Nobel world record: ನೊಬೆಲ್ ವಿಶ್ವ ದಾಖಲೆಯನ್ನು ಹೊಂದುವುದು ಅಷ್ಟು ಸುಲಭದ ಮಾತಲ್ಲ. ಆದರೆ ಆರು ತಿಂಗಳ ಮಗುವೊಂದು ನೊಬೆಲ್ ವಿಶ್ವ ದಾಖಲೆ (Nobel world record) ಪಡೆಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಹೌದು, ವೈಎಸ್‌ಆರ್ ಕಡಪ ಜಿಲ್ಲೆಯ ಪ್ರದ್ದೂರು ಪಟ್ಟಣದ ಶಾಸ್ತ್ರಿನಗರದ ಪವನ್‌ಕುಮಾರ್ ಮತ್ತು ಸೌಮ್ಯ ಪ್ರಿಯಾ ದಂಪತಿಯ ಪ್ರಜ್ವಲ್ ಎಂಬ ಮಗ, ಪ್ರಾಣಿ, ಪಕ್ಷಿ ಹಣ್ಣು, ವಾಹನ, ಸಂಖ್ಯೆ, ತರಕಾರಿಗಳ ಹೆಸರುಗಳನ್ನು ಗುರುತಿಸುವ ಮೂಲಕ ತನ್ನ ನೆನಪಿನ ಶಕ್ತಿಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.
ಆರು ತಿಂಗಳ ವಯಸ್ಸಿನಲ್ಲಿ ಅಂಬೆಗಾಲಿಡುವ ಮಕ್ಕಳು ಮಾತನಾಡಲು ಕಷ್ಟಪಡುತ್ತಿರುವಾಗ, ತಂದೆ-ತಾಯಿಯನ್ನು ನೆನಪಿಸಿಕೊಳ್ಳುವುದೇ ಸ್ವಲ್ಪ ಕಷ್ಟ, ಹೀಗಿರುವಾಗ ಈ ಮೇಧಾವಿ ಮಗು ತಾನು ನೋಡಿದ್ದನ್ನು ಟಕ್ ಅಂತಾ ನೆನಪಿಸಿಕೊಳ್ಳುತ್ತಾನೆ.
ಈ ಮಗು ತನ್ನ ತಾಯಿ ತೋರಿಸಿದ ಪ್ರಾಣಿಗಳು, ಹಣ್ಣುಗಳು, ವಾಹನಗಳು, ಪಕ್ಷಿಗಳು, ತರಕಾರಿಗಳು ಮತ್ತು ಸಂಖ್ಯೆಗಳ ಫೋಟೋಗಳನ್ನು ಗುರುತಿಸಲು ಆರಂಭಿಸಿದ. ತಡಮಾಡದೆ ತಾಯಿ ತನ್ನ ಮಗುವಿನ ಚಾಣಾಕ್ಷತೆಯನ್ನು ವಿಡಿಯೋ ಮಾಡಿ ನೊಬೆಲ್ ವಿಶ್ವ ದಾಖಲೆಗೆ ಕಳುಹಿಸಿದ್ದಾರೆ.
ಇದೇ ತಿಂಗಳ 19ರಂದು ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಗೆ ವಿಡಿಯೋ ಕಳುಹಿಸಿದ್ದು, ಮೇಧಾವಿ ಮಗು ಪ್ರಜ್ವಲ್ ವಿಡಿಯೋಗಳನ್ನು ನೋಡಿದ ಸಂಸ್ಥೆಯ ಪ್ರತಿನಿಧಿಗಳು ಮಗುವಿಗೆ ಆನ್ ಲೈನ್ ನಲ್ಲಿ 29ರಂದು ನೊಬೆಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಕಳುಹಿಸಿದ್ದಾರೆ.
ಇನ್ನು, ತಮ್ಮ ಮಗುವಿಗೆ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ಪಾಲಕರು ಅಪಾರ ಸಂಭ್ರಮದಲ್ಲಿದ್ದಾರೆ.
ಇದನ್ನು ಓದಿ: Hijab: ಹೊಸ ನಿಯಮ; ಹಿಜಾಬ್ ಧರಿಸದ ಮಹಿಳೆಯರು ಕೆಲಸದಿಂದ ವಜಾ! ಹೊಸ ನಿಯಮಕ್ಕೆ ಮುಂದಾದ ಈ ದೇಶ!!!
