Home » OppenHeimer: ಲೈಂಗಿಕ ಕ್ರಿಯೆ ವೇಳೆ ಭಗವದ್ಗೀತೆ ಓದುವ ದೃಶ್ಯ: ಈ ಚಿತ್ರಕ್ಕೆ ಎದುರಾಗಿದೆ ಭಾರೀ ವಿರೋಧ !

OppenHeimer: ಲೈಂಗಿಕ ಕ್ರಿಯೆ ವೇಳೆ ಭಗವದ್ಗೀತೆ ಓದುವ ದೃಶ್ಯ: ಈ ಚಿತ್ರಕ್ಕೆ ಎದುರಾಗಿದೆ ಭಾರೀ ವಿರೋಧ !

0 comments

OppenHeimer : ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್‌ಹೈಮರ್’ (OppenHeimer) ಸಿನಿಮಾ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ ‘ಆಪನ್‌ಹೈಮರ್’ ಸಿನಿಮಾದಲ್ಲಿನ ಒಂದು ದೃಶ್ಯಕ್ಕೆ ಭಾರತದ ಸೆನ್ಸಾರ್ ಮಂಡಳಿಯವರು ಹೇಗೆ ಅನುಮತಿ ನೀಡಿದ್ದಾರೆ ಎಂದು ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಸದ್ಯ ಈ ಈ ಆಕ್ಷೇಪಾರ್ಹ ದೃಶ್ಯವನ್ನು ತೆಗೆದುಹಾಕುವಂತೆ ಒತ್ತಾಯಿಸಲಾಗುತ್ತಿದೆ.

ಜುಲೈ 21 ರಂದು ಬಿಡುಗಡೆ ಆದ ಹಾಲಿವುಡ್ನ ‘ಆಪನ್‌ಹೈಮರ್’ ಚಿತ್ರಕ್ಕೆ ಮೆಚ್ಚುಗೆ ಕೇಳಿಬಂದಿದ್ದರೂ ಸಹ ಸಿನಿಮಾದ ಒಂದು ದೃಶ್ಯಕ್ಕೆ ವಿರೋಧ ವ್ಯಕ್ತವಾಗಿದೆ. ಹೌದು, ಭಗವದ್ಗೀತೆ ಯ ಸಾಲುಗಳನ್ನು ಓದುವ ದೃಶ್ಯ ಈ ಸಿನಿಮಾದಲ್ಲಿದೆ. ಇದಕ್ಕೆ ಆಕ್ಷೇಪ ಎದುರಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ತಕರಾರು ತೆಗೆದಿದ್ದಾರೆ. ಇದೀಗ ಸೋಶಿಯಲ್ ಆಪನ್ ಹೈಮರ್’ ಚಿತ್ರತಂಡವನ್ನು ಪ್ರಶ್ನಿಸಿದ್ದು, ಈ ದೃಶ್ಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ.

ಅಣುಬಾಂಬ್ ಕಂಡು ಹಿಡಿದ ಅಮೆರಿಕದ ಜೆ. ರಾಬರ್ಟ್ ಆಪನ್ ಹೈಮರ್ ಅವರ ಜೀವನದ ಕುರಿತು ‘ಆಪನ್ ಹೈಮರ್’ ಸಿನಿಮಾ ಮೂಡಿಬಂದಿದೆ. ಆಪನ್ ಪಾತ್ರವನ್ನು ಕಿಲಿಯನ್ ಮರ್ಫಿ ಮಾಡಿದ್ದಾರೆ. ರಿಯಲ್ ಲೈಫ್‌ನಲ್ಲಿ ಅಪನ್ ಹೈಮರ್ ಅವರಿಗೆ ಹಿಂದೂ ಪುರಾಣಗಳ ಬಗ್ಗೆ ಆಸಕ್ತಿ ಇತ್ತು. ಅವರು ಸಂಸ್ಕೃತ ಕಲಿತಿದ್ದರು ಮತ್ತು ಭಗವದ್ಗೀತೆಯನ್ನು ಓದಿದ್ದರು. ಅದಕ್ಕೆ ಈ ಸಿನಿಮಾದಲ್ಲಿ ಒಂದು ದೃಶ್ಯ ಇದೆ. ಆ ದೃಶ್ಯವೇ ಈಗ ಕಾಂಟ್ರವರ್ಸಿ ಸೃಷ್ಟಿ ಮಾಡಿದೆ.

ಆಪನ್ ಹೈಮರ್ ಜೊತೆ ಕ್ರಿಯೆ ನಡೆಸುತ್ತಿರುವ ಅವರ ಪ್ರೇಯಸಿಗೆ ಅನೇಕ ಪುಸ್ತಕಗಳು ಕಾಣಿಸುತ್ತವೆ. ಆ ಮೇಲೆ ಒಂದು ಪುಸ್ತಕವನ್ನು ಕೈಗೆತ್ತಿಕೊಂಡು ‘ಇದು ಏನು’ ಅಂತ ಆಕೆ ಪ್ರಶ್ನಿಸುತ್ತಾಳೆ. ‘ಇದು ಭಗವದ್ಗೀತೆ’ ಎಂದು ಆಪನ್‌ಹೈಮರ್ ಹೇಳುತ್ತಾರೆ ಮತ್ತು ಅದರ ಸಾಲುಗಳನ್ನು ವಿವರಿಸುತ್ತಾರೆ. ದೃಶ್ಯಕ್ಕೆ ಭಾರತದಲ್ಲಿ ಸೆನ್ಸಾರ್ ಮಂಡಳಿಯವರು ಹೇಗೆ ಅನುಮತಿ ನೀಡಿದ್ದಾರೆ ಎಂದು ವಿರೋಧ ವ್ಯಕ್ತವಾಗಿದೆ.

ಈ ಕುರಿತು ‘ಆಪನ್ ಹೈಮರ್’ ಸಿನಿಮಾದ ನಿರ್ದೇಶಕ ಕ್ರಿಸ್ಟೋಫರ್ ಅವರಿಗೆ ಪತ್ರ ಬರೆಯಲಾಗಿದ್ದು, ಸಿನಿಮಾದಲ್ಲಿ ಇರುವ ಆಕ್ಷೇಪಾರ್ಹ ದೃಶ್ಯವನ್ನು ತೆಗೆದುಹಾಕುವಂತೆ ಒತ್ತಾಯಿಸಲಾಗಿದೆ. ಇದಕ್ಕೆ ಕ್ರಿಸ್ಟೋಫರ್ ನೋಲನ್ ಅವರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದು ಬೆರಗು ಮೂಡಿಸಿದೆ.

 

ಇದನ್ನೂ ಓದಿ: ಭಾರತವನ್ನು ಹುಲಿಗಳಂತೆ ಬೇಟೆಯಾಡಿ – ಪಾಕಿಸ್ತಾನಿ ಕ್ರಿಕೆಟರ್ ವಕಾರ್ ಯೂನಿಸ್

You may also like

Leave a Comment