Liquor Rate Hike: ರಾಜ್ಯ ಸರ್ಕಾರವು ಮಧ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ. ಅಂತೆಯೇ ಇಂದಿನಿಂದ ಮದ್ಯಪ್ರಿಯರಿಗೆ ಬೆಲೆ ಏರಿಕೆ (Liquor Rate Hike) ಬಿಸಿ ತಟ್ಟಲಿದೆ. ಇಂದಿನಿಂದ ಮದ್ಯ ದರ ಶೇ. 20 ರಷ್ಟು ಹೆಚ್ಚಳ ಆಗಲಿದೆ.
ಈಗಾಗಲೇ ಮದ್ಯದ ಬೆಲೆಯ ಏರಿಕೆಯ ಬಗ್ಗೆ ರಾಜ್ಯ ಬಜೆಟ್ ನಲ್ಲಿ (Budget) ಸಿಎಂ(CM Siddaramaiah) ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ರಾಜ್ಯ ಬಜೆಟ್ನಲ್ಲಿ ಮದ್ಯದ ಮೇಲಿನ ತೆರಿಗೆ ಹೆಚ್ಚಳವಾಗಲಿದೆ ಎನ್ನುವ ಮೂಲಕ ಮದ್ಯ ಪ್ರಿಯರಿಗೆ ಶಾಕ್ ನೀಡಿದ ಸುದ್ದಿ ಎಲ್ಲರಿಗೂ ತಿಳಿದೇ ಇದೆ.
ಹಾಗಾಗಿ (ಜುಲೈ 21) ಇಂದಿನಿಂದಲೇ ಮದ್ಯದ ದರ ಹೆಚ್ಚಾಗಲಿದೆ.
2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಇಂದಿನಿಂದ ಜಾರಿಯಾಗಲಿದೆ. ರಾಜ್ಯದಲ್ಲಿ ಇಂದಿನಿಂದಲೇ ಶೇ. 20 ರಷ್ಟು ದರ ಹೆಚ್ಚಳವಾಗಲಿದೆ.
ಹಾಗಾದ್ರೆ ನಿಮ್ಮ ಬ್ರಾಂಡಿನ ಬೆಲೆ ಎಷ್ಟಾಗಿದೆ ತಿಳ್ಕೋಬೇಕಾ ? ಇಲ್ಲಿದೆ ಮಾಹಿತಿ.
ಶೇ.20ರಷ್ಟು ಹೆಚ್ಚಿನ ಹಿನ್ನೆಲೆಯಲ್ಲಿ ಗರಿಷ್ಠ ದರದೊಂದಿಗೆ ಹೊಸ ಬೆಲೆಯಲ್ಲಿ ಶುಕ್ರವಾರ ರದಿಂದ ಮದ್ಯ ಮಾರಾಟವಾಗಲಿದೆ. ಬ್ರಾಂಡಿ (Brandy), ವಿಸ್ಕಿ (Vicki), ರಮ್ (Rum), ಜಿನ್ ಸೇರಿದಂತೆ ಎಲ್ಲ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಫ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇ.20 ಹೆಚ್ಚಳವಾಗಲಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.175ರಿಂದ 185 ಅಂದರೆ ಶೇ.10ರಷ್ಟು ಹೆಚ್ಚಳವಾಗಲಿದೆ. ಭಾರತೀಯ ಮದ್ಯ (ಐಎಂಎಲ್) ಒಂದು ಪೆಗ್ (60 ಎಂಎಲ್ )ಗೆ 10ರಿಂದ 20 ರೂ. ಹಾಗೂ ಬಿಯರ್ ಬೆಲೆ ಪ್ರತಿ ಬಾಟಲ್ಗೆ 10 % ಹೆಚ್ಚಳವಾಗಲಿದೆ.
ಯಾವ ಮದ್ಯಕ್ಕೆ ಎಷ್ಟೆಷ್ಟು ದರ ಏರಿಕೆ ಆಗಬಹುದು?
ಬಿಯರ್- ಸದ್ಯದ ದರ 230ರೂ. ಇದ್ದು 253 ರೂ. ಆಗಬಹುದು
ರಾಯಲ್ ಸ್ಟಾಗ್ 450 ರೂ. ಇದೆ 500. ರೂ ಆಗಬಹುದು
Imperial blue-300 ರೂ. ಇದ್ದು 360 ರೂ. ಆಗಬಹುದು
ಬ್ರಾಂಡಿ- mansion house-300 ರೂ. ಇದ್ದು 350 ರೂ. ಆಗಬಹುದು
ವೋಡ್ಕಾ- 300 ರೂ. ಇದೆ 350 ರೂ. ಆಗಬಹುದು
Black dog full-3360 ರೂ. ಇದೆ 4000 ರೂ. ಆಗಬಹುದು
Vat69-3300 ಇದೆ ರೂ. 4000 ರೂ. ಆಗಬಹುದು
ರಾಯಲ್ ಚ್ಯಾಲೆಂಜ್- ಸದ್ಯದ ದರ 450 ರೂ ಇದ್ದು 500 ರೂ. ಆಗಬಹುದು
Mc ವಿಸ್ಕಿ-300 ರೂ. ಇದೆ 360 ರೂ ಆಗಬಹುದು.
ಬಟ್ ವೈಸರ್- 240 ಕ್ಕೆ ಏರಿಕೆ
ಬ್ಲಾಕ್ ಆಯಂಡ್ ವೈಟ್- 2,800 ಕ್ಕೆ ಏರಿಕೆಯಾಗಲಿದೆ.
ಕಿಂಗ್ ಫಿಷರ್ ಪ್ರಿಮಿಯನ್ -190 ಕ್ಕೆ ಏರಿಕೆ
ಬ್ಯಾಕ್ ಪೇಪರ್ ವಿಸ್ಕಿ -120 ಕ್ಕೆ ಏರಿಕೆ
ಓಲ್ಡ್ ಮಂಕ್ -155 ರೂಗೆ ಏರಿಕೆಯಾಗಲಿದೆ.
