Home » Bigg Boss: ಬಿಗ್ ಬಾಸ್ ಗೆ ಕ್ಷಣಗಣನೆ, ಬಿಗ್ ಮನೆಗೆ ಹೋಗಲಿದ್ದಾರೆ ಭಾರತದ ಈ ಫೇಮಸ್ ಕ್ರಿಕೆಟಿಗ !

Bigg Boss: ಬಿಗ್ ಬಾಸ್ ಗೆ ಕ್ಷಣಗಣನೆ, ಬಿಗ್ ಮನೆಗೆ ಹೋಗಲಿದ್ದಾರೆ ಭಾರತದ ಈ ಫೇಮಸ್ ಕ್ರಿಕೆಟಿಗ !

0 comments
Bigg Boss

Bigg Boss: ಹಲವಾರು ಭಾಷೆಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರೋ ಬಿಗ್ ಬಾಸ್ ರಿಯಾಲಿಟಿ ಶೋ ಸದ್ಯ ಮಲಯಾಳಂ, ಕನ್ನಡ, ತೆಲುಗು, ಹಿಂದಿ ಸೇರಿ ಅನೇಕ ಭಾಷೆಗಳಲ್ಲಿ ಈ ಶೋ ನಡೆಸಲಾಗುತ್ತಿದೆ. ಇದೀಗ ತೆಲುಗು ಬಿಗ್ ಬಾಸ್ (Bigg Boss) ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಆಗಮಿಸಲಿದ್ದಾರೆ.

ಹೌದು, ತೆಲುಗಿನ ಕಿರುತೆರೆಯಲ್ಲಿ ಸಂಚಲನ ಮೂಡಿಸಿರುವ ‘ಬಿಗ್ ಬಾಸ್’ (Bigg Boss) ರಿಯಾಲಿಟಿ ಶೋ ಮತ್ತೆ ಬರುತ್ತಿದೆ. ಈಗಾಗಲೇ ಆರು ಸೀಸನ್​​ಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಮೆಗಾ ಟಿವಿ ಶೋ, ಈ ಬಾರಿ ಇನ್ನಷ್ಟು ಭಾವುಕತೆಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಸುಮಾರು 3 ತಿಂಗಳ ಕಾಲ ನಡೆಯುವ ಈ ಮನರಂಜನಾ ಕಾರ್ಯಕ್ರಮಕ್ಕಾಗಿ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 7 (Telugu Bigg Boss 7) ಯಾವಾಗ ಪ್ರಾರಂಭವಾಗುತ್ತದೆ? ಈ ಬಾರಿ ಮನೆ ಪ್ರವೇಶಿಸುತ್ತಿರುವ ಸ್ಪರ್ಧಿಗಳು ಯಾರು? ಎಂಬ ದೊಡ್ಡ ಚರ್ಚೆ ನಡೆಯುತ್ತಿದೆ. ಈ ನಡುವೆ ಇದೇ ವಿಷಯಕ್ಕೆ ಸಂಬಂಧಿಸಿ ಸುದ್ದಿಯೊಂದು ವೈರಲ್ ಆಗುತ್ತಿದೆ.

ಅದೇನೆಂದರೆ ಈ ಬಾರಿಯ ಮೆಗಾ ಶೋಗೆ ಭಾರತ ಕ್ರಿಕೆಟಿಗರೊಬ್ಬರು ಪ್ರವೇಶ ನೀಡಲಿದ್ದಾರೆ ಎನ್ನಲಾಗಿದೆ. ಟೀಂ ಇಂಡಿಯಾದ (Team India) ಮಾಜಿ ಕ್ರಿಕೆಟಿಗ, ಆಂಧ್ರದ ಆಟಗಾರ ವೈ. ವೇಣುಗೋಪಾಲ ರಾವ್ (Venugopal Rao) ಅವರು, ಈ ಮೆಗಾ ಶೋಗೆ ಆಗಮಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕಾಗಿ ಬಿಗ್ ಬಾಸ್ ವ್ಯವಸ್ಥಾಪಕರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತೆಲುಗಿನ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದೇ ನಿಜವಾದರೆ ವೇಣುಗೋಪಾಲ ರಾವ್, ಬಿಗ್ ಬಾಸ್ ಪ್ರವೇಶಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ನಿರ್ಮಿಸಲಿದ್ದಾರೆ.

ಭಾರತ ತಂಡದಲ್ಲಿ ಆಡಿದ ಕೆಲವೇ ಕೆಲವು ತೆಲುಗು ಕ್ರಿಕೆಟಿಗರಲ್ಲಿ ವೇಣು ಕೂಡ ಒಬ್ಬರು. ಅವರು ಐಪಿಎಲ್‌ನ ಆರಂಭದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಪರ ಆಡಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದರು. ಟೀಂ ಇಂಡಿಯಾ ಪರ ಕೇವಲ 16 ಏಕದಿನ ಪಂದ್ಯಗಳನ್ನಾಡಿದ್ದು, 2005ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಅದೇ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯ ಆಡಿದ್ದರು.

ಅಲ್ಲದೇ ಐಪಿಎಲ್ (2008-2014) ನಲ್ಲಿ 65 ಪಂದ್ಯಗಳನ್ನಾಡಿದ್ದು, 985 ರನ್, 6 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಅವರು ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತ ತಂಡದ ಜೊತೆಗೆ ವೇಣು ಐಪಿಎಲ್ ಪಂದ್ಯಗಳಿಗೆ ತೆಲುಗು ಕಾಮೆಂಟರಿಯನ್ನೂ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಜನಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸದ್ಯ ಕ್ರಿಕೆಟ್​ನಿಂದ ದೂರವಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.

ಈ ಬಾರಿಯೂ ಬಿಗ್ ಬಾಸ್ 7ನೇ ಸೀಸನ್​ ಅನ್ನು ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರೇ ನಡೆಸಿಕೊಡಲಿದ್ದಾರೆ. ಆದರೆ, ವೇಣು ಅವರು ಬಿಗ್ ಬಾಸ್ ಪ್ರವೇಶದ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳಬೇಕಿದೆ.

 

ಇದನ್ನು ಓದಿ: Types of Tears: ನೀವು ಸುಖ ನೆಮ್ಮದಿಯಿಂದ ಇರಬೇಕಾ, ಹಾಗಾದ್ರೆ ನೀವು ಕಣ್ಣೀರು ಹಾಕಲೇ ಬೇಕು ! 

You may also like

Leave a Comment