Home » Manipur Violence: ಮಣಿಪುರ ಮಹಿಳೆ ಬೆತ್ತಲೆ ಪ್ರಕರಣ: ನೀಚ ಕೃತ್ಯಕ್ಕೆ ತಕ್ಕ ಶಾಸ್ತ್ರಿ- ಆರೋಪಿ ಮನೆಗೆ ಮಹಿಳೆಯರಿಂದಲೇ ಬೆಂಕಿ !

Manipur Violence: ಮಣಿಪುರ ಮಹಿಳೆ ಬೆತ್ತಲೆ ಪ್ರಕರಣ: ನೀಚ ಕೃತ್ಯಕ್ಕೆ ತಕ್ಕ ಶಾಸ್ತ್ರಿ- ಆರೋಪಿ ಮನೆಗೆ ಮಹಿಳೆಯರಿಂದಲೇ ಬೆಂಕಿ !

0 comments
Manipur Violence

Manipur Violence: ದೇಶವೇ ತಲೆತಗ್ಗಿಸುವಂತಹ‌ ಹೀನ ಕೃತ್ಯ ಮಣಿಪುರದಲ್ಲಿ ನಡೆದಿದೆ.‌ ಸದ್ಯ ಮಣಿಪುರದಲ್ಲಿ (Manipur Violence) ಮಹಿಳೆಯರನ್ನು ಅತ್ಯಾಚಾರ ನಡೆಸಿ ಬೆತ್ತಲೆ ಮಾಡಿದ ಪ್ರಕರಣಕ್ಕೆ ಯಾರಿಂದಲೂ ನ್ಯಾಯ ಸಿಗದಿದ್ದಾಗ ಇದೀಗ ಮಹಿಳೆಯರೇ ಕೃತ್ಯವೆಸಗಿದ ನೀಚನ ಮನೆಗೆ ಬೆಂಕಿ ಹಚ್ಚಿದ್ದಾರೆ. ನೀಚನ ಕೃತ್ಯಕ್ಕೆ ಅಲ್ಪ ಮಟ್ಟದ ತಕ್ಕ ಶಾಸ್ತ್ರಿಯಾಗಿದೆ ಎಂದೇ ಹೇಳಬಹುದು.

ಮಣಿಪುರದ ಕಾಂಗ್‌ಪೋಕ್ಷಿ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಪುರುಷರ ನೇತೃತ್ವದ ಜನಸಮೂಹವು ಬೆತ್ತಲೆಯಾಗಿ ಮೆರವಣಿಗೆ ಮಾಡಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ, ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ. ಮೇ 4 ರಂದು ನಡೆದ ಈ ಆಘಾತಕಾರಿ ಘಟನೆ ಇತ್ತೀಚೆಗೆ ವೈರಲ್ ಆಗಿದ್ದು, ಘಟನೆ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಈ ಬೆನ್ನಲ್ಲೆ ಬೆತ್ತಲೆ ಮೆರವಣಿಗೆ (Manipur Video) ಪ್ರಕರಣದ ಪ್ರಮುಖ ಆರೋಪಿ ಹುಯಿರೆಮ್ ಹೆಲೋಪಾಸ್‌ ಮೈತೆ (Huirem Herodas Meite) ಮನೆಗೆ ಹಲವು ಮಹಿಳೆಯರು ಒಟ್ಟಾಗಿ ಸೇರಿ ಬೆಂಕಿ ಹಚ್ಚಿದ್ದಾರೆ. ಬುಡಕಟ್ಟು ಸಮುದಾಯದ ಉಡುಪುಗಳನ್ನು ಧರಿಸಿದ ಹೆಣ್ಣುಮಕ್ಕಳು ಆರೋಪಿಯ ಮನೆಗೆ ನುಗ್ಗಿ, ಮನೆಯಲ್ಲಿದ್ದ ಹಲವು ವಸ್ತುಗಳನ್ನು ಧ್ವಂಸಗೊಳಿಸಿ ಆತನ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಮೂಲಕ ತಮ್ಮೊಳಗೆ ಅಡಗಿದ್ದ ಆಕ್ರೋಶದ ಜ್ವಾಲೆಯನ್ನು ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಕೂಡ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಹಿಳೆಯರನ್ನು ಬೆತ್ತೆಗೊಳಿಸಿದ ಅಮಾನುಷ ಕೃತ್ಯದಲ್ಲಿ 800- 1000 ಜನ ತೊಡಗಿದ್ದರು ಎನ್ನಲಾಗಿದೆ. ಮಹಿಳೆಯರನ್ನು ಬೆತ್ತಲೆಗೊಳಿಸಿ ಬೀದಿ ಬೀದಿ ಮೆರವಣಿಗೆ ಮಾಡಿಸಿ, ಅತ್ಯಾಚಾರ ಮಾಡಿದ್ದಲ್ಲದೆ, ಘಟನೆ ತಡೆಯಲು ಬಂದ ಮಹಿಳೆಯೊಬ್ಬರ ಸಹೋದರನನ್ನೂ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪುರುಷ ಹೆಣ್ಣಿನ ರಕ್ಷಣೆ ಮಾಡುವ ಹೊರತು ಆತನೇ ಭಕ್ಷಿಸುತ್ತಿರೋದು ವಿಪರ್ಯಾಸ!.

