Home » Anchor Anushree student photo: ಸ್ಕೂಲ್ ಫೋಟೋ ಹಂಚಿಕೊಂಡು – ಇದ್ಯಾರು ಅಂದ ಅನುಶ್ರೀ: ಇವ್ಳು ನನ್‌ ಡವ್‌, ಕಾಸ್ಟ್ಲಿ ಟೊಮ್ಯಾಟೋ ಮಾರೋಳು ಅಂದದ್ದು ಯಾರು ?

Anchor Anushree student photo: ಸ್ಕೂಲ್ ಫೋಟೋ ಹಂಚಿಕೊಂಡು – ಇದ್ಯಾರು ಅಂದ ಅನುಶ್ರೀ: ಇವ್ಳು ನನ್‌ ಡವ್‌, ಕಾಸ್ಟ್ಲಿ ಟೊಮ್ಯಾಟೋ ಮಾರೋಳು ಅಂದದ್ದು ಯಾರು ?

1,240 comments
Anchor Anushree student photo

Anchor Anushree student photo: ಕನ್ನಡದ ಬಹುಬೇಡಿಕೆಯ ನಿರೂಪಕಿ ಅನುಶ್ರೀ (Anchor Anushree ) ಅಂದರೆ ಎಲ್ಲರಿಗೂ ಇಷ್ಟಾನೇ ಬಿಡಿ. ಅನುಶ್ರೀ ನಿರೂಪಣೆ ಮಾಡೋಕೆ ಶುರು ಮಾಡಿದರೆ ಸಾಕು, ಜನರು ಶಿಳ್ಳೆ ಹೊಡೆಯುತ್ತಾ ಕಣ್ಣು ಬಾಯಿ ಬಿಟ್ಟು ಆಕೆಯ ನಿರೂಪಣೆಯನ್ನು ಎಂಜಾಯ್ ಮಾಡುತ್ತಾರೆ. ಚಂದನವನದ ಬ್ಯೂಟಿ, ನಾಟಿ ಅನುಶ್ರೀ ಅವರು ಸದ್ಯ ಕಿರುತೆರೆ ರಿಯಾಲಿಟಿ ಶೋನ ನಿರೂಪಣೆಯ ಮೂಲಕ ಅಭಿಮಾನಿಗಳನ್ನ ಹೆಚ್ಚೆಚ್ಚು ಗಮನ ಸೆಳೆಯುತ್ತಿದ್ದಾರೆ. ಸ್ಟಾರ್ ನಟರ ಸಿನಿಮಾ ಕಾರ್ಯಕ್ರಮಗಳಿಗೆ ಇವರ ನಿರೂಪಣೆನೇ ಬೇಕು ಎಂಬಷ್ಟರ ಮಟ್ಟಿಗೆ ಹವಾ ಸೃಷ್ಟಿಸಿರೋ ನಿರೂಪಕಿ ಅನುಶ್ರೀ ಸೋಷಿಯಲ್‌ ಮೀಡಿಯಾದಲ್ಲಿ(social media) ತಮ್ಮ ಶಾಲೆಯ ಹಳೆಯ ನೆನಪೊಂದನ್ನು ಹಂಚಿಕೊಂಡಿದ್ದಾರೆ.

ಹೌದು.. ನಟಿ ಹಾಗೂ ನಿರೂಪಕಿ ಅನುಶ್ರಿ ತಮ್ಮ ಶಾಲಾದಿನದ ಐಡಿ ಕಾರ್ಡ್‌ನ ಫೋಟೋವನ್ನು( Anchor Anushree student photo) ಹಂಚಿಕೊಂಡಿದ್ದು, “ಈ ಹುಡುಗಿ ಯಾರೆಂದು ಗೊತ್ತಾ? ಸ್ಟೂಡೆಂಟ್‌ ಲೈಫ್‌ ಈಸ್‌ ಗೋಲ್ಡನ್‌ ಲೈಫ್‌ ಅಂತಾರೆ. ನಿಜ ಬೆಲೆ ಕಟ್ಟಲು ಅಸಾಧ್ಯ. ನಿಮ್ಮ ಸ್ಟೂಡೆಂಟ್‌ ಲೈಫ್‌ ಹೇಗಿತ್ತು ಕಾಮೆಂಟ್‌ ಮಾಡಿ” ಎಂದು ಇನ್ಸ್ಟಾಗ್ರಾಮ್ ನಲ್ಲಿ ಫೋಸ್ಟ್‌ ಹಂಚಿಕೊಂಡಿದ್ದಾರೆ.

