Home » Bollywood Actress: ಹುಡುಗಿ ಆಗಿದ್ದಾಗಲೇ ಕಿಸ್ ಮಾಡಿಲ್ಲ ಈ ನಟಿ, ಈಗ ಆಂಟಿ ಆದ್ಮೇಲೆ ಅದೂ ಈ ರೀತಿ ಕಿಸ್ ಮಾಡೋದಾ ?

Bollywood Actress: ಹುಡುಗಿ ಆಗಿದ್ದಾಗಲೇ ಕಿಸ್ ಮಾಡಿಲ್ಲ ಈ ನಟಿ, ಈಗ ಆಂಟಿ ಆದ್ಮೇಲೆ ಅದೂ ಈ ರೀತಿ ಕಿಸ್ ಮಾಡೋದಾ ?

0 comments
Bollywood Actress

Bollywood Actress: ಈ ನಟಿ ಹುಡುಗಿ ಆಗಿದ್ದಾಗಲೇ ಕಿಸ್ ಮಾಡಿಲ್ಲ ಆದರೆ, ಈಗ ಆಂಟಿ ಆದ್ಮೇಲೆ ಕಿಸ್ ಮಾಡಿದ್ದಾರೆ. ಅದು ಯಾವ ರೀತಿ ಗೊತ್ತಾ ?! ಅಷ್ಟಕ್ಕೂ ಯಾರೀ ನಟಿ ?! ಅವರೇ ಬಾಲಿವುಡ್ ನಟಿ (Bollywood Actress) ಕಾಜೋಲ್. ಕಾಜೋಲ್ ಬರೋಬ್ಬರಿ 29 ವರ್ಷಗಳ ನೋ ಕಿಸ್ಸಿಂಗ್ ನಿಯಮವನ್ನು ಬ್ರೇಕ್ ಮಾಡಿದ್ದಾರೆ. 1994 ರ ಚಲನಚಿತ್ರ ಯೇ ದಿಲ್ಲಗಿ ನಂತರ, ಕಾಜೋಲ್ ತೆರೆಯ ಮೇಲೆ ಚುಂಬಿಸಿಲ್ಲ. ಇದೀಗ ಮದುವೆಯಾದ ನಂತರ ನೋ ಕಿಸ್ಸಿಂಗ್ ನಿಯಮ ಬ್ರೇಕ್ ಮಾಡಿದ್ದಾರೆ.

ಇತ್ತೀಚೆಗಷ್ಟೆ ನಟಿ ತಮನ್ನಾ (Tamannaah Bhatia) ತನ್ನ 18 ವರ್ಷಗಳ ನೋ ಕಿಸ್ಸಿಂಗ್ ನಿಯಮವನ್ನು ಬ್ರೇಕ್ ಮಾಡಿದ್ದರು. ಇದೀಗ ನಟಿ ಕಾಜೋಲ್ (Kajol) ದೇವಗನ್ ಸರದಿ. ಹೌದು ನಟಿ ಕಾಜೋಲ್ ದೇವಗನ್ ವೆಬ್ ಸೀರಿಸ್‌ಗಾಗಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೆ ಕಾಜೋಲ್ ಬರೋಬ್ಬರಿ 29 ವರ್ಷಗಳ ನೋ ಕಿಸ್ಸಿಂಗ್ ನಿಯಮವನ್ನು ಬ್ರೇಕ್ ಮಾಡಿದ್ದಾರೆ. ಸದ್ಯ ಕಾಜೋಲ್ ಕಿಸ್ಸಿಂಗ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

image source: Bollywood hungama

ಇದೀಗ ನಟಿ ಕಾಜೋಲ್ ಒಟಿಟಿ ಚೊಚ್ಚಲ ದಿ ಟ್ರಯಲ್‌ ಚಿತ್ರದಲ್ಲಿ ನಟಿಸಿದ್ದು, ಇದರಲ್ಲಿ ಸಹ-ನಟರೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. ದಿ ಟ್ರಯಲ್ ಸರಣಿಯಲ್ಲಿ ಕಾಜೋಲ್ ತನ್ನ ಪತಿಯಾಗಿ ನಟಿಸಿರುವ ಜಿಸ್ಶು ಸೇನ್‌ಗುಪ್ತಾ ಮತ್ತು ಮಾಜಿ ಗೆಳೆಯನ ಪಾತ್ರದಲ್ಲಿರುವ ಅಲಿ ಖಾನ್ ಇಬ್ಬರನ್ನೂ ಚುಂಬಿಸಿದ್ದಾರೆ.

ಕಾಜೋಲ್ 1992ರಲ್ಲಿ ಬೇಖುದಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದಾಗ, ಅವರು ತಮ್ಮ ಸಹ-ನಟ ಕಮಲ್ ಸದನಾ ಅವರೊಂದಿಗೆ ಚುಂಬನದ ದೃಶ್ಯವನ್ನು ಮಾಡಬೇಕಾಯಿತು. ನಟಿಯ ಎರಡನೇ ಚುಂಬನದ ದೃಶ್ಯವು ಅಕ್ಷಯ್ ಕುಮಾರ್ ಅವರೊಂದಿಗೆ 1994 ರ ಚಲನಚಿತ್ರ ಯೇ ದಿಲ್ಲಗಿಯಲ್ಲಿ ಇತ್ತು. ‘ಯೇ ದಿಲ್ಲಗಿ’ ಚಿತ್ರದ ನಂತರ, ಕಾಜೋಲ್ ತೆರೆಯ ಮೇಲೆ ಚುಂಬಿಸುವುದನ್ನು ಬಿಟ್ಟುಬಿಟ್ಟರು. 29 ವರ್ಷಗಳಿಂದ ತೆರೆಯ ಮೇಲೆ ಮುತ್ತು ಕೊಟ್ಟಿರಲಿಲ್ಲ‌.

ಆದರೆ, ಇದೀಗ ತೆರೆಮೇಲೆ ಸಹ ನಟನೊಂದಿಗೆ ಕಿಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಮೊದಲು ಕಾಜೋಲ್ ಲಸ್ಟ್ ಸ್ಟೋರೀಸ್ 2 ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ದಿ ಟ್ರಯಲ್’ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ದಿ ಟ್ರಯಲ್ ನಲ್ಲಿ ವಕೀಲರ ಪಾತ್ರವನ್ನು ನಿರ್ವಹಿಸಿದ್ದಾರೆ. ಬಂಗಾಳಿ ನಟ ಜಿಶು ಸೇನ್ ಗುಪ್ತಾ, ಕಾಜೋಲ್ ಪತಿಯಾಗಿ ನಟಿಸಿದ್ದಾರೆ. ಈ ಸರಣಿಯಲ್ಲಿ ಕಾಣಿಸಿಕೊಂಡಿರುವ ಈ ಎರಡು ಕಿಸ್ಸಿಂಗ್ ದೃಶ್ಯಗಳು ಇದೀಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ.

 

ಇದನ್ನು ಓದಿ: HD Kumaraswamy: ವರ್ಗಾವಣೆ ದಂಧೆಯಲ್ಲಿ ಬರೋಬ್ಬರಿ 500 ಕೋಟಿ ಅದ್ಲು ಬದ್ಲು – ಕುಮಾರ ಸ್ವಾಮಿ ಸ್ಫೋಟಕ ಹೇಳಿಕೆ 

You may also like

Leave a Comment