Home » Marks Card: ಫೆಬ್ರವರಿ 30ರಂದು ಜನಿಸಿತಂತೆ ಮಗು: ಮುಖ್ಯೋಪಾಧ್ಯಾಯರ ಎಡವಟ್ಟಿಗೆ ಶಿಕ್ಷಣಾಧಿಕಾರಿ ನೀಡಿದ್ರು ಶಾಕ್

Marks Card: ಫೆಬ್ರವರಿ 30ರಂದು ಜನಿಸಿತಂತೆ ಮಗು: ಮುಖ್ಯೋಪಾಧ್ಯಾಯರ ಎಡವಟ್ಟಿಗೆ ಶಿಕ್ಷಣಾಧಿಕಾರಿ ನೀಡಿದ್ರು ಶಾಕ್

0 comments
Marks Card

Marks Card: ಯಾರೇ ಆಗಲಿ ತಪ್ಪು ಮಾಡುವುದು ಸಹಜ. ಆದರೆ ಕೆಲವೊಮ್ಮೆ ಮಾಡುವ ತಪ್ಪು ಇನ್ನೊಬ್ಬರಿಗೆ ದೊಡ್ಡ ಕಪ್ಪು ಚುಕ್ಕೆ ಆಗದಂತೆ ನೋಡಿಕೊಳ್ಳಬೇಕು. ಆದರೆ ಒಂದು ಶಾಲೆ ನಡೆಸುವ ಸಾವಿರಾರು ವಿದ್ಯಾರ್ಥಿಗಳ ಜವಾಬ್ದಾರಿ ಹೊತ್ತಿರುವ ಮುಖ್ಯೋಪಾಧ್ಯಾಯರು ಮಾಡಿದ ತಪ್ಪು ಇಂದು ವಿದ್ಯಾರ್ಥಿಗೆ ಬಹುದೊಡ್ಡ ಕಪ್ಪು ಚುಕ್ಕೆ ಆಗಿದೆ.

ಹೌದು, ಮುಖ್ಯೋಪಾಧ್ಯಾಯರು ವಿದ್ಯಾರ್ಥಿಯ ಜನ್ಮ ದಿನಾಂಕವನ್ನು ಫೆಬ್ರವರಿ 30 ಎಂದು ದಾಖಲೆಯಲ್ಲಿ ನಮೂದಿಸಿದ್ದು, ಫೆಬ್ರವರಿ ತಿಂಗಳಲ್ಲಿ ಕೇವಲ 28 ಅಥವಾ 29 ದಿನಗಳು ಇದ್ದಾಗ, ಫೆಬ್ರವರಿ 30 ರಂದು ಮಗು ಹೇಗೆ ಹುಟ್ಟುತ್ತದೆ ಎಂದು ಈಗ ಜನರು ಚರ್ಚಿಸುತ್ತಿದ್ದಾರೆ. ಇದಾದ ನಂತರ ಹಲವು ರೀತಿಯ ಸಮಸ್ಯೆಗಳು ವಿದ್ಯಾರ್ಥಿಗಳ ಮುಂದೆ ಉದ್ಭವಿಸಿವೆ. ಒಟ್ಟಿನಲ್ಲಿ ಈ ಶಿಕ್ಷಣ ಇಲಾಖೆ ವರ್ಷಕ್ಕೆ ಹಲವು ತಪ್ಪುಗಳನ್ನು ಮಾಡುತ್ತಿದೆ ಎಂದು ಹೇಳಲಾಗಿದೆ.

ಫೆಬ್ರವರಿ ತಿಂಗಳಲ್ಲಿ 28 ಅಥವಾ 29 ದಿನಗಳಿವೆ. ಆದರೆ 8ನೇ ತರಗತಿಯ ಮಗುವಿನ ವರ್ಗಾವಣೆ ಪ್ರಮಾಣಪತ್ರದಲ್ಲಿ ಮತ್ತು ಅಂಕ ಪಟ್ಟಿಯಲ್ಲಿ (Marks Card) ಅವರ ಜನ್ಮ ದಿನಾಂಕವನ್ನು ಫೆಬ್ರವರಿ 30 ಎಂದು ನಮೂದಿಸಲಾಗಿದೆ.

ಈ ಪ್ರಕರಣವು ಜಮುಯಿ ಜಿಲ್ಲೆಯ ಚಕೈ ಬ್ಲಾಕ್ ಪ್ರದೇಶದ ಮೇಲ್ದರ್ಜೆಗೇರಿದ ಮಾಧ್ಯಮಿಕ ಶಾಲೆಗೆ ಸಂಬಂಧಿಸಿದ್ದಾಗಿದೆ. ಅಲ್ಲಿ ಎಂಟನೇ ತರಗತಿಯಲ್ಲಿ ಉತ್ತೀರ್ಣರಾದ ಅಸಂಗಟಿಯಾ ಮೋಹನ್‌ಪುರದ ನಿವಾಸಿ ರಾಜೇಶ್ ಯಾದವ್ ಅವರ ಮಗ ಅಮನ್ ಕುಮಾರ್ ಅವರ ವರ್ಗಾವಣೆ ಪ್ರಮಾಣಪತ್ರವನ್ನು ಶಾಲೆಯ ಮುಖ್ಯಸ್ಥರು ಈ ರೀತಿ ಮಾಡಿದ್ದಾರೆ.

ಸದ್ಯ ವರ್ಗಾವಣೆ ಪ್ರಮಾಣಪತ್ರದಲ್ಲಿ ನಮೂದಿಸಿರುವ ವಿಚಿತ್ರ ದಿನಾಂಕದ ನಂತರ ಶಿಕ್ಷಣಾಧಿಕಾರಿ ಅವರು ಶಿಕ್ಷಕರಾಗಲು ನೀವು ಯೋಗ್ಯರಲ್ಲ ಎಂದು ಮುಖ್ಯೋಪಾಧ್ಯಾಯರಿಗೆ ಹೇಳಿದ್ಧಾರೆ. ಇನ್ನು ಈ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿ ಕಪಿಲ್ ದೇವ್ ತಿವಾರಿ ಅವರನ್ನು ಕೇಳಿದಾಗ ನನಗೂ ಈ ಬಗ್ಗೆ ಮಾಹಿತಿ ಬಂದಿದೆ. ಆ ಸರ್ಟಿಫಿಕೇಟ್ ಅನ್ನು ಯಾರೋ ನನಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕರಿಂದ ವಿವರಣೆ ಕೇಳಲಾಗಿದೆ ಎಂದರು. ಅವರು ಸ್ಪಷ್ಟನೆ ನೀಡಿದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.

 

ಇದನ್ನು ಓದಿ: Railway ticket new rules: ರೈಲು ಹೊರಟ 10 ನಿಮಿಷಗಳ ನಂತರವೂ ಪ್ರಯಾಣಿಕ ಆಸನದಲ್ಲಿ ಕೂರದಿದ್ದರೆ ಟಿಕೆಟ್ ಕ್ಯಾನ್ಸಲ್ ! ಏನಿದು ವಿಚಿತ್ರ ನಿಯಮ ? 

You may also like

Leave a Comment