Home » Congress: ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಹೇಳಿಕೆ ಒಪ್ಪಿದ ಕಾಂಗ್ರೆಸ್ -ಯಾವ ಹೇಳಿಕೆ, ಏನೆಂದಿತು ಕಾಂಗ್ರೆಸ್ ?

Congress: ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಹೇಳಿಕೆ ಒಪ್ಪಿದ ಕಾಂಗ್ರೆಸ್ -ಯಾವ ಹೇಳಿಕೆ, ಏನೆಂದಿತು ಕಾಂಗ್ರೆಸ್ ?

0 comments
Congress

Congress: ರಾಜ್ಯದಲ್ಲಿ ಕಾಂಗ್ರೆಸ್ (congress) ಐದು ಗ್ಯಾರಂಟಿ ಘೋಷಿಸಿ, ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ (Congress) ಪಕ್ಷ ಕರ್ನಾಟಕದ ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮೊದಲು ಜಾರಿಯಾದ ‘ಶಕ್ತಿ’ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ದಿನೇ ದಿನೇ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Veerendra Hegde) ಅವರು ಶಕ್ತಿ ಯೋಜನೆ ಜಾರಿ ಮಾಡಿದಕ್ಕಾಗಿ ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಅಭಿನಂದನೆ ಸಲ್ಲಿಸಿದ್ದರು. ಸದ್ಯ ಕಾಂಗ್ರೆಸ್ ಟ್ವೀಟ್ ನಲ್ಲಿ ಹೆಗ್ಗಡೆಯವರ ಹೇಳಿಕೆಯನ್ನು ಉಲ್ಲೇಖಿಸಿದೆ.

ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಮಹಿಳೆಯರು ಶಕ್ತಿ ದುಡ್ಡು ಎರಡನ್ನೂ ವ್ಯಯ ಮಾಡದೇ ರೆಸ್ಪಾನ್ಸ್ ನೀಡುತ್ತಿದ್ದಾರೆ. ಅವರು ಉಚಿತವಾಗಿ ಪ್ರಯಾಣ ಬೆಳೆಸುತ್ತಿರುವುದೇ ನಾಡಿನ ಪ್ರವಾಸಿ ತಾಣಗಳಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಎಂಬುದು ಎಲ್ಲರಿಗೂ ತಿಳಿದಿದೆ. ಶಕ್ತಿ ಯೋಜನೆ ಹಿನ್ನೆಲೆ ಮಹಿಳೆಯರು ದೇವಾಲಯಗಳಿಗೆ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಹುಂಡಿ ಸಂಗ್ರಹ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ವೇಳೆ ಕಾಂಗ್ರೆಸ್ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಹೇಳಿಕೆಯನ್ನು ಉಲ್ಲೇಖಿಸಿದೆ. ಇತ್ತ ಬಿಜೆಪಿಯು ಕಾಂಗ್ರೆಸ್ ವಿರುದ್ಧ ವಾಗ್ಯುದ್ಧ ಮಾಡುತ್ತಲೇ ಇದೆ.

ಸದ್ಯ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಟ್ವೀಟ್ ಮಾಡಿದ್ದು, “ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಶಕ್ತಿ ಸಿಕ್ಕಿದೆ, ದೇವಾಲಯಗಳ ಆದಾಯಕ್ಕೆ ಬೆಂಬಲ ಸಿಕ್ಕಿದೆ, ಜನರ ಭಕ್ತಿಗೆ ಪುಷ್ಠಿ ಸಿಕ್ಕಿದೆ. ಆರ್ಥಿಕತೆಯ ಚಲನಶೀಲತೆಯ ಬಗ್ಗೆ ಅರಿವಿಲ್ಲದ ಬಿಜೆಪಿಗರ “ಪಾಕಿಸ್ತಾನ, ಶ್ರೀಲಂಕಾ” ಎಂಬ ಅಪಪ್ರಚಾರಕ್ಕೆ ಉತ್ತರವೂ ಸಿಕ್ಕಿದೆ! ಎಷ್ಟೋ ದಿನಗಳಿಂದ ತಮ್ಮ ನೆಚ್ಚಿನ ದೇವಾಲಯಗಳ ಭೇಟಿಗೆ ಕಾತರಿಸುತ್ತಿದ್ದ ಜನ ಶಕ್ತಿ ಯೋಜನೆಯ ಲಾಭ ಪಡೆದು ದೇವರ ದರ್ಶನ ಪಡೆಯುತ್ತಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೇ ಹೇಳುವಂತೆ ನಮ್ಮ ಸರ್ಕಾರಕ್ಕೆ ಜನತೆ ಹರಿಸುತ್ತಿದ್ದಾರೆ, ಜನರ ಧಾರ್ಮಿಕ ನಂಬಿಕೆಗಳಿಗೆ ಉತ್ತೇಜಿಸಿದ ಸಾರ್ಥಕತೆ ನಮಗಿದೆ, ಆದರೆ ಸೋಕಾಲ್ಡ್ ಧರ್ಮ ರಕ್ಷಕರಾದ ಬಿಜೆಪಿಗರು ಮಾಡಿದ್ದೇನು ಎನ್ನುವುದನ್ನು ಉತ್ತರಿಸಬಲ್ಲರೇ?” ಎಂದು ಕಾಂಗ್ರೇಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.

ಮತ್ತೊಂದು ಟ್ವೀಟ್ ನಲ್ಲಿ, “ಹಗರಣಗಳನ್ನು ತನಿಖೆಗೆ ವಹಿಸಿದರೆ ಬಿಜೆಪಿಗರಿಗೇಕೆ ಆಕ್ರೋಶ ಉಂಟಾಗುತ್ತದೆ? ಸತ್ಯ ಹರಿಶ್ಚಂದ್ರನ ವಂಶದವರು ಎಂದುಕೊಳ್ಳುವ ಬಿಜೆಪಿಗರಿಗೆ ನ್ಯಾಯಾಂಗ ತನಿಖೆಗೆ ವಹಿಸಿದರೆ ಆತಂಕವೇಕೆ? @BSBommai ಅವರೇ, ಹಗರಣವೊಂದರ ಪ್ರಾಮಾಣಿಕ ತನಿಖೆ ಆಗಬೇಕು ಎನ್ನುವುದು ದ್ವೇಷ ರಾಜಕಾರಣ ಹೇಗೆ ಆಗುತ್ತದೆ? ತಾವೇ ಮುಖ್ಯ ಆರೋಪಿ ಎಂಬಂತೆ ಆತಂಕ ಪಡುತ್ತಿರುವುದೇಕೆ?” ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಚಾಟಿ ಏಟು ಬೀಸಿದೆ.

 

ಇದನ್ನು ಓದಿ: Putin warns Poland: ಅವರನ್ನು ಮುಟ್ಟಿದ್ರೆ ನಮ್ಮನ್ನು ಮುಟ್ಟಿದಂತೆ: ರಷ್ಯಾ ಅಧ್ಯಕ್ಷ ಪುಟಿನ್ ವಾರ್ನಿಂಗ್! 

You may also like

Leave a Comment