Home » Breaking News: ರಮ್ಯಾ ಟೀಚರ್ ವಿರುದ್ಧ ಗೆದ್ದ ಹಾಸ್ಟೆಲ್ ಹುಡುಗ್ರು, ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ !

Breaking News: ರಮ್ಯಾ ಟೀಚರ್ ವಿರುದ್ಧ ಗೆದ್ದ ಹಾಸ್ಟೆಲ್ ಹುಡುಗ್ರು, ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ !

by ಹೊಸಕನ್ನಡ
0 comments
Breaking News

Actress Ramya: ನಟಿ ರಮ್ಯಾ (Actress Ramya) ಅವರ ಅನುಮತಿ ಇಲ್ಲದೇ ತಮ್ಮ ಫೋಟೋ ಮತ್ತು ವಿಡಿಯೋವನ್ನು ‘ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ರಮ್ಯಾ (Ramya) ಅವರು ಕೋರ್ಟ್ ಮೆಟ್ಟಲೇರಿದ್ದರು. ವಿಶೇಷವೆಂದರೆ ಹಾಸ್ಟೆಲ್ ಹುಡುಗರು ಚಿತ್ರದಲ್ಲಿ ನಟಿ ರಮ್ಯಾ ನಟಿಸಿದ್ದಾರೆ. ತಾವು ನಟಿಸಿದ ಚಿತ್ರದ ವಿರುದ್ಧವೇ ರಮ್ಯ ಕೋರ್ಟು ಮೆಟ್ಟಲು ಏರಿದ್ದು ವಿಶೇಷವಾಗಿದೆ.

ಇಂದು ಈ ವಿಚಾರಣೆ ಕೋರ್ಟಿನಲ್ಲಿ ನಡೆದಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದೆ. ನಟಿ ರಮ್ಯಾ(Ramya) ಎದುರು ಹಾಸ್ಟೆಲ್ ಹುಡುಗರು ಜಯ ಗಳಿಸಿದ್ದಾರೆ. ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ನಾಯಾಲಯ ವಜಾಗೊಳಿಸಿದೆ. ನಿನ್ನೆ ಈ ಸಂಬಂಧಿತ ಅರ್ಜಿ ಕೋರ್ಟ್ ಮುಂದೆ ಬಂದಿತ್ತು. ಆದರೆ ಈ ವಿಚಾರಣೆಯನ್ನು ಒಂದು ದಿನ ಮುಂದಕ್ಕೆ ಹಾಕಿ, ಮತ್ತೆ ಇವತ್ತು ಕೈಗೆತ್ತಿಕೊಂಡಿತ್ತು.

ಮೋಹಕ ತಾರೆ ರಮ್ಯ ತಮ್ಮ ಪರ್ಮಿಷನ್ ಇಲ್ಲದೆ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಹಾಸ್ಟೆಲ್ ಹುಡುಗರು ತಂಡ ಬಳಸಿಕೊಂಡಿದೆ ಎಂದು ಚಿತ್ರ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದರು. ತಮ್ಮ ಅನುಮತಿ ಇಲ್ಲದೇ ಫೋಟೋ ಮತ್ತು ವಿಡಿಯೋ ಬಳಸಿಕೊಂಡಿದ್ದಕ್ಕೆ ಪರಿಹಾರವಾಗಿ 1 ಕೋಟಿ ರೂಪಾಯಿ ನೀಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಿದ್ದರು.

