನರಿಗೆ ಪರಿಸ್ಥಿತಿಯನ್ನು ವಿವರಿಸುತ್ತಿದ್ದಾರೆ.” ನೀವು ಇಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು. ಆದರೆ, ಬಹಳಷ್ಟು ಪ್ರಯಾಣಿಕರಿಂದ ವಿಮಾನದ ಭಾರದ ಮಿತಿ ಹೆಚ್ಚಾಗಿದೆ. ಲ್ಯಾಂಜರೋಟ್‌ನಲ್ಲಿರುವ ಚಿಕ್ಕದಾದ ರನ್‌ವೇ ಮತ್ತು ಪ್ರತಿಕೂಲ ಪರಿಸ್ಥತಿಗಳಿಂದಾಗಿ ವಿಮಾನ ಟೇಕ್ ಆಫ್ ಮಾಡಲು ಕಷ್ಟವಾಗುತ್ತಿದೆ. ನಾನು ನಮ್ಮ ಕಾರ್ಯಾಚರಣೆ ತಂಡದೊಂದಿಗೆ ಮಾತನಾಡಿದ್ದೇನೆ ಮತ್ತು ಭಾರವಾದ ವಿಮಾನದ(flight) ಸಮಸ್ಯೆಯನ್ನು ಪರಿಹರಿಸುವ ಒಂದು ಮಾರ್ಗವೆಂದರೆ ಅದನ್ನು ಸ್ವಲ್ಪ ಹಗುರಗೊಳಿಸುವುದು”.
“ಹಾಗಾಗಿ ಸ್ವಯಂ ಪ್ರೇರಿತವಾಗಿ 19 ಪ್ರಯಾಣಿಕರು ವಿಮಾನದಿಂದ ಕೆಳಗಿಳಿಯಬೇಕು. ಇವರಿಗೆ, ಈಸಿಜೆಟ್ (Easyjet Airline) ಪರವಾಗಿ ಅವರಿಗೆ 500 ಯುರೋಗಳಷ್ಟು ಪ್ರೋತ್ಸಾಹ ಧನವನ್ನು(money ) ನೀಡುತ್ತೇವೆ ಎಂದು ಘೋಷಿಸಿದರು. ನಮ್ಮ ಮೊದಲ ಆದ್ಯತೆ ಸುರಕ್ಷತೆಯಾಗಿದೆ. ಈ ವಿಮಾನ ಗಾಳಿಯಲ್ಲಿ ಹಾರಬೇಕೆಂದರ ಹಲವಾರು ಅಂಶಗಳು ಕಾರಣವಾಗುತ್ತವೆ. ಗಾಳಿ ಚಲನೆ ಅದ್ಭುತವಾಗಿಲ್ಲ. ಗಾಳಿಯ ದಿಕ್ಕು ಕೂಡ ಸರಿಯಾಗಿಲ್ಲ” ಎಂದು ಪೈಲಟ್ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
ಲಂಜಾರೋಟ್‌ನಿಂದ ಲಿವರ್‌ಪೂಲ್‌ಗೆ ಹೊರಟಿದ್ದ ವಿಮಾನದಲ್ಲಿದ್ದ 19 ಪ್ರಯಾಣಿಕರು ಸ್ವಯಂಪ್ರೇರಿತರಾಗಿಯೇ ನಂತರದ ವಿಮಾನದಲ್ಲಿ ಪ್ರಯಾಣಿಸಲು ಒಪ್ಪಿಕೊಂಡಿದ್ದಾರೆ. ವಿಮಾನದ ತೂಕದ ಮಿತಿ ಹಾಗೂ ಹವಾಮಾನ ಪರಿಸ್ಥಿತಿಗಳಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಎಂದು ತಿಳಿದುಬಂದಿದೆ.
https://twitter.com/i/status/1677621897033310208
