Maruti Suzuki: ಭಾರತದ ಮಾರುಕಟ್ಟೆಯಲ್ಲಿ ಪ್ರಮಖವಾದ ವಾಹನ ತಯಾರಕ ಕಂಪನಿಗಳಲ್ಲಿ ಮಾರುತಿ ಸುಜುಕಿ (Maruti Suzuki) ಕೂಡ ಒಂದು. ಇದು ಆಗಾಗ ಹೊಸ ವಿನ್ಯಾಸದ, ವಿನೂತನವಾದ ವಾಹನಗಳನ್ನು ಲಾಂಚ್ ಮಾಡುತ್ತಿರುತ್ತವೆ. ಇಂತಹ ಸಮಯದಲ್ಲಿ ಕೈಗೆಟುಕುವ ಬೆಲೆಯ ಕಾರುಗಳ ವಿನ್ಯಾಸ ಹಾಗೂ ವೈಶಿಷ್ಟ್ಯವು ಪ್ರತಿಯೊಬ್ಬ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತದೆ. ಅಂತೆಯೇ ಇದೀಗ ಮಾರುತಿ ಸುಜುಕಿಯವರ ಅಗ್ಗದ ಬೆಲೆಯ ಆಲ್ಟೊ ಕೆ10 (Alto K10) ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದ್ದು, ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಹೌದು, ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರೋ ಈ ಆಲ್ಟೊ ಕೆ10 (Alto K10) ಕಾರನ್ನು ನೀವು ಇವತ್ತು ಬುಕ್ಕಿಂಗ್ ಮಾಡಿದರೆ, ವಿತರಣೆಯಾಗಲು 8 ವಾರಗಳು (ಎರಡು ತಿಂಗಳು) ಕಾಯಬೇಕಾಗಿದೆ. ಆದರೆ ಈ ಬೆನ್ನಲ್ಲೇ ಈ ಕಾರು ಖರೀದಿಸುವವರಿಗೆ ಕಂಪೆನಿಯು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಇದೇ ತಿಂಗಳು (ಜುಲೈ) ಆಲ್ಟೊ ಕೆ10 ಕೊಂಡುಕೊಂಡರೆ ನಿಮಗೆ ಬರೋಬ್ಬರಿ 59,000ರೂ ಡಿಸ್ಕೌಂಟ್ ದೊರೆಯಲಿದೆ.
ಕಾರಿನ ವಿನ್ಯಾಸ:
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಆಲ್ಟೊ ಕೆ10 ರೂ.4 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. LXi, VXi, ಸೇರಿದಂತೆ ನಾಲ್ಕು ರೂಪಾಂತರ ಹಾಗೂ ಸಾಲಿಡ್ ವೈಟ್, ಸಿಲ್ಕಿ ಸಿಲ್ವರ್, ಗ್ರಾನೈಟ್ ಗ್ರೇ, ಸ್ಪೀಡಿ ಬ್ಲೂ, ಸಿಜ್ಲಿಂಗ್ ರೆಡ್, ಅರ್ಥ್ ಗೋಲ್ಡ್, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ.
ಏನಿದು ಇದರ ಫೀಚರ್ಸ್?
ಮಾರುತಿ ಸುಜುಕಿ ಆಲ್ಟೊ ಕೆ10 ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1 ಲೀಟರ್ ಡ್ಯೂಯಲ್ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. 67 PS ಗರಿಷ್ಠ ಪವರ್ ಹಾಗೂ 89Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಸಿಎನ್‌ಜಿ ಕಿಟ್ ಪಡೆದಿರುವ ಆಲ್ಟೊ ಕೆ10, ಅದೇ ಎಂಜಿನ್ ಹೊಂದಿದ್ದು, ಆದರೆ, ಕಾರ್ಯಕ್ಷಮತೆ ಕೊಂಚ ಕಡಿಮೆಯಿದೆ. 57 PS ಪವರ್ ಹಾಗೂ 82 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಕೇವಲ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 24.39 – 24.9 kmpl ಮೈಲೇಜ್ ನೀಡುತ್ತದೆ.
ಇದನ್ನು ಓದಿ: Mukesh Ambani Car: ಮುಕೇಶ್ ಅಂಬಾನಿಯ ಇದು ಕಾರಾ, ಉಕ್ಕಿನ ಕೋಟೆಯಾ? ಸೇನೆ ಕೂಡ ಮುಟ್ಟಲಾಗದ ಕಾರು !
