Home » Marriage: ಏಕಕಾಲಕ್ಕೆ ಇಬ್ಬರು ಯುವಕರನ್ನು ಮದ್ವೆಯಾಗಲು ಯುವತಿಯಿಂದ ಅರ್ಜಿ, ಸಬ್ ರಿಜಿಸ್ಟ್ರಾರ್ ಕಚೇರಿಯೇ ಗೊಂದಲದಲ್ಲಿ !

Marriage: ಏಕಕಾಲಕ್ಕೆ ಇಬ್ಬರು ಯುವಕರನ್ನು ಮದ್ವೆಯಾಗಲು ಯುವತಿಯಿಂದ ಅರ್ಜಿ, ಸಬ್ ರಿಜಿಸ್ಟ್ರಾರ್ ಕಚೇರಿಯೇ ಗೊಂದಲದಲ್ಲಿ !

0 comments
Marriage

Marriage: ಕಾಲ ಎಷ್ಟು ಬದಲಾಗಿದೆ ಎಂದರೆ ಮಹಿಳೆಯರು ಎಷ್ಟು ಅಸಹಾಯಕರು ಇರುತ್ತಾರೆ ಅನ್ನೋದಕ್ಕಿಂತ, ಹೆಚ್ಚು ಧೈರ್ಯವಂತಳು ಸಹ ಆಗಿರುತ್ತಾಳೆ ಅನ್ನೋದನ್ನು ಕಾಲ ತಿಳಿಸುತ್ತಿದೆ. ಹೌದು, ಓರ್ವ ಹೆಣ್ಣು ತಾನಾಗಿಯೇ ಮುಂದೆ ಬಂದು ಒಂದೇ ಸಮಯದಲ್ಲಿ ಇಬ್ಬರನ್ನು ಮದುವೆಯಾಗುತ್ತೇನೆ ಎಂದು ಹೇಳಿದರೆ, ಅದನ್ನು ಕೇಳಿದವರು ಆಶ್ಚರ್ಯ ಪಡದೇ ಇರಲು ಸಾಧ್ಯವಿಲ್ಲ .

ಕೇರಳದ ಕೊಲ್ಲಂನ ಪಠಾಣಪುರಂ ಮೂಲದ ಯುವತಿಯೊಬ್ಬಳು ತನ್ನ ವಿಚಿತ್ರ ನಿಲುವಿನಿಂದ ಇದೀಗ ಎಲ್ಲರ ಗಮನ ಸೆಳೆದಿದ್ದಾಳೆ. ಏಕಕಾಲದಲ್ಲಿ ಇಬ್ಬರನ್ನು ಮದುವೆಯಾಗುವ (Marriage) ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ.

ಹೌದು, ಪಠಾಣಪುರಂ ಮತ್ತು ಪುನಲೂರಿನ ಸಬ್​ ರಿಜಿಸ್ಟ್ರಾರ್​ ಕಚೇರಿಗಳಿಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಿರುವ ಯುವತಿ ಎರಡೂ ಊರಿನ ಇಬ್ಬರು ಯುವಕರನ್ನು ಮದುವೆಯಾಗಲು ಮುಂದಾಗಿದ್ದಾಳೆ.

ಯುವತಿ ವಿಶೇಷ ವಿವಾಹ ಕಾಯಿದೆ ಅಡಿ ಮೊದಲು ಪಠಾಣಪುರಂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದಳು. ನಂತರ ಅದೇ ಹುಡುಗಿ ಪುನಲೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಪುನಲೂರಿನ ಉರುಕುನ್ನು ಮೂಲದ ಯುವಕನ ಜತೆ ಮದುವೆ ಮಾಡಿಕೊಡುವಂತೆ ಮನವಿ ಮಾಡಿದಳು.

ಈ ಅರ್ಜಿಗಳಿಂದ ಗೊಂದಲಕ್ಕೀಡಾದ ಅಧಿಕಾರಿಗಳು ಯುವತಿ ಹಾಗೂ ಯುವಕರನ್ನು ಕರೆಸಲು ಮುಂದಾಗಿದ್ದಾರೆ. ಸದ್ಯ ಇದಕ್ಕೆಲ್ಲಾ ಆ ಇಬ್ಬರು ಯುವಕರು ಉತ್ತರ ನೀಡಬೇಕಿದೆ.

 

ಇದನ್ನು ಓದಿ: State Government: RSS ಗೋಮಾಳಕ್ಕೆ ಕೊಟ್ಟ 35 ಎಕರೆ ಭೂಮಿ ತಡೆ ಹಿಡಿದ ಸರ್ಕಾರ, ರೈತ ವಿರೋಧಿ ನಡೆಗೆ ಆಕ್ರೋಶ ! 

You may also like

Leave a Comment