“ಸಿನಿಮಾ ಪ್ರಮೋಷನ್‌ಗಾಗಿ ಪ್ರೋಮೋದಾಲ್ಲಿ ನಾನು ಭಾಗಿಯಾಗಿದ್ದೆ. ನನ್ನಅನುಮತಿ ಇಲ್ಲದೆ ಶೂಟಿಂಗ್‌ ದೃಶ್ಯಗಳನ್ನು ಬಳಸಬಾರದು ಎಂದು ಕಂಡಿಷನ್‌ ಹಾಕಿದ್ದೆ. ಆದರೆ ಚಿತ್ರತಂಡ ಅದನ್ನು ಪರಿಗಣಿಸಿಲ್ಲ. ನನಗೆ ತಿಳಿಸದೆ ಅನುಮತಿ ಪಡೆಯದೆ ಟ್ರೇಲರ್‌ನಲ್ಲಿ ಬಹಳಷ್ಟನ್ನು ಬಳಸಿಕೊಂಡಿದೆ. ಹಾಗಾಗಿ ಪರಿಹಾರವಾಗಿ ನನಗೆ 1 ಕೋಟಿ ರೂಪಾಯಿ ನೀಡಬೇಕು ” ಎಂದು ರಮ್ಯಾ ನೋಟಿಸ್‌ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ನಾಳೆ ಜುಲೈ 21 ರಂದು ಸಿನಿಮಾ ರಿಲೀಸ್‌ ಆಗುತ್ತಿದ್ದು, ಕೊನೆ ಕ್ಷಣದಲ್ಲಿ ಈಗ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿತ್ತು. ಕೊನೆಯ ಕ್ಷಣಗಳಲ್ಲಿ ನಿರ್ದೇಶಕ ರಕ್ಷಿತ್ ಶೆಟ್ಟಿ ರಮ್ಯಾ ಮನವೊಲಿಸಲು ಪ್ರಯತ್ನ ಪಟ್ಟಿದ್ದರು. ಈ ಸಮಯದಲ್ಲಿ ಚಿತ್ರತಂಡ ರಮ್ಯಾ ಅಭಿನಯದ ಕಂಟೆಂಟ್‌ಗಳನ್ನು ತೆಗೆಯಬೇಕು , ಯೂಟ್ಯೂಬ್‌ನಿಂದ ಕೂಡಾ ಟ್ರೇಲರ್‌ ಡಿಲೀಟ್‌ ಮಾಡುವಂತೆ ಹೇಳಿರುವುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದೀಗ ಕೋರ್ಟು ತೀರ್ಪಿನ ನಂತರ ಎಲ್ಲವೂ ತಿಳಿಯಾಗಿದೆ.

ಇಂದು ಕೋರ್ಟ್’ನಲ್ಲಿ ನಡೆದ ವಿಚಾರಣೆಯಲ್ಲಿ ಹಾಸ್ಟೆಲ್ ಹುಡುಗರ ಪರ ಆದೇಶ ಹೊರ ಬಂದಿದ್ದು, ನಾಳೆ ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ರಿಲೀಸ್ ಆಗಲಿದ್ದಾರೆ. ಹಾಸ್ಟೆಲ್ ಹುಡುಗರ ಪರ ವಕೀಲ ವೇಲನ್ ಅವರು ವಾದ ಮಾಡಿದ್ದು, ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

ರಮ್ಯಾ ಜತೆ ಅನೇಕ ಸ್ಟಾರ್ ನಟ-ನಟಿಯರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಗಂತ್ ಸೇರಿದಂತೆ ಹಲವರು ಜನ ಈ ತಾರಾ ಗಣದಲ್ಲಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ಟೀಚರ್ – ಉಪನ್ಯಾಸಕಿಯ ಪಾತ್ರ ಮಾಡಿದ್ದಾರೆ. ಈ ಪಾತ್ರದ ವಿರುದ್ದವೇ ಅವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ತಾವು ನಟಿಸಿದ ಚಿತ್ರದ ವಿರುದ್ಧವೇ ರಮ್ಯ ಕೋರ್ಟು ಮೆಟ್ಟಲು ಏರಿದ್ದು ವಿಶೇಷವಾಗಿದೆ.

 

ಇದನ್ನು ಓದಿ: Bath room Tips: ಮನೆಯ ಎಲ್ಲರೂ ಒಂದೇ ಸೋಪ್ ಬಳಸಬೇಕಾ, ಬೇಡವಾ ? ಇಂಟರೆಸ್ಟಿಂಗ್ ಮಾಹಿತಿ ! 

You may also like

Leave a Comment