Home » Siddaramaiah: ಸಿದ್ರಾಮಯ್ಯನ ಕನ್ನಡ ಪಂಡಿತ್ರು ಅನ್ಕಂಡಿದ್ದೆ, ಈ ವಯ್ಯಗೆ ಕನ್ನಡ ಬರಕ್ಕಿಲ್ವಾ ? – ಯಾರ್ ,ಯಾಕ್, ಯಾವಾಗ್ ಯೋಳಿದ್ರು?

Siddaramaiah: ಸಿದ್ರಾಮಯ್ಯನ ಕನ್ನಡ ಪಂಡಿತ್ರು ಅನ್ಕಂಡಿದ್ದೆ, ಈ ವಯ್ಯಗೆ ಕನ್ನಡ ಬರಕ್ಕಿಲ್ವಾ ? – ಯಾರ್ ,ಯಾಕ್, ಯಾವಾಗ್ ಯೋಳಿದ್ರು?

0 comments

Siddaramaiah: ಸಿದ್ರಾಮಯ್ಯನ (Siddaramaiah) ಕನ್ನಡ ಪಂಡಿತ್ರು ಅನ್ಕಂಡಿದ್ದೆ, ಈ ವಯ್ಯಗೆ ಕನ್ನಡ ಬರಕ್ಕಿಲ್ವಾ ? ಈ ಮಾತನ್ನು ಯಾರು ? ಯಾಕೆ ಹೇಳಿದ್ರು ಗೊತ್ತಾ? ಇದನ್ನು ಹೇಳಿರೊದು ಎಚ್‌ಡಿ ಕುಮಾರಸ್ವಾಮಿ (kumaraswamy). ಹೌದು, ಎಚ್‌ಡಿ ಕುಮಾರಸ್ವಾಮಿ ಸಿಎಂ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ಧರಾಮಯ್ಯ ತನ್ನನ್ನು ತಾನು ದೊಡ್ ಕನ್ನಡ ಪಂಡಿತ ಅಂತಾ ಹೇಳ್ತಾರೆ. ಅವರಿಗೇನು ಕನ್ನಡ ಬರೋದಿಲ್ವಾ? ಎಂದು ಎಚ್’ಡಿಕೆ ಸಿದ್ದುಗೆ ಟಾಂಗ್ ನೀಡಿದ್ದಾರೆ. ಪಂಚರತ್ನ ಜಾರಿಯಾಗದಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡ್ತೀನೆ ಅಂತ‌ ಹೇಳಿದ್ದೆ. ಆದರೆ, 123 ಸೀಟು ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಯಾವತ್ತೂ ಯಾವ ಸ್ಥಳದಲ್ಲೂ ಹೇಳೇ ಇಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ದೇವರಾಜು ಅರಸು ನಂತರ 2ನೇ ಬಾರಿಗೆ ಸಿಎಂ ಅಗಿದ್ದೀರಿ ಅಂತಾ ಹೇಳ್ಕೊಂಡು ತಿರುಗಾಡ್ತಾ ಇದ್ದೀರಿ, ಇದರಿಂದ ಜನರಿಗೆ ಏನ್ ಸಂದೇಶ ಕೊಡೋಕೆ ಹೊರಟಿದ್ದೀರಿ. ಅಲ್ಲದೆ, ಇದು ನನ್ನ ಕೊನೆ ಚುನಾವಣೆ ಅಂತಾ ಹೇಳಿದ್ದೀರಿ. ಉತ್ತಮ ರೀತಿ ರಾಜ್ಯ ನಡೆಸಿ
ಜನರ‌ ಬಳಿ ಒಳ್ಳೆಯ ಹೆಸರು ಗಳಿಸಿ. ಈಗಾಗಲೇ ರಾಜ್ಯ ಸರ್ಕಾರದ ಮೇಲೆ ಬೇಕಾದಷ್ಟು ಆರೋಪಗಳಿವೆ ಎಂದು ಕಿಡಿಕಾರಿದರು.

 

ಇದನ್ನು ಓದಿ: RBI: ಟಮೋಟೋ ರೇಟ್ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ರಿಸರ್ವ್ ಬ್ಯಾಂಕ್ – ಅರರೇ.. RBIಗೂ ತಟ್ಟಿತಾ ಇದರ ಬೆಲೆ ಏರಿಕೆ ಬಿಸಿ?! 

You may also like

Leave a Comment