ಮೂಲತಃ ಮಂಗಳೂರಿನ(Manglore) ಬೆಡಗಿ ಅನುಶ್ರೀ ತಮ್ಮ ಸ್ಕೂಲ್, ಕಾಲೇಜು ಲೈಫ್‌ ಅನ್ನು ಮಂಗಳೂರಿನಲ್ಲಿ ಕಳೆದಿದ್ದಾರೆ. ಇದೀಗ ತಮ್ಮ ಶಾಲೆಯ ಸವಿ ಸವಿ ನೆನಪಿನ ಬಗ್ಗೆ ನಟಿ ಅನುಶ್ರೀ ಮೆಲುಕು ಹಾಕಿದ್ದಾರೆ. ತಮ್ಮ ಸ್ಕೂಲ್‌ ಐಡೆಂಟಿಟಿ ಕಾರ್ಡನ್ನು(identify card) ಅನುಶ್ರೀ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ತಾವು ಓದಿದ ಮಂಗಳೂರು ಅತ್ತಾವರದ ಶಾಲೆಯನ್ನು ಅನುಶ್ರೀ ನೆನಪಿಸಿಕೊಂಡಿದ್ದಾರೆ.

ಸ್ಕೂಲ್‌ ಫೋಟೋದಲ್ಲಿ ಅನುಶ್ರೀ ಈಗಿನಂತೇ ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ. ಹಣೆಗೆ ಕುಂಕುಮ ಇಟ್ಟಿದ್ದಾರೆ. ಈ ಚಿತ್ರ ಪೋಸ್ಟ್‌ ಮಾಡಿದ್ದ ಕೆಲವೇ ನಿಮಿಷದಲ್ಲಿ 18 ಸಾವಿರಕ್ಕೂ ಅಧಿಕ ಲೈಕ್ಸ್‌ ಪಡೆದುಕೊಂಡಿದೆ. ಇನ್ನು ಅನುಶ್ರಿ ಹಂಚಿಕೊಂಡಿರುವ ಫೋಟೋಗೆ ಕಾಮೆಂಟ್ಸ್‌ಗಳ ಸುರಿಮಳೆ ಬಂದಿದೆ.

ಇನ್ನು ಅನುಶ್ರೀ ಎಚ್ಚರಿಕೆಯಿಂದ ತಮ್ಮ ಐಡಿ ಕಾರ್ಡ್‌ಅನ್ನು ಕ್ರಾಪ್‌ ಮಾಡಿದ್ದರೂ, ಕೆಲವರು ಅವರು ಓದಿದ್ದು ಯಾವ ಶಾಲೆ/ಕಾಲೇಜು ಅನ್ನೋದನ್ನ ಬಹಿರಂಗಪಡಿಸಿದ್ದಾರೆ. ‘ಇದು ಅತ್ತಾವರದ ಸರೋಜಿನಿ ಮಧುಸೂಧನ್‌ ಖುಷಿ ಕಾಲೇಜು’ ಎಂದು ಬರೆದಿದ್ದಾರೆ. ‘ಈ ಮುಖ ಎಲ್ಲೋ ನೋಡಿರೋ ಹಾಗಿದೆ..’ ಎಂದು ಇನ್ನೊಬ್ಬರು ಬರೆದಿದ್ದಾರೆ. ಇವ್ಳು ನನ್‌ ಡವ್‌, ಟೊಮ್ಯಾಟೋ ಮಾರೋ ಹುಡ್ಗಿ’ ಎಂದು ಅಭಿಮಾನಿಯೊಬ್ಬರು ಅನುಶ್ರೀಯವರ ಕಾಲೆಳೆದಿದ್ದಾರೆ. ಹೀಗೆ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ ಬಂದಿದೆ.

 

ಇದನ್ನು ಓದಿ: Marriage: ಮದುವೆಯಾಗಿ 2 ಗಂಟೆಯಲ್ಲಿ ಬಂತು ತಲಾಖ್, ಕಾರು ಕೊಟ್ಟಿಲ್ಲ ಅದ್ಕೆ ತಲಾಖ್ ಸಿಕ್ತು !

You may also like

Leave a Comment