Home » Tumkur: ಕೋಳಿ ಕದಿಯಲು ಹೋದ ಕಳ್ಳರನ್ನು ಕೋಳಿಗಳೇ ಹಿಡಿದು ಕೊಟ್ಟವು- ವೈರಲ್ ಆಯ್ತು ಇಂಟ್ರೆಸ್ಟಿಂಗ್ ವಿಡಿಯೋ !!

Tumkur: ಕೋಳಿ ಕದಿಯಲು ಹೋದ ಕಳ್ಳರನ್ನು ಕೋಳಿಗಳೇ ಹಿಡಿದು ಕೊಟ್ಟವು- ವೈರಲ್ ಆಯ್ತು ಇಂಟ್ರೆಸ್ಟಿಂಗ್ ವಿಡಿಯೋ !!

by ಹೊಸಕನ್ನಡ
0 comments
Tumkur

Tumkur: ದಿನಬೆಳಗಾದರೆ ಸಾಕು ಸೋಷಿಯಲ್ ಮೀಡಿಯಾಗಳಲ್ಲಿ ಅನೇಕ ವಿಡಿಯೋ, ಪೋಸ್ಟ್ ಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಕೆಲವೊಂದು ತುಂಬಾ ತಮಾಷೆಯದ್ದಾಗಿರುತ್ತವೆ. ಅಂತೆಯೇ ಇದೀಗ ಇದೇ ರೀತಿಯ ತಮಾಷೆ ಹಾಗೂ ಕೊಂಚ ಗಂಭೀರವಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಕೋಳಿ ಕಳ್ಳರನ್ನು ಪೇಚಿಗೆ ಸಿಲುಕಿಸಿದೆ.

ಹೌದು, ಕೋಳಿಗಳನ್ನು ಕದಿಯಲು ಬಂದ ಕಳ್ಳರನ್ನು ಕೋಳಿಗಳೇ ಹಿಡಿದು ಕೊಟ್ಟ ವಿಚಿತ್ರದ ಘಟನೆಯೊಂದು ತುಮಕೂರು(Tumkur) ಜಿಲ್ಲೆಯ ಪಾವಗಡ ತಾಲೂಕಿನ ಪಿ.ರೊಪ್ಪ ಗ್ರಾಮದಲ್ಲಿ ನಡೆದಿದ್ದು, ಇದರ ಮಜವಾದ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಅಂದಹಾಗೆ ಪಿ. ರೊಪ್ಪ ಗ್ರಾಮದ ಮನೆಯೊಂದರಲ್ಲಿ ಸಾಕಲಾಗಿದ್ದ ನಾಟಿ ಕೋಳಿಗಳ ಮೇಲೆ ಕಣ್ಣು ಹಾಕಿದ ಕಳ್ಳರು ರಾತ್ರಿಯ ಹೊತ್ತು ಇವುಗಳನ್ನು‌ ಕದಿಯಲು ಸ್ಕೆಚ್ ಹಾಕಿದ್ದಾರೆ. ಆದರೆ ಈ ರೀತಿಯ ಕಳ್ಳರ ಕಾಟ ತಪ್ಪಿಸಲು ಸಿಸಿ ಕೋಳಿ ಸಾಕಣೆಗಾರರು ಸಿಸಿ ಟಿವಿ ಅಳವಡಿಸಿದ್ದರು. ಆದರೆ ಇದನ್ನರಿಯದ 5 ಜನರ ಕಳ್ಳರ ಗ್ಯಾಂಗ್, ಇದ್ದ 40 ಕೋಳಿಗಳಲ್ಲಿ 15 ಕೋಳಿಗಳನ್ನು ಎಗರಿಸಿದ್ದಾರೆ.

15 ಕೋಳಿ ಕದ್ದರೂ ಅವರ ಅತಿ ಆಸೆ ಕಡಿಮೆಯಾಗಿಲ್ಲ. ಇನ್ನಷ್ಟು ಕೋಳಿಗಳನ್ನು ಕದಿಯುವ ಉದ್ದೇಶದಿಂದ ಗೂಡಿನ‌ ಪಕ್ಕ ಬಂದಾಗ ಕೋಳಿಗಳು ಜೋರಾಗಿ ಕೂಗಿವೆ, ಆಗ ಸುಧಾ ಮತ್ತು‌ ಮನೆಯವರು ಎಚ್ಚೆತ್ತುಕೊಂಡಿದ್ದಾರೆ. ಐವರು ಕಳ್ಳರಲ್ಲಿ ಎಲ್ಲರೂ ತಪ್ಪಿಸಿಕೊಂಡರೂ ಕೂಡ ಒಬ್ಬ ಮನೆಯವರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದಿದ್ದಾನೆ. ಸದ್ಯ, ಈ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Shakthi yojane Scheme: ಇನ್ನೂ ಖಾಸಗಿ ಬಸ್ ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ? ಶಕ್ತಿ ಯೋಜನೆ ವಿಸ್ತರಣೆ ಬಗ್ಗೆ ಸರ್ಕಾರದ ಸುಳಿವು?

You may also like

Leave a Comment