Home » Kanya Bhagya Scheme: ಹಲವು ಭಾಗ್ಯಗಳ ಜೊತೆ ಹೊಸ ಭಾಗ್ಯ ; ಕನ್ಯಾ ಭಾಗ್ಯ ಕರುಣಿಸಿ – ಸಿದ್ದರಾಮಯ್ಯಗೆ ಮನವಿ ಮಾಡಿದ ಹುಡುಗರು !

Kanya Bhagya Scheme: ಹಲವು ಭಾಗ್ಯಗಳ ಜೊತೆ ಹೊಸ ಭಾಗ್ಯ ; ಕನ್ಯಾ ಭಾಗ್ಯ ಕರುಣಿಸಿ – ಸಿದ್ದರಾಮಯ್ಯಗೆ ಮನವಿ ಮಾಡಿದ ಹುಡುಗರು !

0 comments
Kanya Bhagya Scheme

Kanya Bhagya Scheme: ಈಗಾಗಲೇ ಪಂಚ ಗ್ಯಾರಂಟಿ ಘೋಷಿಸಿ ಕೆಲವು ಗ್ಯಾರಂಟಿ ಅನುಷ್ಟಾನಗೊಳಿಸಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಯುವ ರೈತರಿಂದ ವಿಶೇಷ ಮನವಿ ಸಲ್ಲಿಕೆಯಾಗಿದೆ. ಹೌದು, ದೇಶದ ಬೆನ್ನೆಲುಬಾಗಿರುವ ರೈತರು ಕನ್ಯಾಭಾಗ್ಯ (Kanya Bhagya Scheme) ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಬರೆದಿದ್ದಾರೆ.

ಹೆಣ್ಣು ಮಕ್ಕಳಿಗೆ ತಾವು ವಿವಾಹವಾಗುವ ಯುವಕ ವಿದ್ಯಾವಂತ, ಉತ್ತಮ ಉದ್ಯೋಗ ಹಾಗೂ ಅಧಿಕ ಸಂಬಳ ಹೊಂದಿರುವವನೇ ಆಗಿರಬೇಕು ಎಂಬ ಕನಸಿರುತ್ತದೆ. ಈ ಕಾರಣದಿಂದಾಗಿಯೇ ರೈತ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ರೈತರನ್ನು ಯಾರೂ ಮದುವೆಯಾಗಲು ಮುಂದೆ ಬರುತ್ತಿಲ್ಲ. ಯುವ ರೈತರಿಗೆ ಕನ್ಯೆ ಕೊಡಲು ಹಿಂದೇಟು ಹಾಕುತ್ತಿರುವುದರಿಂದ ಬೇಸತ್ತ ಯುವಕರು, ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಪತ್ರ ಬರೆದು ವಿಶೇಷ ಯೋಜನೆ ರೂಪಿಸುವಂತೆ ಮನವಿ ಮಾಡಿದ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ನಡೆದಿದೆ.

ಬ್ಯಾಡಗಿ ತಾಲೂಕಿನ ಯುವ ರೈತರು ಕನ್ಯಾಭಾಗ್ಯ ಆರಂಭಿಸುವಂತೆ ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
5 ರಿಂದ 6 ಎಕರೆ ಜಮೀನು ಇದ್ದರೂ ಕೂಡ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿಕ ಕೂಡ ತನ್ನ ಮಗಳನ್ನು ಕೃಷಿಕನಿಗೆ ಕೊಡಲು ಹಿಂದೇಟು ಹಾಕುವ ಪರಸ್ಥಿತಿ ನಿರ್ಮಾಣವಾಗಿದೆ. ಉತ್ತಮ ಮಳೆ (Rain) ಬಂದ್ರೆ ರೈತರೂ ಕೂಡ ಲಕ್ಷಾಂತರ ರೂಪಾಯಿ ಗಳಿಸುತ್ತಾರೆ. ಆದರೆ ಹವಾಮಾನ ವೈಪರೀತ್ಯದಿಂದ ನಷ್ಟ ಆಗುತ್ತಿದೆ.

ಹಾಗಾಗಿ ರೈತ ಯುವಕರಿಗಾಗಿ ವಿಶೇಷ ಯೋಜನೆ ರೂಪಿಸಿ, ಯುವ ರೈತರನ್ನು ಮದುವೆ ಆದ ಯುವತಿಯರಿಗೆ ಕನಿಷ್ಠ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು. ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ 2 ಸಾವಿರ ರೂ. ಕೊಡುವ ಮಾದರಿಯಲ್ಲಿಯೇ ರೈತರನ್ನು ಮದುವೆಯಾದವರಿಗೂ ಸಹ ಹಣ ನೀಡುವ ಕನ್ಯಾಭಾಗ್ಯ ಯೋಜನೆ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ರೈತರನ್ನು ಮದುವೆಯಾದ ವಿದ್ಯಾವಂತ ಯುವತಿಯರಿಗೆ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಬೇಕು ಎಂದು ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

 

ಇದನ್ನು ಓದಿ: Shashi Tharoor Appreciate Modi: ಪ್ರಧಾನಿ ಮೋದಿಯನ್ನು ಟೀಕಿಸಿದ್ದೆ, ಆದರೆ…. ಮೋದಿಯ ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ ! 

You may also like

Leave a Comment