ಸುಳ್ಯ: ಅಪ್ರಾಪ್ತ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಂತೋಡು ಗ್ರಾಮದ ಬಿಳಿಯಾರು ಎಂಬಲ್ಲಿ ಆ.1ರಂದು ಬೆಳಕಿಗೆ ಬಂದಿದೆ.
ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬಿಳಿಯಾರು ದಿ. ಮೂಸಾ ಎಂಬವರ ಪುತ್ರ ಹನ್ಸಿಫ್ (17) ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತನ ತಾಯಿ ಶಮೀರಾ ಅವರು ಮಗಳ ಚಿಕಿತ್ಸೆಗಾಗಿ ಕ್ಯಾಲಿಕೆಟ್ ಗೆ ತೆರಳಿದ್ದರು. ಈ ಸಂದರ್ಭ ಯುವಕ ಮನೆಯಲ್ಲಿ ಒಬ್ಬನೇ ಇದ್ದು ಜು.31ರಂದು ರಾತ್ರಿ ವೇಳೆ ತನ್ನ ಅಜ್ಜಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಆ.1ರಂದು ಬೆಳಿಗ್ಗೆ ಮನೆಗೆ ಆತನ ಮಾವ ಬಂದಾಗ ಹನ್ಸಿಪ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಬಾಲಕ ಶಾಲೆಬಿಟ್ಟು ತಿರುಗಾಡುತ್ತಿದ್ದು,ಮನೆಯವರು ಆತನಿಗೆ ಶಾಲೆಗೆ ತೆರಳುವಂತೆ ಬುದ್ದಿ ಹೇಳುತ್ತಿದ್ದರು ಎನ್ನಲಾಗಿದ್ದು, ಶಾಲೆಗೆ ತೆರಳಲು ಮನಸ್ಸಿಲ್ಲದೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಇದನ್ನು ಓದಿ: ಮನೆ ಕಟ್ಟೋರಿಗೆ, ಮನೆ ನಡೆಸೋರಿಗೆ ಜಿಂದಗಿ ಎಲ್ಲೆಲ್ಲೂ ದುಬಾರಿ – ಯಾವುದಕ್ಕೆ ಎಷ್ಟು ರೇಟು ?
