Elephant: ಮನುಷ್ಯ ಸಮಯ ಸಂದರ್ಭಕ್ಕೆ ತಕ್ಕಂತೆ ವರ್ತಿಸುವುದು ಸಹಜ. ಆಪತ್ತು ಬಂದಾಗ ತಾನು ಮೊದಲು ಬದುಕಿದರೆ ಸಾಕೆಂದು ಕಾಲು ಕಿತ್ತು ಓಡುತ್ತಾನೆ. ಆದರೆ ಇಲ್ಲೊಂದು ಘಟನೆ ನೋಡಿ ಬೆರಗಾಗೋದು ಗ್ಯಾರಂಟಿ.
ಹೌದು, ಅದ್ದೂರಿಯಾಗಿ ನಡೆಯುತ್ತಿದ್ದ
ಮದುವೆ (marriage) ಸಮಾರಂಭ ನಡೆಯುತ್ತಿದ್ದ ವೇಳೆ ಆನೆಗಳು (Elephant) ರಾಂಗ್ ಎಂಟ್ರಿ ಕೊಟ್ಟಿದೆ. ಆದರೆ ಏಕಾಏಕಿ ಬಂದ ಆನೆ ಗುಂಪು ನೋಡಿ ಮದುವೆ ಮನೆಯಲ್ಲಿದ್ದವರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿದ ಘಟನೆ ನಡೆದಿದೆ.
ಕೋಲ್ಕತ್ತಾದ ಝಾರ್‌ಗ್ರಾಮ್ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಮನೆಯೊಂದರಲ್ಲಿ ತನ್ಮೋಯ್ ಸಿಂಘ ಹಾಗೂ ಮಂಪಿ ಎಂಬಿಬ್ಬರ ಮದುವೆ ಸಮಾರಂಭ ನಡೆಸಲಾಗಿತ್ತು. ಆದರೆ ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಆನೆಗಳ ಪುಂಡು ಮದುವೆ ಮನೆಗೆ ಲಗ್ಗೆಯಿಟ್ಟಿದ್ದು, ಮದುವೆಗೆ ಆಗಮಿಸಿದ್ದ ಅತಿಥಿಗಳು ಸೇರಿದಂತೆ ಮನೆಯವರೆಲ್ಲ ಆನೆಗಳನ್ನು ನೋಡಿ ಎದ್ನೋ ಬಿದ್ನೋ ಎಂದು ಓಡಿದ್ದು, ಆನೆಗಳ ದಾಳಿಯಿಂದ ರಕ್ಷಿಸಿಕೊಂಡಿದ್ದಾರೆ. ಆದರೆ ನೀನಿಲ್ಲದೆ ನಾನಿಲ್ಲ ಅಂತಾ, ವರ ವಧುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಓಡಿ ಹೋಗಿದ್ದಾನೆ .
ಮಾಹಿತಿ ಪ್ರಕಾರ, ಮದುವೆ ಮನೆಯಲ್ಲಿ ಮಾಡಿಸಿದ್ದ ಅಡುಗೆಯ ಘಮವನ್ನು ಕಂಡು ಹಿಡಿದು ಆನೆಗಳು ಬಂದಿದೆ ಎನ್ನಲಾಗಿದೆ.
ಈ ಪ್ರದೇಶದಲ್ಲಿ ಆನೆಗಳ ಹಾವಳಿಯ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಆನೆಗಳ ದಾಳಿಯಿಂದ ತಪ್ಪಿಸಲು ಆರತಕ್ಷತೆ ಕಾರ್ಯಕ್ರಮವನ್ನೂ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಅದಲ್ಲದೆ ಈ ಘಟನೆ ನಡೆದ ಬಳಿಕವಂತೂ ನಿಗದಿಪಡಿಸಿದ ಹಲವಾರು ಮದುವೆಗಳು ಭಯದಿಂದಲೇ ಮುಂದೂಡಲ್ಪಟ್ಟಿವೆ ಎಂದು ತಿಳಿದು ಬಂದಿದೆ.
