Polish woman: ಪ್ರೀತಿ ಇದೀಗ ಮತ್ತೊಂದು ಬಾರಿ ಗಡಿ ದಾಟಿದೆ. ಈ ಬಾರಿ ಪ್ರೀತಿಗಾಗಿ ಖಂಡ ಖಂಡಾಂತರಗಳನ್ನು ದಾಟಿಕೊಂಡು ಮಹಿಳೆಯೊಬ್ಬಳು ಭಾರತಕ್ಕೆ ಪ್ರಿಯಕರನನ್ನು ಹುಡುಕಿ ಬಂದಿದ್ದಾಳೆ. ಇತ್ತೀಚೆಗೆ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಪಬ್‌ಜೀ ಪ್ರೇಮಿಗಾಗಿ (PUBG Lover) ಭಾರತಕ್ಕೆ ಪ್ರೀತಿ ಅರಸಿ ಪ್ರವೇಶಿಸಿ ಸುದ್ದಿಯಾದ ಬೆನ್ನಲ್ಲೇ ಈ ಪೋಲಾಂಡ್ ಪ್ರೀತಿ ದೊಡ್ಡದಾಗಿ ಸುದ್ದಿಯಾಗುತ್ತಿದೆ. ಭಾರತದ ಪಬ್ಜಿ ಪ್ರೇಮಿಗಾಗಿ ಭಾರತಕ್ಕೆ ಬಂದ ರೀತಿಯಲ್ಲಿಯೇ, ಇದೀಗ ಪೋಲೆಂಡಿನ ಮಹಿಳೆಯೊಬ್ಬಳು (Polish Woman) ಭಾರತಕ್ಕೆ ಬಂದು ಸುದ್ದಿಯಾಗುತ್ತಿದ್ದಾಳೆ.
ಇಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯ ಆದ ಬಾಯ್‌ಫ್ರೆಂಡ್‌ಗಾಗಿ 49 ವರ್ಷದ ಮಹಿಳೆಯೊಬ್ಬಳು ಪೋಲಾಂಡ್ ನಿಂದ ಭಾರತಕ್ಕೆ ಬಂದಿದ್ದಾಳೆ. ಇಲ್ಲಿಗೆ ಬಂದು ಇಲ್ಲೇ ತನ್ನ ಪ್ರೇಮಿಯನ್ನು ಮದುವೆಯಾಗಿ ಭಾರತದಲ್ಲೇ ಹೊಸ ಜೀವನ ಶುರು ಮಾಡಲು ಜಾರ್ಖಂಡ್‌ನ (Jharkhand) ಹಜಾರಿಬಾಗ್‌ಗೆ ಎಂಬಲ್ಲಿಗೆ ಬಂದಿದ್ದಾರೆ ಈಕೆ. ಜೊತೆಗೆ ಬರುವಾಗ ತನ್ನ ಆರು ವರ್ಷದ ಮಗಳನ್ನು ಕೂಡ ಈಕೆ ಕರೆದುಕೊಂಡು ಬಂದಿದ್ದು ಇನ್ನು ಮುಂದೆ ಇಲ್ಲೇ ಭಾರತದಲ್ಲಿಯೇ ಬದುಕು ಸಾಗಿಸುವ ಬಯಕೆ ವ್ಯಕ್ತಪಡಿಸಿದ್ದಾಳೆ.
ಪೋಲೆಂಡಿನ ಮಹಿಳೆ ಬಾರ್ಬಾರಾ ಪೊಲಾಕ್ ಹಾಗೂ ಜಾರ್ಖಂಡ್‌ನ ಹಜಾರಿಬಾಗ್‌ನ ಶಾದಾಬ್ ಮಲಿಕ್ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರ ಪರಿಚಯವಾಗಿ ಸ್ನೇಹಿತರಾಗಿದ್ದಾರೆ. 2021ರಲ್ಲಿ ಶುರುವಾದ ಈ ಸ್ನೇಹ ಕೆಲ ದಿನಗಳಲ್ಲೇ ಪ್ರೀತಿಗೆ ತಿರುಗಿದೆ. ಇಬ್ಬರೂ ಪರಸ್ಪರ ಭೇಟಿ ಕೂಡಾ ಆಗದೆ, ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟೂ ಡೀಪ್ ಆಗಿ ಪ್ರೀತಿಸಲು ಶುರು ಮಾಡಿದ್ದಾರೆ. ಕೊನೆಗೆ ತಡೆಯಲಾಗದೆ ಪೊಲಾಕ್ ತನ್ನ 6 ವರ್ಷದ ಮಗಳು ಅನನ್ಯಾಳೊಂದಿಗೆ ಭಾರತಕ್ಕೆ ಹಾರಿಬಂದಿದ್ದಾಳೆ. ಬರುವಾಗ ತನ್ನ ಗಂಡನಿಗೆ ಡೈವೋ್ಸ್ ನೀಡಿ ಎಲ್ಲಾ ಸೆಟಲ್ ಮಾಡಿಕೊಂಡು ಇಲ್ಲಿಗೆ ಬಂದಿರೋದು ವಿಶೇಷ. ಈಗ ಆಕೆ ಜಾರ್ಖಂಡ್ ತಲುಪಿದ್ದು, ಜಾರ್ಖಂಡ್ ನ ಹಜಾರಿಬಾಗ್‌ನಲ್ಲಿ ಪ್ರಿಯಕರ ಶಾದಾಬ್ ಜೊತೆ ನೆಲೆಸಿದ್ದಾಳೆ.
