Home » ನಿಡ್ಪಳ್ಳಿ ಗ್ರಾ.ಪಂ.ಉಪ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ,ಅಲ್ಪ‌ ಮತದಿಂದ ಸೋತ ಪುತ್ತಿಲ ಪರಿವಾರ

ನಿಡ್ಪಳ್ಳಿ ಗ್ರಾ.ಪಂ.ಉಪ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ,ಅಲ್ಪ‌ ಮತದಿಂದ ಸೋತ ಪುತ್ತಿಲ ಪರಿವಾರ

by Praveen Chennavara
0 comments
Eletion

ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎರಡು ಗ್ರಾ ಪಂ ವಾರ್ಡ್ ಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಮುಗಿದಿದ್ದು ಎರಡು ಕ್ಷೇತ್ರದ ಫಲಿತಾಂಶ ಪ್ರಕಟವಾಗಿದೆ. ಆರ್ಯಾಪು ಕ್ಷೇತ್ರದಲ್ಲಿ ಪುತ್ತಿಲ ಪರಿವಾರದಿಂದ ಕಣಕ್ಕಿಳಿದಿದ್ದ ಸುಬ್ರಹ್ಮಣ್ಯ ಬಲ್ಯಾಯ ಅವರು ವಿಜಯಿಯಾಗಿದ್ದಾರೆ. ನಿಡ್ನಳ್ಳಿ ವಾರ್ಡ್‌ನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸತೀಶ್ ರೈ ನೆಲ್ಲಿಕಟ್ಟೆಯವರು ವಿಜಯದ ನಗೆ ಬೀರಿದ್ದಾರೆ. ಅವರು ತಮ್ಮಹತ್ತಿರದ ಪ್ರತಿ ಸ್ಪರ್ಧಿ ಪುತ್ತಿಲ ಪರಿವಾರದ ಜಗನ್ನಾಥ ರೈ ಕೊಳೆಂಬೆತ್ತಿಮಾರ್ ಅವರನ್ನು 27 ಮತಗಳ ‘ಅಲ್ಪ ಮತಗಳ ಅಂತರದಿಂದ ಸೋಲಿಸಿದ್ದಾರೆ. ಹೀಗಾಗಿ ಫಲಿತಾಂಶ ದೃಢಿಕರಿಸಲು ರಿ ಕೌಂಟಿಗ್ ನಡೆಸಲಾಯಿತು ಎಂದು ತಿಳಿದು ಬಂದಿದೆ .

You may also like

Leave a Comment