Home » Suicide: ಮಗನ ಫೀಸು ಭರಿಸಲು ಅಮ್ಮನ ತ್ಯಾಗ ; ಸತ್ತರೆ ದುಡ್ಡು ಸಿಗತ್ತೆ ಎಂದು ಬಸ್ಸಿನಡಿಗೆ ಬಿದ್ದು ಪ್ರಾಣ ಬಿಟ್ಟ ಮಹಾತಾಯಿ !

Suicide: ಮಗನ ಫೀಸು ಭರಿಸಲು ಅಮ್ಮನ ತ್ಯಾಗ ; ಸತ್ತರೆ ದುಡ್ಡು ಸಿಗತ್ತೆ ಎಂದು ಬಸ್ಸಿನಡಿಗೆ ಬಿದ್ದು ಪ್ರಾಣ ಬಿಟ್ಟ ಮಹಾತಾಯಿ !

0 comments
Suicide

Suicide : ಮಗನ ಕಾಲೇಜು ಫೀಸ್ ಕಟ್ಟಲು ಹಣವಿರಲಿಲ್ಲ. ಹಾಗಾಗಿ ತಾನು ಸತ್ತರೆ ಮಗನಿಗೆ ದುಡ್ಡು ಸಿಗತ್ತೆ ಅಂತ ಮ‌ಹಾತಾಯಿಯೊಬ್ಬಳು ಬಸ್ಸಿನಡಿ ಬಿದ್ದು ಪ್ರಾಣತ್ಯಾಗ (Suicide) ಮಾಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಅಮ್ಮನ ಪ್ರೀತಿ ದೊಡ್ಡದಾ ಅಥವಾ ಇದು ದುಡುಕಿನ ನಿರ್ಧಾರವೇ, ಏನೂ ಹೇಳಲು ತೋಚಲಾರದಂತಹ ಈ ಘಟನೆಯು ಎಲ್ಲರನ್ನೂ ತಲ್ಲಣಗೊಳಿಸಿದೆ.

ತಾಯಿ ಮಕ್ಕಳಿಗೊಸ್ಕರ, ಮಕ್ಕಳ ಭವಿಷ್ಯಕ್ಕೋಸ್ಕರ ತನ್ನ ಪ್ರಾಣವನ್ನೇ ಮುಡಿಪಾಗಿಡುತ್ತಾಲೇ ಎಂಬ ಮಾತಿಗೆ ಈ ಘಟನೆ ಸಾಕ್ಷಿಯಾಗಿದೆ. ಹೌದು, ಈ ಮಹಾತಾಯಿ ಮಗನ ಶಿಕ್ಷಣಕ್ಕಾಗಿ ಹಣ ಹೊಂದಿಸಲು ಬಸ್ಸಿನಡಿಗೆ ಬಂದು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಧರ್ಮಸ್ಥಳ ಸೌಜನ್ಯ ಪ್ರಕರಣ: ದೂರದ ಮೈಸೂರಲ್ಲಿ ಹೋರಾಟ – ದಕ್ಷಿಣ ಕನ್ನಡದ ಶಾಸಕ, ಸಂಸದ, ಮಂತ್ರಿ, ಮಠಾಧೀಶರ ಅಸಹನೀಯ ರಣ ಮೌನ !

ಈಕೆ ಸೇಲಂ ಜಿಲ್ಲೆಯ ಕಲೆಕ್ಟರ್ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಈಕೆಯ ಬಳಿ ಮಗನ ಕಾಲೇಜ್ ಫೀಸ್ ಕಟ್ಟುವಷ್ಟು ಹಣವಿರಲಿಲ್ಲ. ಹಾಗಾಗಿ ಯಾರೋ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬಕ್ಕೆ 45,000 ರೂ. ಸಿಗುತ್ತದೆ ಎಂದಿದ್ದರು. ಮುಗ್ಧ ಮಹಿಳೆ ಮಗನ ಭವಿಷ್ಯಕ್ಕಾಗಿ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ.

ಅದಕ್ಕಾಗಿ ಚಲಿಸುತ್ತಿದ್ದ ಬಸ್ ಮುಂದೆ ಬಂದು ಬಿದ್ದಿದ್ದಾರೆ. ಈ ಮೂಲಕ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಈ ಘಟನೆ ಬಗ್ಗೆ ಪ್ರಶ್ನಿಸಿ ಆಕ್ರೋಶ, ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಯುತ್ತಿದ್ದಾರೆ.

ಆದರೂ ಘಟನೆಯ ಕುರಿತು ವಿವಿಧ ರೀತಿಗಳಲ್ಲಿ ಯೋಚಿಸಿದರೆ, ಮುಗ್ಧ ಮಹಿಳೆಗೆ ಫೀಸ್ ಕಟ್ಟಲು ಬೇರೆ ದಾರಿಗಳಿದ್ದವು. ಜೀವನ ಅಂತ್ಯ ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದೆನಿಸುತ್ತದೆ. ಇನ್ನು ಕಾಲೇಜು ಫೀಸ್ ಕೇಳಬೇಕಿಲ್ಲ, ಇತ್ತೀಚಿನ ದಿನದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಯುವಕರ ಕಾಲೇಜು ಶುಲ್ಕ ಭಾರಿ ದುಬಾರಿಯಾಗಿದೆ. ಬಡಜನಗಳಿಗೆ ಈ ಶುಲ್ಕ ಹೊರಲಾರದ ಭಾರವಾಗಿದೆ. ಒಟ್ಟಾರೆ ಶುಲ್ಕವೇ ಮಹಿಳೆಯ ಸಾವಿಗೆ ಕಾರಣವಾಯಿತು!.

ಇದನ್ನು ಓದಿ: PM Kisan Yojana: ಪಿಎಂ ಕಿಸಾನ್ 14 ನೇ ಕಂತಿಗೆ ಮುಂಚೆ ರೈತರಿಗೆ ಬಿಗ್ ನ್ಯೂಸ್ ! ಖುಷಿ ಸುದ್ದಿ ಪ್ರಕಟಿಸಿದ ಕೇಂದ್ರ ಕೃಷಿ ಸಚಿವ ! 

You may also like

Leave a Comment