Home » Marriage: 14 ಅದ್ಭುತ ವರರ ಪಟ್ಟಿಯಲ್ಲಿ ಯಾರನ್ನ ಆಯ್ಕೆ ಮಾಡಲಿ ? ಗೊಂದಲಕ್ಕೆ ಬಿದ್ದ ಹುಡುಗಿಗೆ ಬೇಕಿದೆ ನಿಮ್ಮ ಸಹಾಯ !

Marriage: 14 ಅದ್ಭುತ ವರರ ಪಟ್ಟಿಯಲ್ಲಿ ಯಾರನ್ನ ಆಯ್ಕೆ ಮಾಡಲಿ ? ಗೊಂದಲಕ್ಕೆ ಬಿದ್ದ ಹುಡುಗಿಗೆ ಬೇಕಿದೆ ನಿಮ್ಮ ಸಹಾಯ !

0 comments
Marriage

Marriage: ಮದುವೆ (Marriage) ಅನ್ನೋದು ಜೀವನದಲ್ಲಿ ಅಮೂಲ್ಯವಾದ ಘಟ್ಟ. ಅದರಲ್ಲೂ 3+3=6 ಅಂದರೆ, ಅಲ್ಲ 33 ಆಗುತ್ತೆ ಅನ್ನೋ ಈ ಆಧುನಿಕ ಯುಗದಲ್ಲಿ ಹುಡುಗಿ ಆಗಲಿ, ಹುಡುಗ ಆಗಲಿ ತಮ್ಮ ಸಂಗಾತಿಯನ್ನು ಹುಡುಕೋದು ಸ್ವಲ್ಪ ಕಷ್ಟವೇ ಬಿಡಿ. ಯಾಕೆಂದರೆ ಕ್ವಾಲಿಟಿ ಎಲ್ಲರಲ್ಲೂ ಇರುತ್ತೆ, ಆದ್ರೆ ಕೆಲವೊಮ್ಮೆ ಕ್ವಾ0ಟಿಟಿ ನೋಡುವಾಗ ಕೆಲವರನ್ನು ರಿಜೆಕ್ಟ್ ಮಾಡಲೇ ಬೇಕಾಗುತ್ತೆ. ಅದೇ ರೀತಿ ಯುವತಿಯೊಬ್ಬಳು ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಗೊಂದಲದಲ್ಲಿದ್ದಾಳೆ.

ಹೌದು, ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾದ 14 ವರಗಳಲ್ಲಿ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಲು ಸಹಾಯ ಕೋರಿ ಎಂದು ಯುವತಿ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಇದನ್ನು ನೋಡಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ.

ಪೋಸ್ಟ್ ನಲ್ಲಿ, ನಾನು 29 ವರ್ಷದ ಬಿಕಾಂ ಪದವೀಧರೆ. ಸದ್ಯಕ್ಕೆ ನಾನು ಯಾವುದೇ ಕೆಲಸ ಮಾಡುತ್ತಿಲ್ಲ. ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ ಮೂಲಕ 14 ಯುವಕರೊಂದಿಗೆ ಸಂಪರ್ಕದಲ್ಲಿದ್ದೇನೆ. ಆದರೆ, ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿದ್ದೇನೆ. ನೀವು ನನಗೆ ಸಹಾಯ ಮಾಡಿ ಎಂದು, @TheSquind ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾಳೆ.

