G Parameshwar: ಇಂದು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ (G Parameshwar) ಅವರು ಉಡುಪಿಯ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿನಿಯರ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ ಬಿಜೆಪಿಯವರು ಯಾಕೆ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಯಾರು ಕೂಡ ಪ್ರವಾಹದ ಬಗ್ಗೆ ಮಾತಾಡಲಿಲ್ಲ, ಬರಗಾಲದ ಬಗ್ಗೆ ಮಾತಾಡಲಿಲ್ಲ ಈಗ ಇಂತಹ ಸಣ್ಣ ವಿಷಯದ ಕುರಿತು ಮಾತನಾಡುತ್ತಾರೆ. ಬಿಜೆಪಿಗೆ ಮಾಡೋಕೆ ಬೇರೆ ಕೆಲಸ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ಪ್ರಕಾರ, ಇದೊಂದು ಸಣ್ಣ ಘಟನೆ ಕಾಲೇಜಿನ ಫ್ರೆಂಡ್ಸ್ ಗಳೇ ಮಾಡಿಕೊಂಡಿರುವುದು. ಈ ವಿಷಯಕ್ಕೆ ಇಷ್ಟು ದೊಡ್ಡದಾಗಿ ರಾಜಕೀಯ ಬಣ್ಣ ಕೊಡಬೇಕಾ? ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರು ಇದಾರೆ ಹಾಗೂ ಸಂಬಂಧಪಟ್ಟಂತೆ ಗೈಡ್ ಲೈನ್ಸ್ ನೀಡಲಾಗಿದೆ ಎಂದರು.
ಯುಜಿಸಿನವರು ಒಂದು ಶಿಕ್ಷಣ ಸಂಸ್ಥೆ ನಡೆಸಬೇಕಾದರೆ ರಾಗಿಂಗ್ ಇರಬಹುದು ಬೇರೆ ಇಂತಹ ಘಟನೆಗಳಿಗೆ ಏನು ಮಾಡಬೇಕು ಎಂದು ಯೋಚಿಸಿ ಅವರು ಗೈಡ್ಲೈನ್ಸ್ ಮಾಡಿದ್ದಾರೆ. ಅದಕ್ಕೋಸ್ಕರ ಪ್ರಿನ್ಸಿಪಾಲ್ ಏನು ಕ್ರಮ ತೆಗೆದುಕೊಳ್ಳಬೇಕು. ಅದರ ಜೊತೆಗೆ ಇಲಾಖೆ ಕೂಡ ಮಾಡುತ್ತೆ ಎಂದು ಹೇಳಿದರು.
ಇನ್ನು ಇದನ್ನು ಮೀರಿ ಏನಾದರೂ ಕ್ರಿಮಿನಲ್ ಚಟುವಟಿಕೆಗಳು ನಡೆದಿವೆ ಎಂದಾದರೆ ಅದರ ಕುರಿತು ದೂರು ನೀಡಿದರೆ ಪೊಲೀಸರು ಕ್ರಮ ಕೈಗೊಳ್ಳಬಹುದು.
ಸುಮ್ಮನೆ ಇಂತಹ ಸಣ್ಣ ಸಣ್ಣ ವಿಚಾರಗಳನ್ನು ರಾಜ್ಯದಲ್ಲಿ ದೊಡ್ಡದಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: Celebrities: ಸಿನಿ ರಂಗದ ಈ ಖ್ಯಾತ ನಟರಿಗಿದೆ ಗಂಭೀರ ಕಾಯಿಲೆ !
