Hassan: ಕೆಎಸ್ಆರ್ಟಿಸಿ ಬಸ್‍ನಲ್ಲಿ (KSRTC Bus) ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಮರದ ಕೊಂಬೆ ಬಡಿದು ಮೃತಪಟ್ಟ ಘಟನೆ ಬೇಲೂರಿನ (Hassan , Beluru) ನಿಡಗೋಡು ಗ್ರಾಮದ ಬಳಿ ನಡೆದಿದೆ.
ನಿನ್ನೆ ಬೇಲೂರಿನಿಂದ ಮಂಗಳೂರು (Mangaluru) ಕಡೆಗೆ KSRTC ಸಾರಿಗೆ ಬಸ್ ತೆರಳುವ ಸಂದರ್ಭ ಈ ದುರ್ಘಟನೆ ನಡೆದಿದೆ. ದಾರಿ ಮಧ್ಯೆ ಬಸ್ ಗೆ ಟಿಪ್ಪರ್ ಒಂದು ಎದುರಾಗಿದೆ. ಎದುರಿನಿಂದ ಬಂದ ಟಿಪ್ಪರ್‌ಗೆ ದಾರಿ ಬಿಡುವ ಸಂದರ್ಭ ಬಸ್ ರಸ್ತೆ ಪಕ್ಕಕ್ಕೆ ಸರಿದಿದೆ. ಆಗ ಈ ದುರ್ಘಟನೆ ನಡೆದಿದೆ.
ಅಲ್ಲಿ ರಸ್ತೆ ಬದಿಯಲ್ಲಿಯೇ ಇದ್ದ ಮರದ ಕೊಂಬೆಗೆ ಹೋಗಿ ಬಸ್ಸು ಡಿಕ್ಕಿಯಾಗಿದೆ. ಬಸ್ಸು ಡಿಕ್ಕಿ ಆದ ರಭಸಕ್ಕೆ ಬಸ್ಸಿನ ಎಡಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಬಸ್ಸಿಗೂ ದೊಡ್ಡ ಪ್ರಮಾಣದ ಡ್ಯಾಮೇಜ್ ಉಂಟಾಗಿದೆ. ಅಲ್ಲಿ ಬೃಹತ್ ಗಾತ್ರದ ಹಲವಾರು ಮರಗಳಿದ್ದು, ಈ ರೀತಿಯಲ್ಲಿಯೇ ಈ ಹಿಂದೆಯೂ ಮೂರ್ನಾಲ್ಕು ಸಾವುಗಳು ಸಂಭವಿಸಿವೆ ಎನ್ನಲಾಗಿದೆ. ಅಲ್ಲಿನ ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು ಕೂಡಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಮರಗಳನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ರಸ್ತೆ ಬಂದ್ ಮಾಡಿ ಮರ ತೆರವು ಮಾಡುವುದಾಗಿ ಸ್ಥಳೀಯರೇ ಎಚ್ಚರಿಕೆ ನೀಡಿದ್ದಾರೆ.
ಸ್ಥಳಕ್ಕೆ ಬೇಲೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಮೃತನ ಗುರುತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದ್ದು, ವ್ಯಕ್ತಿಯ ಮೃತದೇಹವನ್ನು ಬೇಲೂರಿನ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: 210 ಕೆಜಿ ಭಾರ ಎತ್ತುವಾಗ ಕುತ್ತಿಗೆಗೆ ಬಿದ್ದ ಭಾರ, ಫಿಟ್‌ನೆಸ್ ಟ್ರೈನರ್ ದುರಂತ ಸಾವು