ಈಕೆಯ ಪರಿಚಿತ 14 ಯುವಕರ ಸಂಬಳ ಹಾಗೂ ಅವರು ಕೆಲಸ ಮಾಡುವ ಕಂಪನಿಯ ಮಾಹಿತಿಯನ್ನು ಯುವತಿ ಪೋಸ್ಟ್​ ಮಾಡಿದ್ದಾಳೆ. ಅದರ ಪ್ರಕಾರ ಆಕೆಗೆ ಪರಿಚಯವಾಗಿರುವ 14 ವರರೂ 14 ರಿಂದ 45 ಲಕ್ಷ ರೂ. ವರೆಗೂ ವಾರ್ಷಿಕ ಸಂಬಳ ಪಡೆಯುತ್ತಾರೆ. ಅವರೆಲ್ಲರೂ ಬೈಜಸ್, ಫ್ಲಿಪ್‌ಕಾರ್ಟ್, ಡೆಲಾಯ್ಟ್ ಮತ್ತು ಟಿಸಿಎಸ್‌ನಂತಹ ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಖತ್ ಲಿಸ್ಟ್ ರೆಡಿ ಆಗಿದೆ ಬಿಡಿ. ಇದರಲ್ಲೂ ದಿ ಬೆಸ್ಟ್ ಆಯ್ಕೆ ಮಾಡೋದು ಬಾಕಿ ಉಳಿದಿರೋ ಕೆಲಸ.

ಈಕೆಯ ಕಂಪ್ಯೂಸ್ ಏನೋ ನ್ಯಾಯವಾದುದು, ಬನ್ನಿ ಈಕೆಗೆ ಸ್ವಲ್ಪ ಸಹಾಯ ಮಾಡೋಣ, ನಮ್ಮ ಪ್ರಕಾರ ಹುಡುಗಿಯ ಊರು ಬೆಂಗಳೂರಲ್ಲಿ ಇದ್ದಾಗ ಬೆಂಗಳೂರು ಹುಡುಗನನ್ನು ಸೆಲೆಕ್ಟ್ ಮಾಡೋದು ಬೆಸ್ಟ್, ನಂತರ ತಾನು ಯಾವ ಪ್ರೊಪೆಷನಲ್ ಹುಡುಗನನ್ನು ಇಷ್ಟ ಪಡುತ್ತಿರೋ ಅವರನ್ನು ಲಿಸ್ಟ್ ಮೊದಲು ಇಡಬಹುದು, ನಂತರ ಸ್ಯಾಲರಿ, ಫಿಟ್ನೆಸ್, ಅಭಿರುಚಿ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಇಲ್ಲಿ ಉತ್ತಮ ಸಂಗಾತಿ ಆಯ್ಕೆ ಮಾಡಿಕೊಳ್ಳಬಹುದು.

ಆದರೆ ವಿಶೇಷ ಎಂದರೆ ಪೋಸ್ಟ್ ವೈರಲ್ ಆದ ನಂತರ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಪದವಿ ಮುಗಿದ ಮೇಲೆ ನೀನೇಕೆ ನೌಕರಿ ಮಾಡುತ್ತಿಲ್ಲ ಎಂದು ಕೆಲವರು ಕೇಳಿದ್ದಾರೆ. ಈ ಪ್ರಶ್ನೆಗೆ ಈಗ ಆಕೆಯೇ ಉತ್ತರ ಕೊಡಬೇಕಿದೆ.

ಒಟ್ಟಿನಲ್ಲಿ ಸಂಗಾತಿ ಆಯ್ಕೆ ವಿಚಾರದಲ್ಲಿ ಯುವತಿಯೊಬ್ಬಳು ಸಾವಿರಾರು ಬಗೆಯಲ್ಲಿ ಯೋಚಿಸುತ್ತಾರೆ ಅನ್ನೋದು 100% ಸತ್ಯ ಅಂತಾ ಇಲ್ಲೇ ಅರ್ಥ ಮಾಡಿಕೊಳ್ಳಬಹುದು.

 

 

ಇದನ್ನು ಓದಿ: ಶಿವಮೊಗ್ಗ: ರೌಡಿಶೀಟರ್ ಮೇಲೆ ಏಕಾಏಕಿ ಮುಗಿಬಿದ್ದ ದುಷ್ಕರ್ಮಿಗಳು, ತಲ್ವಾರ್ ದಾಳಿಗೆ ಬಲಿ 

You may also like

Leave a Comment