Gruha Jyoti Scheme: ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ. ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ. ಈ ತಿಂಗಳಿನಿಂದ ಗ್ರಾಹಕರ ಮನೆಬಾಗಿಲಿಗೆ ಬರಲಿದೆ ಶೂನ್ಯ ವಿದ್ಯುತ್ ಬಿಲ್! ಯಾವ ತಿಂಗಳಿನಿಂದ?! ಇಲ್ಲಿದೆ ನೋಡಿ ಮಾಹಿತಿ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಗೃಹಜ್ಯೋತಿ ಯೋಜನೆ (Gruha Jyothi Scheme) ಆಗಸ್ಟ್ ಒಂದರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಜುಲೈ 25 ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಿರುವ ಫಲಾನುಭವಿಗಳಿಗೆ ಮಾತ್ರ ಉಚಿತ ವಿದ್ಯುತ್ನ ಲಾಭ ದೊರೆಯಲಿದೆ. ಜುಲೈ 25 ರ ನಂತರ ಅರ್ಜಿ ಸಲ್ಲಿದ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸೆಪ್ಟೆಂಬರ್ ತಿಂಗಳಲ್ಲಿ ಸಿಗಲಿದೆ.
ಗೃಹಜ್ಯೋತಿ ಯೋಜನೆಗೆ ಜೂನ್ 18 ರಿಂದಲೇ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಸೆವಾ ಸಿಂಧು(Seva sindhu) ಮೂಲಕ ನೊಂದಾವಣಿ ಮಾಡಬಹುದಾಗಿದೆ. ಗೃಹಜ್ಯೋತಿ ಯೋಜನೆಗೆ 1,18,50, 474 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಅಂದರೆ ಎರಡೂವರೆ ಕೋಟಿ ಫಲಾನಿಭವಿಗಳ ಪೈಕಿ ಶೇ.60 ರಷ್ಟು ಮಾತ್ರ ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಶೇ.40 ರಷ್ಟು ಗ್ರಾಹಕರು ಅರ್ಜಿ ಸಲ್ಲಿಸಲು ಬಾಕಿ ಉಳಿದಿದ್ದರು.
