DCM DK Shivakumar: ಇದೀಗ ತಾನೆ ಚಾಲನೆಗೆ ಬಿಟ್ಟ ಗೃಹಲಕ್ಷ್ಮಿ ನೋಂದಣಿ (Gruha Lakshmi Scheme) ಪತ್ರದಲ್ಲಿ ನನ್ನ ಹಾಗೂ ಸಿಎಂ ಸಿದ್ದರಾಮಯ್ಯ (Siddaramayya )ಮತ್ತು ಡಿಸಿಎಂ ಶಿವಕುಮಾರ್ ಅವರ ಭಾವಚಿತ್ರಗಳನ್ನು ಮೇಲೆ ಕೆಳಗೆ ಹಾಕಲಾಗಿದ್ದು, ಅವರ ಫೋಟೋವನ್ನು ಮೇಲೆ ಕೆಳಗೆ ಮಾಡದೇ, ಜೊತೆಯಲ್ಲೇ ಬರುವಂತೆ ಮಾಡಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DCM DK Shivakumar) ಕರ್ನಾಟಕ ಒನ್ (Karnataka One) ಸಿಬ್ಬಂದಿಗೆ ಸೂಚಿಸಿದ್ದಾರೆ. ಉಪ ಮುಖ್ಯಮಂತ್ರಿಗಳ ಈ ಮಾತನ್ನು ಕೇಳಿದ ಸಿಬ್ಬಂದಿಗಳು ಮುಗುಳ್ನಕ್ಕಿದ್ದಾರೆ.
ತಮ್ಮ ಸ್ವಕ್ಷೇತ್ರ ಕನಕಪುರದ ಕರ್ನಾಟಕ ಒನ್ ಕೇಂದ್ರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿಕೊಟ್ಟಿದ್ದಾರೆ. ಈ ವೇಳೆ ಅವರು ಗೃಹಲಕ್ಷ್ಮಿ ನೋಂದಣಿ ಅರ್ಜಿಗಳ ಪರಿಶೀಲನೆ ಮಾಡಿದ್ದಾರೆ. ಆಗ ಅವರ ಮತ್ತು ಸಿದ್ಧರಾಮಯ್ಯ ಫೋಟೋ ಕೆಳಗೆ ಮೇಲೆ ಇರೋದು ಕಂಡು ಬಂದಿದೆ. ಹಾಗಾಗಿ ನೋಂದಣಿ ಪತ್ರದಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಫೋಟೋ ಜೊತೆಯಲ್ಲೆ ಬರಬೇಕು. ಮೇಲೆ ಕೆಳಗೆ ಮಾಡದಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಡಿಸಿಎಂ ಮಾತು ಕೇಳಿ ಕರ್ನಾಟಕ ಒನ್ ಸಿಬ್ಬಂದಿ ಸಣ್ಣಗೆ ನಗೆ ಬೀರಿದ್ದಾರೆ. ಇದೀಗ ಆ ಫೋಟೋ ಟ್ರೊಲ್ ಆಗುತ್ತಿದೆ.
ಶುಕ್ರವಾರ ತಮ್ಮ ಆಪ್ತ ವಕೀಲರ ನಿಧನ ಹಿನ್ನೆಲೆ ಅಂತಿಮ ದರ್ಶನಕ್ಕೆ ಕನಕಪುರಕ್ಕೆ ಆಗಮಿಸಿದ ಡಿ.ಕೆ ಶಿವಕುಮಾರ್ ರವರು ತೆರಳಿದ ಸಂದರ್ಭ ಅವರು ಕರ್ನಾಟಕ ಒನ್ ಸೆಂಟರ್ ಅವರು ದಿಢೀರ್ ಭೇಟಿಕೊಟ್ಟಿದ್ದರು. ಆಗ ಸಿದ್ದರಾಮಯ್ಯನವರ ಲೆವೆಲ್ಲಿಗೆ ಫೋಟೋ ಹಾಕಲು ಕೇಳಿದ್ದಾರೆ.
