Jain Muni murder case: ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಚಿಕ್ಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಹತ್ಯೆ ಪ್ರಕರಣದ (Jain Muni murder case) ತನಿಖೆಯ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ . ಇದೀಗ ಜೈನ ಮುನಿಯ ಕೃತ್ಯದ ಆರೋಪಿ ನಾರಾಯಣ ಮಾಳಿಗೆ ಪಾಪ ಪ್ರಜ್ಞೆ ಕಾಡುತ್ತಿದೆ ಎಂಬುದು ತಿಳಿದುಬಂದಿದೆ.
ಹೌದು, ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ (Jain Muni murder case) ವಿಚಾರಣೆ ವೇಳೆ ಮೊದಲ ಆರೋಪಿ ನಾರಾಯಣ ಮಾಳಿ ತನಗೆ ಪಾಪ ಪ್ರಜ್ಞೆ ಕಾಡುತ್ತಿದೆ ಎಂದು ಹೇಳುತ್ತಿದ್ದಾನೆಂದು ತಿಳಿದುಬಂದಿದೆ. “ನಂದು ತಪ್ಪಾಯ್ತು ನೀವೆ ನನ್ನ ಸಾಯಿಸಿ, ಇಲ್ಲ ನಾನೇ ಆತ್ಮಹತ್ಯೆ(sucide) ಗುಂಡು ಹಾರಿಸಿ ಸಾಯಿಸಿ, ಇಲ್ಲ ಮಾಡಿಕೊಳ್ಳುವೆ” ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಇಬ್ಬರು ಆರೋಪಿಗಳಾದ ನಾರಾಯಣ ಮಾಳಿ, ಹಸನ್ ದಲಾಯತ್ರನ್ನು ಚಿಕ್ಕೋಡಿ(chikkodi) ಠಾಣೆ ಪೊಲೀಸರು ಜುಲೈ 17ರವರೆಗೆ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಅಜ್ಞಾತ ಸ್ಥಳದಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಅದಲ್ಲದೇ ಜೈನ ಮುನಿಗಳ (Jain Muni)ವೈಯಕ್ತಿಕ ಡೈರಿಯನ್ನು ತಾನು ಸುಟ್ಟು ಹಾಕಿದ್ದೇನೆ ಎಂದು ನಾರಾಯಣ ಮಾಳಿ ಹೇಳಿದ್ದಾನೆ. ಆದರೆ, ಜೈನಮುನಿಗಳ ಡೈರಿಯಲ್ಲಿ ಏನಿತ್ತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಮುನಿಗಳ ಹತ್ಯೆಗೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಡೈರಿ ನಾಪತ್ತೆಯಾಗಿರುವ ಬಗ್ಗೆಯೂ ಆರೋಪಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುನಿಗಳ ಜೊತೆ ಆರೋಪಿಗಳು ಯಾವ ರೀತಿ ಸಂಭಾಷಣೆ ಮಾಡಿದ್ದಾರೆ. ಎಂಬುದನ್ನು ಪೊಲೀಸರು ಕಂಡುಕೊಳ್ಳುತ್ತಿದ್ದಾರೆ.
ಇದರೊಂದಿಗೆ ಪೊಲೀಸರು ಆರೋಪಿ ನಾರಾಯಣ ಮಾಳಿ ಮನೆಗೆ ಬಿಗಿ ಭದ್ರತೆ ನೀಡಿದ್ದು ,ಈ ಹಿನ್ನೆಲೆ ನಾರಾಯಣ ಮಾಳಿ ಕುಟುಂಬಸ್ಥರನ್ನು ಬೇರೆ ಕಡೆ ರವಾನಿಸಲಾಗಿದೆ. ಅಲ್ಲದೆ ಆರೋಪಿ ನಾರಾಯಣ ಮಾಳಿ ಮನೆಯಲ್ಲಿರುವ 30ಕ್ಕೂ ಅಧಿಕ ಜಾನುವಾರುಗಳನ್ನು ಪೊಲೀಸರೇ ಆರೈಕೆ ಮಾಡುತ್ತಿದ್ದಾರೆ. ಎಂದು ತಿಳಿದು ಬಂದಿದೆ.
ಇದನ್ನು ಓದಿ: BMTC conductor viral video: BMTC ಬಸ್ಸು ಕಂಡಕ್ಟರ್ ಸಮವಸ್ತ್ರದಲ್ಲಿ ಹಸಿರು ಟೋಪಿ ಉಂಟಾ ?- ಮಹಿಳೆ ಪ್ರಶ್ನೆ, ವಿಡಿಯೋ ವೈರಲ್
