Home » Tollywood actor Rajshekhar: ಟಾಲಿವುಡ್ ಖ್ಯಾತ ನಟ ರಾಜಶೇಖರ್ ದಂಪತಿಗೆ ಜೈಲು ಶಿಕ್ಷೆ ! ಇವರು ಮಾಡಿದ ತಪ್ಪಾದರೂ ಏನು ?!

Tollywood actor Rajshekhar: ಟಾಲಿವುಡ್ ಖ್ಯಾತ ನಟ ರಾಜಶೇಖರ್ ದಂಪತಿಗೆ ಜೈಲು ಶಿಕ್ಷೆ ! ಇವರು ಮಾಡಿದ ತಪ್ಪಾದರೂ ಏನು ?!

by Mallika
0 comments
Tollywood actor Rajshekhar

Tollywood actor Rajshekhar: ರಾಜಶೇಖರ್ ದಂಪತಿ ಮೆಗಾಸ್ಟಾರ್ ಚಿರಂಜೀವಿ ಅವರ ಬ್ಲಡ್ ಬ್ಯಾಂಕ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಚಿರಂಜೀವಿ ಬಾವ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ 2011ರಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು . ಇದೀಗ ಈ ಕುರಿತು ನ್ಯಾಯಾಲಯ (court) ತನ್ನ ತೀರ್ಪನ್ನು ಪ್ರಕಟಿಸಿದೆ.

ವಿಚಾರಣೆ ನಡೆಸಿದ ನ್ಯಾಯಾಲಯವು 12 ವರ್ಷಗಳ ಬಳಿಕ ತಾರಾ ದಂಪತಿಗೆ ಶಿಕ್ಷೆ ನೀಡಿದೆ. ತೆಲಂಗಾಣದ ನಾಂಪಲ್ಲಿಯ 17ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜುಲೈ 18, ಮಂಗಳವಾರ ರಾಜಶೇಖರ್‌ ಜೀವಿತಾ ದಂಪತಿಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿದೆ. ಜೊತೆಗೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ.

ಪ್ರಕರಣದ ವಿವರ:
ಮೆಗಾ ಸ್ಟಾರ್‌ ಚಿರಂಜೀವಿ ಹೈದರಾಬಾದ್‌ನಲ್ಲಿ ಬ್ಲಡ್‌ ಬ್ಯಾಂಕ್‌ ಸ್ಥಾಪಿಸಿದ್ದು ಈ ರಕ್ತನಿಧಿ ಮೂಲಕ ಅಗತ್ಯವಿರುವವರಿಗೆ ಜನರ ಸೇವೆ ಮಾಡುತ್ತಾ ಬಂದಿದ್ದಾರೆ.ಆದರೆ, ಚಿರಂಜೀವಿ ಬ್ಲಡ್ ಬ್ಯಾಂಕ್ ಸಂಗ್ರಹಿಸಿದ ರಕ್ತವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಜೀವಿತಾ ಮತ್ತು ರಾಜಶೇಖರ್ (Tollywood actor Rajshekhar) ಮಾಧ್ಯಮದವರ ಮುಂದೆ ಆರೋಪ ಮಾಡಿದ್ದರು.2011ರಲ್ಲಿ ಕಾರ್ಯಕ್ರಮವೊಂದರ ಸುದ್ದಿಗೋಷ್ಠಿಯಲ್ಲಿ ಜೀವಿತಾ ಹಾಗೂ ರಾಜಶೇಖರ್‌ ದಂಪತಿ ನಟ ಚಿರಂಜೀವಿ (Actor Chiranjeevi) ಹಾಗೂ ಕುಟುಂಬದ ವಿರುದ್ಧ ಆರೋಪಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಾಪಕ ಅಲ್ಲು ಅರವಿಂದ್ (Allu Aravind) ಅವರು ಕೋರ್ಟ್ ಮೆಟ್ಟಿಲೇರಿದ್ದು, ಚಿರಂಜೀವಿ ಹೆಸರಿನಲ್ಲಿ ನಡೆಯುತ್ತಿರುವ ಸೇವಾ ಕಾರ್ಯಕ್ರಮಗಳು ಮತ್ತು ಟ್ರಸ್ಟ್‌ಗಳ ಸೇವೆ ವಿರುದ್ಧ ಅಸತ್ಯ ಆರೋಪಗಳನ್ನು ಮಾಡಿದ್ದಾಗಿ ದಂಪತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಚಿರಂಜೀವಿ ಹೆಸರಿಗೆ ಮಸಿ ಬಳಿಯುವ ಯತ್ನದಲ್ಲಿ ಜೀವಿತಾ ಹಾಗೂ ರಾಜಶೇಖರ್‌ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯವು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿತು. ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿತು. ದಂಡ ಪಾವತಿಸಿದ ನಂತರ, ಈ ತೀರ್ಪಿನ ವಿರುದ್ಧ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಲು ಅವಕಾಶ ಸಿಕ್ಕಿದ್ದು, ಇಬ್ಬರಿಗೂ 10 ಜನರ ಶೂರಿಟಿ ನೀಡಿದ್ದಕ್ಕೆ ನ್ಯಾಯಾಲಯವು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶದೊಂದಿಗೆ ದಂಪತಿಗೆ ಜಾಮೀನು ನೀಡಿತು.

 

ಇದನ್ನು ಓದಿ:  Traffic Rules break: ಬೈಕ್ ನ ಮುಂಭಾಗ ತಿರುಗಿ ಕುಳಿತು ಹುಡುಗನ್ನ ಬಿಗಿದಪ್ಪಿ ಸವಾರಿ ಮಾಡಿದ ಹುಡುಗಿ, ವೈರಲ್ ವೀಡಿಯೋಗೆ ಟ್ರಾಫಿಕ್ ರಿಯಾಕ್ಟ್

You may also like

Leave a Comment