Home » Rajasthan Anju Case: ಪಾಕ್ ಗೆಳೆಯನನ್ನು ಹುಡುಕಿ ಹೋಗಿದ್ದ ವಿವಾಹಿತೆ, ಅಲ್ಲಿ ಯಾರ ಜತೆ ಮಲಗಿದ್ದಳು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

Rajasthan Anju Case: ಪಾಕ್ ಗೆಳೆಯನನ್ನು ಹುಡುಕಿ ಹೋಗಿದ್ದ ವಿವಾಹಿತೆ, ಅಲ್ಲಿ ಯಾರ ಜತೆ ಮಲಗಿದ್ದಳು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

0 comments
Rajasthan Anju Case

Rajasthan Anju Case: ತನ್ನ ಫೇಸ್​ಬುಕ್​ ಫ್ರೆಂಡ್​ ಭೇಟಿಯಾಗಲು ಅಧಿಕೃತ ವೀಸಾದೊಂದಿಗೆ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಕುಗ್ರಾಮಕ್ಕೆ ಹೋಗಿರುವ ಸುದ್ದಿ ದೇಶದಲ್ಲಿ ಸಂಚಲನ ಮೂಡಿಸಿದೆ. ಇದೀಗ ಈ ಪ್ರಕರಣಕ್ಕೆ( Rajasthan Anju Case) ಸಂಬಂಧಿಸಿದಂತೆ, ಪಾಕ್ ವ್ಯಕ್ತಿ ನುಸ್ರುಲ್ಲಾ ಅಚ್ಚರಿಯ ಹೇಳಿಕೆಯನ್ನು ಹೇಳಿದ್ದಾರೆ.

ಫೇಸ್‌ಬುಕ್(Facebook) ಸ್ನೇಹಿತನನ್ನು ಭೇಟಿಯಾಗಲು ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ವಿವಾಹಿತ ಭಾರತೀಯ ಮಹಿಳೆ ತನ್ನ ವೀಸಾ ಅವಧಿ ಮುಗಿದ ನಂತರ ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ. ಆಕೆಯನ್ನು ಮದುವೆಯಾಗುವ ಯಾವುದೇ ಯೋಚನೆ ಇಲ್ಲ ಎಂದು ಪಾಕ್ ಸ್ನೇಹಿತ (Pakistan friend) ತಿಳಿಸಿದ್ದಾರೆ.

ಪ್ರೀತಿ ಪ್ರೇಮದ ಆಯಾಮವನ್ನು ತಳ್ಳಿ ಹಾಕಿರುವ ನಸ್ರುಲ್ಲಾ, ಅಂಜು ಅವರನ್ನು ಮದುವೆಯಾಗುವ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದ್ದಾರೆ. ಅಂಜು ನನ್ನ ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ತಂಗಿದ್ದಾಳೆ ಎಂದು ಹೇಳಿದ್ದಾನೆ.

ಅಂಜು ಅವರು ನಸ್ರುಲ್ಲಾ ಅವರನ್ನು ಭೇಟಿಯಾಗಲು ಪಾಕಿಸ್ತಾನದ ಮಾನ್ಯತೆ ಪಡೆದ ಪಾಕಿಸ್ತಾನಿ ವೀಸಾದ(Pakistan visa) ಮೇಲೆ ಪಾಕಿಸ್ತಾನದ ಬುಡಕಟ್ಟು ಖೈಬರ್ ಪುಂಖ್ಯಾ ಪ್ರಾಂತ್ಯದ ಅಪ್ಪ‌ ದಿ‌ರ್ ಜಿಲ್ಲೆಗೆ ಪ್ರಯಾಣಿಸಿದ್ದಾರೆ. ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ಗೆ ಕಳುಹಿಸಲಾದ ಆಂತರಿಕ ಸಚಿವಾಲಯದ ಅಧಿಕೃತ ದಾಖಲೆಯ ಪ್ರಕಾರ, ಅಂಜುಗೆ 30 ದಿನಗಳ ವೀಸಾವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಚಾನ್ಸರಿಗೆ ತಿಳಿಸಲಾಗಿದೆ.

ಅಂಜು ಆರಂಭದಲ್ಲಿ ಪೊಲೀಸರ ವಶದಲ್ಲಿದ್ದರು ಆದರೆ ಅವರ ಪ್ರಯಾಣ ದಾಖಲೆಗಳನ್ನು ಜಿಲ್ಲಾ ಪೊಲೀಸರು ಪರಿಶೀಲಿಸಿದ ನಂತರ ಬಿಡುಗಡೆ ಮಾಡಿದ್ದರು. ಎಲ್ಲಾ ಪ್ರಯಾಣದ ದಾಖಲೆಗಳು ಸರಿಯಾಗಿವೆ ಎಂದು ಕಂಡುಬಂದ ನಂತರ ಆಕೆಯ ಭೇಟಿಗೆ ಅನುಮತಿ ನೀಡಲಾಗಿದೆ. ಅವರಿಗೆ ಜಿಲ್ಲಾಡಳಿತದಿಂದ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಅಂಜು ನಮ್ಮ ಕುಟುಂಬದೊಂದಿಗೆ ಸುರಕ್ಷಿತವಾಗಿದ್ದಾಳೆ ಎಂದು ನಸ್ರುಲ್ಲಾ ಹೇಳಿದ್ದಾರೆ.

ರಾಜಸ್ಥಾನದ ಭಿವಾಡಿ ಜಿಲ್ಲೆಯ ಅಂಜು (34) ಎಂಬ ಮಹಿಳೆಗೆ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನದ ನಸ್ರುಲ್ಲಾ (29) ಎಂಬಾತನ ಪರಿಚಯವಾಗಿದ್ದು, 2019ರಲ್ಲಿ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. ಇನ್ನು ಆತನನ್ನು ಭೇಟಿಯಾಗಲು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಅಪ್ಪರ್ ದಿರ್ ಜಿಲ್ಲೆಗೆ ಅಂಜು ತೆರಳಿದ್ದಳು. ಈಕೆಗೆ ಈಗಾಗಲೇ ವಿವಾಹವಾಗಿದ್ದು, 15 ವರ್ಷದ ಮಗಳು ಹಾಗೂ 6 ವರ್ಷದ ಮಗನಿದ್ದಾನೆ. ಅಂಜು ಪತಿ ಹೆಸರು ಅರವಿಂದ್ ಎಂದಾಗಿದೆ.

 

ಇದನ್ನು ಓದಿ: Puttur: ಹೆಲ್ಮೆಟ್ ಧರಿಸಿದ್ದರೆ ಗೆಳೆಯ ಬದುಕುಳಿಯುತ್ತಿದ್ದ!! ತಿಂಗಳ ಹಿಂದೆ ಖರೀದಿಸಿದ್ದ R15, ಯುವಕನ ಸಾವಿಗೆ ಗೆಳೆಯರ ಕಂಬನಿ 

You may also like

Leave a Comment