Home » ಅಗ್ನಿಪಥ್ : ಭಾರತೀಯ ವಾಯುಪಡೆಯಲ್ಲಿ ನೇಮಕಾತಿ, ನೋಂದಣಿಗೆ ಆ.17 ಕೊನೆಯ ದಿನ

ಅಗ್ನಿಪಥ್ : ಭಾರತೀಯ ವಾಯುಪಡೆಯಲ್ಲಿ ನೇಮಕಾತಿ, ನೋಂದಣಿಗೆ ಆ.17 ಕೊನೆಯ ದಿನ

by Praveen Chennavara
0 comments

 

ಬೆಂಗಳೂರು : ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆ ಯಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆನ್‌ಲೈನ್ ಪರೀಕ್ಷೆಗೆ ಪೂರ್ವ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಆಸಕ್ತ ಅವಿವಾಹಿತ ಯುವಕ ಹಾಗೂ ಯುವತಿಯರು ವೆಬ್‌ಸೈಟ್- http://agnipathvayu.cdac.in-CT LOCOTES ಮಾಡಿಕೊಳ್ಳಬಹುದಾಗಿದೆ.

2003ರ ಜೂನ್ 27ರಿಂದ 2006ರ ಡಿಸೆಂಬರ್ 27ರ ನಡುವೆ ಜನಿಸಿರುವ, ಪಿಯುಸಿಯಲ್ಲಿ (ಕಲಾ, ಕಲೆ, ವಾಣಿಜ್ಯ ವಿಜ್ಞಾನ ಮತ್ತು ಡಿಪ್ಲೋಮಾ ಯಾವುದೇ ವಿಷಯಗಳಲ್ಲಿ ಕನಿಷ್ಠ ಶೇ.50 ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಆಗಸ್ಟ್ 17ರ ಒಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ https://careerindianairforce.cdac.in- ವೀಕ್ಷಿಸಬಹುದು ಎಂದು ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like