PM Kisan 14th installment: ಕೇಂದ್ರ ಸರ್ಕಾರ ರೈತರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಅಂತೆಯೇ ಈ ಪ್ರಯುಕ್ತ ಮೋದಿ ಸರ್ಕಾರವು ವಿಶೇಷವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೈತರಿಗೆ ಸಾಕಷ್ಟು ಲಾಭವಾಗುತ್ತಿದೆ ಎಂದು ಹೇಳಬಹುದು.14 ನೇ ಕಂತಿನ ಹಣವನ್ನು (PM Kisan 14th installment) ಇಂದು(ಜು.27) ಬಿಡುಗಡೆ ಮಾಡಲಿದೆ. ಸದ್ಯ ಇದೀಗ ಫಲಾನುಭಾವಿಗಳ ಪಟ್ಟಿ ಬಿಡುಗಡೆಯಾಗಿದ್ದು ,ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನದ ಮಾಹಿತಿ ಇಲ್ಲಿದೆ.
ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ಗೆ ಲಿಂಕ್ ಮಾಡಿದ್ದರೆ ನೀವು ಸ್ಥಳೀಯ ಅಂಚೆ ಕಛೇರಿಯನ್ನು ಸಂಪರ್ಕಿಸಬೇಕು. ಈ ಬಾರಿಯ ಕಂತಿನ ಹಣ ಪಡೆಯಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB)ನಲ್ಲಿ ಹೊಸ (DBT ಸಕ್ರಿಯಗೊಳಿಸಿದ) ಖಾತೆಯನ್ನು ತೆರೆಯಬೇಕು. ಏಕೆಂದರೆ ಸರ್ಕಾರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಮತ್ತು ಎನ್‌ಪಿಸಿಐ ಲಿಂಕ್ ಮಾಡಲು ಭಾರತ ಅಂಚೆ ಇಲಾಖೆಗೆ ಅನುಮತಿ ನೀಡಿದೆ.
ಆಫ್ ಲೈನ್ ಮುಖಾಂತರ ಇ-ಕೆವೈಸಿ (e-KYC) ಅಪ್ಡೇಟ್ ಮಾಡಲು ಈ ವಿಧಾನ ಅನುಸರಿಸಿರಿ:
ರೈತರು ಹತ್ತಿರದ ಸೈಬರ್ ಸೆಂಟರ್ ರೈತ ಸಂಪರ್ಕ ಕೇಂದ್ರ, ಗ್ರಾ.ಪಂ. ಅಥವಾ ಗ್ರಾಮ ಓನ್‌ಗಳಲ್ಲಿ ಆಧಾರ್ ಸಂಖ್ಯೆ ಮತ್ತು ಆಧಾರ್‌ಗೆ ಜೋಡಣೆಯಾದ ಮೊಬೈಲ್ ಸಂಖ್ಯೆಯನ್ನು (pmkisanekyc) ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಆಧಾರ್‌ಗೆ ಜೋಡಣೆಯಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದಾಗ ಇಕೆವೈಸಿ ಆದಂತೆ. ಅಥವಾ PMKISAN GOI ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮುಖ ಚಹರೆ ತೋರಿಸಿ ಇ-ಕೆವೈಸಿ ಅಪ್ಡೇಟ್ ಮಾಡಬಹುದು.
ಆನ್ಲೈನ್ ಮುಖಾಂತರ ಇ-ಕೆವೈಸಿ ಅಪ್ಡೇಟ್ ಮಾಡಲು ಈ ವಿಧಾನವನ್ನು ಅನುಸರಿಸಿರಿ.
ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ಗೆ https://pmkisan.gov.in ಭೇಟಿ ನೀಡಿ. ಅಲ್ಲಿ ಇ-ಕೆವೈಸಿ (E-KYC) ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್ ಸಂಖ್ಯೆ ನಮೂದಿಸಲು ಕೇಳುತ್ತದೆ ಅಲ್ಲಿ ನಮೂದಿಸಿರಿ. ಆ ಬಳಿಕ ಕ್ಯಾಪ್ಚಾ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿರಿ. ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ. Get OTP ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ಗೆ ಬಂದ ಒಟಿಪಿ (One Time Password) ನಂಬರ್ ಅನ್ನು ನಮೂದಿಸಿ.
ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇರಬೇಕು. ಇದಕ್ಕಾಗಿ, ನೀವು ಮೊದಲು ನೋಂದಾಯಿಸಿಕೊಳ್ಳಬೇಕು, ನಂತರ ಇ-ಕೆವೈಸಿ ಕೂಡ ಮಾಡಬೇಕು. ನಂತರ ಫಲಾನುಭವಿಗಳ ಪಟ್ಟಿಗೆ ಹೋಗಿ ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬಹುದು.
PM ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?
# ಮೊದಲನೆಯದಾಗಿ, ನೀವು ಪ್ರಧಾನಿಯವರ ಸಮ್ಮಾನ್ ನಿಧಿಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ.
# ಇಲ್ಲಿ ಮುಖಪುಟದಲ್ಲಿ ಕಾಣುವ ‘ಫಾರ್ಮರ್ ಕಾರ್ನರ್ (Farmers Corner)’ ಬಟನ್ ಮೇಲೆ ಕ್ಲಿಕ್ ಮಾಡಿ.
# Farmers Corner ವಿಭಾಗದಲ್ಲಿ ‘ಫಲಾನುಭವಿಗಳ ಪಟ್ಟಿ’ಯನ್ನು ಆಯ್ಕೆಯನ್ನು ಕ್ಲಿಕ್ ಮಾಡಿ.
# ಮುಂದಿನ ಪುಟದಲ್ಲಿ, ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್, ಗ್ರಾಮ ಮುಂತಾದ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು.
# ಈಗ Get Report (ವರದಿ ಪಡೆಯಿರಿ) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ, ಪರದೆಯ ಮೇಲೆ ನಿಮ್ಮ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ .
