Home » Anand Mahindra: ಇಲ್ಲಿದೆ ನೋಡಿ ಆನಂದ್ ಮಹೀಂದ್ರಾ ಶೇರ್ ಮಾಡ್ಕೊಂಡ ವಿಶಿಷ್ಟ ಕಿಟಕಿ ಕಂ ಬಾಲ್ಕನಿ – Video ರಿಪೋರ್ಟ್ !

Anand Mahindra: ಇಲ್ಲಿದೆ ನೋಡಿ ಆನಂದ್ ಮಹೀಂದ್ರಾ ಶೇರ್ ಮಾಡ್ಕೊಂಡ ವಿಶಿಷ್ಟ ಕಿಟಕಿ ಕಂ ಬಾಲ್ಕನಿ – Video ರಿಪೋರ್ಟ್ !

0 comments
Anand Mahindra

Anand Mahindra: ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ (Anand Mahindra) ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಸದಾ ಆಕ್ಟಿವ್ ಆಗಿ ಇರ್ತಾರೆ. ಇವರು ಯಾವಾಗಲೂ ಆಸಕ್ತಿದಾಯಕ, ಸ್ಪೂರ್ತಿದಾಯಕ ಮತ್ತು ಹಾಸ್ಯಮಯ ಟ್ವೀಟ್‌ಗಳಳನ್ನು ಶೇರ್ ಮಾಡುವ ಮೂಲಕ ಜನಪ್ರಿಯ ರಾಗಿದ್ದಾರೆ. ಇದೀಗ ಕಿಟಕಿ ಕಮ್ ಬಾಲ್ಕನಿಯ (transforms window into balcony) ವಿಶಿಷ್ಟ ವಿಡಿಯೋ (video) ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇದೇನಪ್ಪಾ ಕಿಟಕಿ ಕಮ್ ಬಾಲ್ಕನಿ ಅಂತ ಯೋಚಿಸುತ್ತಿದ್ದೀರಾ? ಕಿಟಕಿ ಬಾಲ್ಕನಿಯಾಗಿ ಪರಿವರ್ತನೆ ಯಾಗುವ ಸೂಪರ್ ಟೆಕ್ನಾಲಜಿ ಯನ್ನು ನಾವು ಈ ವಿಡಿಯೋದಲ್ಲಿ ಕಾಣಬಹುದು. ಈಗಂತೂ ಕಟ್ಟಡ ನಿರ್ಮಾಣ (Building construction) ಉದ್ಯಮದಲ್ಲಿ ದಿನಕ್ಕೊಂದರಂತೆ ಹೊಸ ಹೊಸ ಟೆಕ್ನಾಲಜಿ ಪ್ಲಸ್ ಸ್ಟೈಲಿಶ್ ಅನ್ನು ಅಳವಡಿಸಿಕೊಳ್ಳುತ್ತಾರೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಾಜಿನಿಂದ ತಯಾರಿಸಿದ ಕಿಟಕಿಯು ಬಾಲ್ಕನಿಯಾಗಿ ಪರಿವರ್ತನೆಗೊಳ್ಳುವುದನ್ನು ನಾವು ಕಾಣಬಹುದು.

ಆನಂದ್ ಮಹೀಂದ್ರಾ ಶೇರ್ ಮಾಡಿರುವ ಈ ವಿಡಿಯೋದಲ್ಲಿ ಸ್ವಲ್ಪ ಜಾಗದಲ್ಲಿ ಕಿಟಕಿ (window) ಮತ್ತು ಬಾಲ್ಕನಿಯನ್ನು (Balcony) ನಿರ್ಮಾಣಗೊಳಿಸುವ ಅದ್ಭುತ ಟೆಕ್ನಾಲಜಿಯನ್ನು ಕಾಣಬಹುದು. ಗಾಜಿನ ಕಿಟಕಿಯು ಒಂದೇ ಕ್ಷಣದಲ್ಲಿ ಬಾಲ್ಕನಿಯಾಗಿ ಪರಿವರ್ತನೆಯಾಗುವ ತಂತ್ರಜ್ಞಾನವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ನೀವು ಕಟ್ಟಡಗಳನ್ನು (Building) ನಿರ್ಮಾಣ ಮಾಡಬೇಕು ಎಂದುಕೊಂಡಿದ್ದರೆ ಈ ಹೊಸ ಪ್ಲಾನ್ ಅನ್ನು ಟ್ರೈ ಮಾಡಿ ಎಂದು ಆನಂದ್ ಮಹೇಂದ್ರ ಹೇಳಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ನಾನಾ ಬಗೆಯ ಕಮೆಂಟ್ಗಳನ್ನು ಹರಿಸಿದ್ದಾರೆ. ಒಬ್ಬ ವೀಕ್ಷಕರು ಇಂಜಿನಿಯರ್ ಬುದ್ಧಿಗೆ ಭಲೆ ಎಂದು ಶ್ಲಾಘನಿಸಿದ್ದಾರೆ. ಮತ್ತೋರ್ವ ನೆಟ್ಟಿಗರಂತೂ “ಚಾ – ಪಕೋಡಾದೊಂದಿಗೆ ಮಳೆಯನ್ನು ಆನಂದಿಸಲು ಇದು ಉತ್ತಮವಾದ ಐಡಿಯಾ” ಎಂದು ಹೇಳಿದ್ದಾರೆ.

 

 

ಇದನ್ನು ಓದಿ: Bollywood Actress: ಹುಡುಗಿ ಆಗಿದ್ದಾಗಲೇ ಕಿಸ್ ಮಾಡಿಲ್ಲ ಈ ನಟಿ, ಈಗ ಆಂಟಿ ಆದ್ಮೇಲೆ ಅದೂ ಈ ರೀತಿ ಕಿಸ್ ಮಾಡೋದಾ ?

You may also like

Leave a Comment