Tulasi Plant: ತುಳಸಿ ಗಿಡ ಇದೊಂದು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ. ಜೊತೆಗೆ ಸನಾತನ ಧರ್ಮದ ಪ್ರಕಾರ ತುಳಸಿ ಗಿಡವು (Tulasi Plant) ಮನೆಯ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿ ಅದೃಷ್ಟ ಬೆಳಗುತ್ತದೆ. ಇನ್ನು ತುಳಸಿ ಎಲೆಗಳಿಲ್ಲದೆ, ವಿಷ್ಣು ಮತ್ತು ಕೃಷ್ಣನ ದೈನಂದಿನ ಪೂಜೆ ಪೂರ್ಣಗೊಳ್ಳುವುದಿಲ್ಲ ಅಂತ ಸಹ ಹೇಳಲಾಗುತ್ತದೆ.
ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಅನೇಕ ಜನರು ತಮ್ಮ ಮನೆಗಳಲ್ಲಿ ತುಳಸಿ ಗಿಡವನ್ನ ಜಾಗೃತಿಯಿಂದ ಬೆಳೆಸುತ್ತಾರೆ. ಅದಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಾರೆ. ಅಲ್ಲದೇ, ಮಹಿಳೆಯರು ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ ತುಳಸಿ ಗಿಡಕ್ಕೆ ಪೂಜೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಇರುತ್ತದೆ ಎನ್ನುವ ನಂಬಿಕೆ ಇದೆ.
ಮುಖ್ಯವಾಗಿ ತುಳಸಿ ಗಿಡವನ್ನ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇದನ್ನ ಪೂಜಿಸುವುದರಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ. ಇನ್ನು ಜ್ಯೋತಿಷ್ಯದ ಪ್ರಕಾರ ಕೆಲವೊಂದು ವಸ್ತುಗಳನ್ನ ತುಳಸಿಗೆ ಕಟ್ಟಿದರೆ ಸಮಸ್ಯೆಗಳೇ ಬರುವುದಿಲ್ಲ ಎನ್ನಲಾಗುತ್ತದೆ. ಹಾಗಾದ್ರೆ ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ಹೌದು, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಹಾಗೂ ಸಂಪತ್ತು ಹೆಚ್ಚಾಗಬೇಕು ಎಂದರೆ ಒಂದು ವಸ್ತುವನ್ನ ತುಳಸಿ ಗಿಡಕ್ಕೆ ಕಟ್ಟಬೇಕು. ಆ ವಸ್ತು ಯಾವುದು ಹಾಗೂ ಅದರಿಂದ ಯಾವ ರೀತಿಯಾಗಿ ಲಾಭವಾಗುತ್ತದೆ ಎಂಬುದು ಇಲ್ಲಿದೆ.
ನೀವು ತುಳಸಿ ಗಿಡಕ್ಕೆ ಕೆಂಪು ಹಾಗೂ ಅರಿಶಿನ ಬಣ್ಣದ ರಕ್ಷಾದಾರವನ್ನ ಕಟ್ಟಬೇಕು. ಇದರಿಂದ ಮನೆಯಲ್ಲಿ ಸಂತೋಷ ಮೂಡುತ್ತದೆ ಹಾಗೂ ನಿಮ್ಮೆಲ್ಲಾ ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೇ, ಇದರಿಂದ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ.
ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ನಕಾರಾತ್ಮಕ ಶಕ್ತಿ ಕಡಿಮೆ ಆಗಿ, ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಅಲ್ಲದೇ, ನೀವು ಪ್ರತಿದಿನ ಸಂಜೆ ತುಳಸಿ ಗಿಡಕ್ಕೆ ತುಪ್ಪದ ದೀಪವನ್ನು ಹಚ್ಚಬೇಕು. ಇದರಿಂದ ನಿಮ್ಮ ಮನೆಯಲ್ಲಿ ಶಾಂತಿ ಹಾಗೂ ಸಂತೋಷ ಹೆಚ್ಚಾಗುತ್ತದೆ.
ಬೆಳಗ್ಗೆ ಸ್ನಾನ ಮಾಡಿದ ನಂತರ, ಸ್ವಲ್ಪ ನೀರನ್ನು ತೆಗೆದುಕೊಂಡು ತುಳಸಿ ಗಿಡಕ್ಕೆ ಅಭಿಷೇಕ ಮಾಡಬೇಕು. ಅದರ ನಂತರ ತುಳಸಿ ಗಿಡಕ್ಕೆ ರಂಗೋಲಿ ಹಾಕಿ ಕುಂಕುಮ ಮತ್ತು ಅರಿಶಿನವನ್ನು ಹಚ್ಚಿ ಪೂಜೆ ಮಾಡಿದರೆ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು.
ನೀವು ಪೂಜೆ ಮಾಡಿದ ನಂತರ ತುಳಸಿ ಗಿಡದ ಸುತ್ತಲೂ ಮೂರು ಪ್ರದಕ್ಷಿಣೆಗಳನ್ನು ಹಾಕಬೇಕು. ನಂತರ ತುಪ್ಪದ ದೀಪ ಹಚ್ಚಿ, ರಕ್ಷಾದಾರವನ್ನ ಕಟ್ಟಬೇಕು. ಇದರಿಂದ ಶ್ರೀಮಂತಿಕೆ ಬೇಗ ನಿಮ್ಮನ್ನ ಹುಡುಕಿ ಬರುತ್ತದೆ.
ಇದನ್ನು ಓದಿ: Aadhaar Card: ಆಧಾರ್ ನ್ನು ಪಡಿತರ ಚೀಟಿಗೆ ಲಿಂಕ್ ಮಾಡಿಸದ ಜನರಿಗೆ ಕೇಂದ್ರ ಸರಕಾರದಿಂದ ಬಂತು ಬಿಗ್ ಅಪ್ಡೇಟ್!