” ಶಾದಾಬ್ ತುಂಬಾ ಒಳ್ಳೆಯ ವ್ಯಕ್ತಿ, ನಾನು ಹಜಾರಿಬಾಗ್‌ಗೆ ಬಂದಾಗ, ಅನೇಕ ಜನರು ನನ್ನನ್ನು ನೋಡಲು ಬಂದರು. ನಾನು ಸೆಲೆಬ್ರಿಟಿ ಎಂದು ಭಾವಿಸಿದೆ. ನನಗೆ ಸ್ವಂತ ಮನೆ, ಕಾರು ಮತ್ತು ಒಳ್ಳೆಯ ಕೆಲಸವಿದೆ. ಆದ್ರೆ ನಾನು ಶಾದಾಬ್‌ಗಾಗಿ ಭಾರತಕ್ಕೆ ಬಂದಿದ್ದೇನೆ. ನಾನು ಅವನೊಂದಿಗೆ ತುಂಬಾ ಸಂತೋಷವಾಗಿದ್ದೇನೆ. ನಾವು ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ಪೊಲಾಕ್ ಹೇಳಿಕೊಂಡಿದ್ದಾಳೆ. ಜತೆಗೆ ಭಾರತವನ್ನು ‘ ಸುಂದರ ದೇಶ ‘ ಎಂದು ಹೊಗಳಿದ್ದಾಳೆ.
ಇದೀಗ ಅವರಿಬ್ಬರ ಮದುವೆಗೆ ತಯಾರಿ ನಡೆದಿದೆ. ಪೊಲಾಕ್ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಅದು ಇನ್ನು 4 ವರ್ಷ, ಅಂದ್ರೆ 2027 ರವರೆಗೆ ಮಾನ್ಯವಾಗಿರುತ್ತದೆ. ಅಲ್ಲಿಂದ ಮುಂದಕ್ಕೆ ಅವರು ಭಾರತದ ಪೌರತ್ವವನ್ನು ರಚಿಸಿಕೊಂಡು ಮುಂದಕ್ಕೆ ಬಾಳಬೇಕಾದ ಯೋಜನೆ ಹಾಕಿಕೊಂಡಿದ್ದಾರೆ. ಪೊಲಾಕ್ ಮತ್ತು ಮಲಿಕ್ ಇಬ್ಬರು ಮದುವೆಯಾಗಲು ತಯಾರಿ ಶುರು ಮಾಡಿದ್ದು, ಅವರು ಅಲ್ಲಿನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮದುವೆಗೆ ಅರ್ಜಿ ಕೂಡಾ ಸಲ್ಲಿಸಿದ್ದಾರೆ. ಪೋಲಾಕ್ ಬಾರ್ಬಾರಾ ಅವರ ಮಗಳು ಈಗಾಗಲೇ ಶಾದಾಬ್ ನನ್ನು ತನ್ನ ಡ್ಯಾಡ್ ಎಂದೇ ಕರೆಯಲು ಶುರುಮಾಡಿದ್ದು, ಈ ಸಂತಸವನ್ನು ಪೊಲಾಕ್ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾಳೆ. ಒಟ್ಟಾರೆ ಪೋಲಾಂಡ್ ರೀತಿಯಲ್ಲಿ ಸುಖವಿದೆ.
ಇದನ್ನೂ ಓದಿ: Benglore: ಯುವತಿಯನ್ನು ಕೂರಿಸಿಕೊಂಡು, ಬೈಕ್ ಓಡಿಸುತ್ತಲೇ ಹಸ್ತಮೈಥುನ ಮಾಡಿಕೊಂಡ ರ‍್ಯಾಪಿಡೋ ಚಾಲಕ! ಪೋಸ್ಟ್ ವೈರಲ್
