Home » Dharmasthala Sowjanya Story: ಸಿನಿಮಾ ಆಗಿ ಮತ್ತೆ ಬರಲಿದ್ದಾಳೆ ಸೌಜನ್ಯ: ಭಾರೀ ಕುತೂಹಲ ಕೆರಳಿಸಿದೆ ಸಿನಿಮಾ ಟೈಟಲ್ !!

Dharmasthala Sowjanya Story: ಸಿನಿಮಾ ಆಗಿ ಮತ್ತೆ ಬರಲಿದ್ದಾಳೆ ಸೌಜನ್ಯ: ಭಾರೀ ಕುತೂಹಲ ಕೆರಳಿಸಿದೆ ಸಿನಿಮಾ ಟೈಟಲ್ !!

0 comments
Dharmasthala Sowjanya Story

Dharmasthala Sowjanya Story: ಸುಮಾರು 11 ವರುಷಗಳ ಹಿಂದೆ ದೇಶಾದ್ಯಂತ ಭಾರಿ ಸದ್ಧುಮಾಡಿ, ಇದೀಗ ಮತ್ತೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಧರ್ಮಸ್ಥಳದ(Dharmastala) ಸೌಜನ್ಯಳ(Sowjanya) ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇದೀಗ ಸಿನಿಮಾ ಆಗುಲು ರೆಡಿಯಾಗುತ್ತಿದೆ.

ಹೌದು, ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ (Sowjanya Rape and Murder Case) ಮತ್ತು ಕೊಲೆ ಪ್ರಕರಣದ ತೀರ್ಪು 11 ವರ್ಷಗಳ ನಂತರ ಹೊರಬಿದ್ದು, ಆರೋಪಿಯಾಗಿದ್ದ ಸಂತೋಷ್ ಅವರನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಈ ಬೆನ್ನಲ್ಲೇ ಸೌಜನ್ಯಳ ಪ್ರಕರಣ ಮತ್ತೆ ನಾಡಿನಾದ್ಯಂತ ಚರ್ಚೆಗೆ ಕಾರಣವಾಗುತ್ತಿದೆ. ಹೀಗಿರುವಾಗಲೇ ಈ ಪ್ರಕರಣವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎಂದು ವಿಸ್ತಾರ ನ್ಯೂಸ್ ವರದಿ ಮಾಡಿದೆ.

ಇದನ್ನು ಓದಿ: Dharmasthala Sowjanya Death: ಧರ್ಮಸ್ಥಳ ಸೌಜನ್ಯ ಪ್ರಕರಣ: ದೂರದ ಮೈಸೂರಲ್ಲಿ ಹೋರಾಟ – ದಕ್ಷಿಣ ಕನ್ನಡದ ಶಾಸಕ, ಸಂಸದ, ಮಂತ್ರಿ, ಮಠಾಧೀಶರ ಅಸಹನೀಯ ರಣ ಮೌನ !

ಅಂದಹಾಗೆ ಸೌಜನ್ಯಳ ಜೀವನ ಮತ್ತು ಮರಣವನ್ನು ಆಧರಿಸಿ ಈ ಸಿನಿಮಾಗೆ ಟೈಟಲ್ ಕೂಡ ಫಿಕ್ಸ್ ಆಗಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಎಂದು ನೊಂದಾವಣಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜಿ.ಕೆ ವೆಂಚರ್ಸ್ ಅವರು ಈ ರಿಜಿಸ್ಟರ್ ಮಾಡಿದ್ದು ವಿ. ಲವ ಅವರು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಥೆಯನ್ನು ಒಳಗೊಳ್ಳುವ ಈ ಚಿತ್ರ ಕನ್ನಡದಲ್ಲಿ ತೆರೆ ಕಾಣಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ:  Soujanya case: ಧರ್ಮಸ್ಥಳ ಸೌಜನ್ಯ ಗೌಡ ಹೋರಾಟ: ಮತ್ತಷ್ಟು ಬಿರುಸು ಪಡೆದುಕೊಂಡ ಹತ್ಯಾ ಪ್ರಕರಣ, ಹೋರಾಟಕ್ಕೆ ದೊಡ್ಡದಾಗಿ ಎಂಟ್ರಿ ಕೊಟ್ಟ ಒಡನಾಡಿ ಸೇವಾ ಸಂಸ್ಥೆ !

 

ಏನಿದು ಪ್ರಕರಣ?
ಉಜಿರೆಯ (Dharamastala) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ (SDM) ವ್ಯಾಸಂಗ ಮಾಡುತ್ತಿದ್ದ ಸೌಜನ್ಯ 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಎಸಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಪ್ರಕರಣ ಕರಾವಳಿ ಜಿಲ್ಲಾದ್ಯಂತ ಭಾರೀ ಸದ್ದು ಮಾಡಿತ್ತಲ್ಲದೇ ಜನರು ಸ್ವಯಂ ಪ್ರೇರಿತವಾಗಿ ಬೀದಿಗಳಿದು ಪ್ರತಿಭಟನೆಯನ್ನು ಮಾಡಿದ್ದರು. ಪ್ರತಿಭಟನೆ ವೇಳೆ ಸಾಕ್ಷ್ಯನಾಶಕ್ಕೆ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಯತ್ನ ಮಾಡಿದ್ದಾರೆ ಎಂದು ಬಹಿರಂಗವಾಗಿಯೇ ಹೋರಾಟಗಾರರು ಆರೋಪ ಮಾಡಿದ್ದರು.

ಇದನ್ನು ಓದಿ: Dharmasthala Sowjanya murder: ಧರ್ಮಸ್ಥಳ ಸೌಜನ್ಯ ಕೊಲೆ ಆರೋಪಿ ಬಿಡುಗಡೆ, ಈ ಕೇಸಿನಲ್ಲೀಗ ದೈವ, ದೇವರೇ ಅಪರಾಧಿ !?

ಇದಾದ ಬಳಿಕ ಅನುಮಾನದ ಮೇಲೆ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. 2016ರಲ್ಲಿ ತನಿಖೆ ಪೂರ್ಣಗೊಳಿಸಿ ಸಿಬಿಐ ವರದಿ ಸಲ್ಲಿಸಿತ್ತು. ಸುದೀರ್ಘ ತನಿಖೆಯ ಬಳಿಕ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದಿಂದ ತೀರ್ಪು ಹೊರ ಬಿದ್ದಿದ್ದು, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ .ಸಿ.ಬಿ. ಆದೇಶ ನೀಡಿದ್ದು, ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಯನ್ನು ಬಿಡುಗಡೆ ಮಾಡುವಂತ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೌಜನ್ಯಳ ಕೊಲೆಗೆ ಸರಿಯಾದ ನ್ಯಾಯ ದೊರಕಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹಲವು ಸಾಮಾಜಿಕ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈ ನಡುವೆಯೇ ಸಿನಿಮಾ ಕೂಡ ನಿರ್ಮಾಣ ಆಗುತ್ತಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಇದನ್ನು ಓದಿ: Voter ID : ವೋಟರ್ ID ಬಗ್ಗೆ ಬಂತು ಬಿಗ್ ಅಪ್ಡೇಟ್- ಹೀಗೆ ಮಾಡದಿದ್ದರೆ ನಿಮ್ಮ ಐಡಿ ಕ್ಯಾನ್ಸಲ್ ! ಕೂಡಲೇ ಪರಿಶೀಲಿಸಿ

You may also like

Leave a Comment