Accident: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಕಾರನ್ನು ಚಲಾಯಿಸಿದ ಪರಿಣಾಮ 8 ದ್ವಿಚಕ್ರ ವಾಹನಗಳಿಗೆ ಗುದ್ದಿ, ಮರಕ್ಕೆ ಡಿಕ್ಕೆ ಹೊಡೆದ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ಕಾರನ್ನು ವೇಗವಾಗಿ ಚಲಾಯಿಸಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಅಪಘಾತ ಆಂಧ್ರಪ್ರದೇಶದಲ್ಲಿ ನಡೆದಿದ್ದು, ವಿಐಪಿ ರಸ್ತೆಯಲ್ಲಿ ಅವಘಡ ಸಂಭವಿಸಿದೆ. ಮೊದಲಿಗೆ ಮಹಿಳೆ ಕಾರು ಚಾಲನೆ ಮಾಡುತ್ತಿದ್ದು ಎಂದು ಅನೇಕ ವರದಿಗಳು ಹೇಳಿದ್ದವು. ಆದರೆ ಹಿರಿಯ ಪೊಲೀಸ್ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ ಅದು ಪುರುಷ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಗೀತ್ ಮುಖರ್ಜಿ ಎಂಬ ವ್ಯಕ್ತಿ ಈ ಕೃತ್ಯ ಮಾಡಿದ್ದಾನೆ ಎಂದು ಎಂದು ಪೊಲೀಸರು ಗುರುತಿಸಿದ್ದಾರೆ
ಈ ಘಟನೆ ರಾತ್ರಿ 11ಗಂಟೆ ಸುಮಾರಿಗೆ ನಡೆದಿದ್ದು, ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಎನ್‌ಡಿಟಿವಿ ವರದಿಯಲ್ಲಿ ತಿಳಿಸಿದೆ.
ಪೊಲೀಸರು ತನಿಖೆ ಮಾಡುತ್ತಿದ್ದು, ಅಪಘಾತದ ಕುರಿತು ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಕುಡಿದು ಡ್ರೈವ್ ಮಾಡುತ್ತಿದ್ದನೇ ಎಂದು ಪರಿಶೀಲಿಸುತ್ತಿದ್ದಾರೆ.
ಇದನ್ನು ಓದಿ: Gruha Jyothi Scheme: ಫ್ರೀ ವಿದ್ಯುತ್ ಬಿಲ್ ನಿರೀಕ್ಷೆಯಲ್ಲಿದ್ದವರಿಗೆ ಹೈ ವೋಲ್ಟೇಜ್ ಶಾಕ್, ಬಂದೇ ಬಿಡ್ತು ಬಿಲ್ಲು !
