Kerala: ಸ್ನೇಹ, ಪ್ರೀತಿ, ನಂಬಿಕೆ, ವಿಶ್ವಾಸಗಳು ಎಲ್ಲೇ ಮೀರಿ ಪೈಶಾಚಿಕ ರೂಪ ಪಡೆದುಕೊಂಡಿರುವುದು ನಾವು ಅಲ್ಲಲ್ಲಿ ಕೇಳಿರಬಹುದು ಅಥವಾ ನೋಡಿರಬಹುದು. ಅದೇ ರೀತಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರು ಮಂದಿಯನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು, ಕೇರಳದ (Kerala) ಪತ್ತನಂತಿಟ್ಟ ಜಿಲ್ಲೆಯ ಅಡೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು ಎಂದು ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಇದ್ದಕ್ಕಿದ್ದಂತೆ ಮನೆ ಮಗಳ ವರ್ತನೆ ತೀರಾ ಬದಲಾಗಿದ್ದು, ಚಿಂತೆಯಲ್ಲಿ ಮುಳುಗಿದ್ದು, ಚಿಟ ಪಟ ಓಡಾಡುತ್ತಿದ್ದ ಮಗಳು ಮೂಗಿಯಂತೆ ವರ್ತಿಸುವುದನ್ನು ಗಮನಿಸಿ ಆಕೆಯನ್ನು ವಿಚಾರಿಸಿದಾಗ ಅವಳು ಸ್ಪಷ್ಟ ಉತ್ತರವನ್ನು ನೀಡಲಿಲ್ಲ.
ನಂತರ ಶಾಲಾ ಅಧಿಕಾರಿಗಳು ಚೈಲ್ಡ್ ಲೈನ್ ಸಹಾಯವನ್ನು ಪಡೆದು, ಕೌನ್ಸೆಲಿಂಗ್‌ನಲ್ಲಿ ಬಾಲಕಿ ಮಾಹಿತಿ ಸ್ಪೋಟಕ ಮಾಹಿತಿ ನೀಡಿದ್ದಾಳೆ, ತನಗಾದ ವಂಚನೆ ಮತ್ತು ಹಿಂಸೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾಳೆ.
ಅಷ್ಟೇ ಅಲ್ಲ ಆರು ಜನರು ಬೇರೆ ಬೇರೆ ದಿನಾಂಕಗಳಲ್ಲಿ ಅತ್ಯಂತ ಹೀನಾಯಕರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದ್ದಾಳೆ. ಇನ್ನು ಮೊದಲು ಆಕೆಯ ಗೆಳೆಯ ಆಮಿಷವೊಡ್ಡಿ ಮೊದಲು ಅತ್ಯಾಚಾರವೆಸಗಿದ್ದಾನೆ. ನಂತರ ತನ್ನ ಸ್ನೇಹಿತರನ್ನು ಭೇಟಿಯಾಗುವಂತೆ ಹೇಳಿದ್ದಾನೆ. ಅವರಲ್ಲಿ ಆರು ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾಳೆ.
ಸದ್ಯ ಬಾಲಕಿ ಚೈಲ್ಡ್ ಲೈನ್ ಗೆ ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಜುಲೈ 6 ರಂದು ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಿದ್ದಾರೆ.
ಇದನ್ನು ಓದಿ: Railway Recruitment: ರೈಲ್ವೆ ನೇಮಕಾತಿ ಶುರು, ಬರೋಬ್ಬರಿ 7,784 ಹುದ್ದೆಗಳು, ಲಾಸ್ಟ್ ಡೇಟ್ ಶೀಘ್ರದಲ್ಲಿ !