ಎಲ್ಲಾ ರಾಜಕೀಯ ಪಕ್ಷದವರೂ ಘಟನೆ ಬಗ್ಗೆ ಬೇಸರ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ತೀವ್ರವಾಗಿ ಕುಪಿತಗೊಂಡಿದ್ದಾರೆ. ಅಲ್ಲದೆ, ಮಣಿಪುರ ಸಿಎಂ ಎನ್‌.ಬಿರೇನ್ ಸಿಂಗ್ ರಾಜೀನಾಮೆಗೆ ಒತ್ತಾಯ ಕೇಳಿಬಂದಿವೆ. ಘಟನೆ ಬಗ್ಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಮೋದಿ ಮಣಿಪುರದ ಹಿಂಸಾಚಾದ ಘಟನೆ ಕಂಡು ಅತೀವ ದುಃಖ ಉಂಟಾಗಿದೆ. ಯಾವುದೇ ನಾಗರಿಕ ಸಮಾಜಕ್ಕೆ ಇದು ನಾಚಿಕೆಗೇಡಿನ ಸಂಗತಿ. ತಪ್ಪಿತಸ್ಥರನ್ನು ಎಂದಿಗೂ ಬಿಡುವುದಿಲ್ಲ, ಘಟನೆಯ ಹಿಂದಿರುವವರನ್ನು ಖಂಡಿತ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ, ಘಟನೆ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಚಾಟಿ ಏಟು ಬೀಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದು,
ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ಸುಪ್ರೀಂಕೋರ್ಟ್ ಕ್ರಮಕೈಗೊಳ್ಳುತ್ತದೆ ಎಂದು ಖಡಕ್ ಆಗಿ ಹೇಳಿದೆ. ಈ ಪ್ರಕರಣದ ವಿಚಾರಣೆಯನ್ನು ಜುಲೈ 28ರಂದು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

ಆದರೆ, ಘಟನೆ ನಡೆದು ಎರಡು ತಿಂಗಳಾದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಿಡಿಯೋ ವೈರಲ್ ಆಗಿ ಆಕ್ರೋಶ ವ್ಯಕ್ತವಾದ ನಂತರವೇ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಈಗಲೂ ರಾಜಕೀಯ ಪಕ್ಷಗಳು ಚರ್ಚೆಯಲ್ಲೇ ಮುಳುಗಿದೆಯೇ ಹೊರತು ನ್ಯಾಯ ಸಿಗುವ ಲಕ್ಷಣ ಕಾಣದಿದ್ದಾಗ ಮಣಿಪುರದ ಮಹಿಳೆಯರೇ ತಮಗಾದ ಅನ್ಯಾಯಕ್ಕೆ ನ್ಯಾಯ ಕಂಡುಕೊಳ್ಳುವ ಸಲುವಾಗಿ ನೀಚ ಕೃತ್ಯವೆಸಗಿದ ಪ್ರಮುಖ ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದಾರೆ.
ಮನೆಗೆ ಬೆಂಕಿ ಹಚ್ಚಿದರೆ ಮತ್ತೆ ಮನೆ ಕಟ್ಟಬಹುದು. ಆದರೆ, ಈ ಘಟನೆ ಸರಿಪಡಿಸಲಾಗುವುದೇ?! ಮಹಿಳೆಯರಿಗೆ ನ್ಯಾಯ ಸಿಕ್ಕರೂ ಆಗಿರುವ ಘಟನೆ ಆಗಿಯೇ ಹೋಗಿದೆ. ದೇಶದಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರ, ಕೊಲೆ ಮಾಡಿದಾಗ ಅದಕ್ಕೆ ಶಿಕ್ಷೆ ಆಗಲೇಬೇಕು. ಆಗ ಮಾತ್ರ ಮುಂದೆ ನಡೆಯುವ ಅಂತಹದೇ ಘಟನೆಯನ್ನು ತಪ್ಪಿಸಬಹುದು. ಹೆಣ್ಣಿನ ರಕ್ಷಣೆ ಭಾಷಣದಲ್ಲಷ್ಟೇ ನಿಜ ಜೀವನದಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.

 

https://twitter.com/SouleFacts/status/1682102212871462913?s=20

 

ಇದನ್ನು ಓದಿ: Army Canteen: ಆರ್ಮಿ ಕ್ಯಾಂಟೀನ್ ನಲ್ಲಿ ವಸ್ತುಗಳು ಅರ್ಧಕರ್ಧ ಬೆಲೆಯಲ್ಲಿ ಸಿಗೋ ಅಸಲಿ ಕಾರಣ ಗೊತ್ತಾ ? 

You may also like

Leave a Comment