Home » Viral Video: ಪಾತ್ರೆಯೊಳಗೆ ತಲೆ ಸಿಲುಕಿ ಬಾಲಕನ ಪರದಾಟ, ವಿಭಿನ್ನ ರೀತಿಯಲ್ಲಿ ಪಾತ್ರೆ ಕತ್ತರಿಸಿ ತೆಗೆದ ಪೊಲೀಸ್ : ವಿಡಿಯೋ ವೈರಲ್ !

Viral Video: ಪಾತ್ರೆಯೊಳಗೆ ತಲೆ ಸಿಲುಕಿ ಬಾಲಕನ ಪರದಾಟ, ವಿಭಿನ್ನ ರೀತಿಯಲ್ಲಿ ಪಾತ್ರೆ ಕತ್ತರಿಸಿ ತೆಗೆದ ಪೊಲೀಸ್ : ವಿಡಿಯೋ ವೈರಲ್ !

0 comments
Viral Video

Viral Video: 4 ವರ್ಷದ ಬಾಲಕನೋರ್ವ ಆಟವಾಡುತ್ತಾ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿದ್ದು, ಬಳಿಕ ಪಾತ್ರೆಯಿಂದ ತಲೆ ಹೊರತೆಗೆಯಲು ಸಾಧ್ಯವಾಗದೆ ಪರದಾಡಿ, ಕೊನೆಗೆ ಪೊಲೀಸರು ವಿಭಿನ್ನ ರೀತಿಯಲ್ಲಿ ಪಾತ್ರೆ ಕತ್ತರಿಸಿ ತೆಗೆದಿರುವ ಘಟನೆ ತಮಿಳುನಾಡಿನ (tamilnadu) ತಿರುನೇಲ್ವಲಿಯಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ವೈರಲ್ (Viral Video) ಆಗಿದೆ.

ಧಮಂತಲಯೂರು ಗ್ರಾಮದ ಸಿ ಮೈಕೆಲ್ ರಾಜ್ ಅವರ ಪುತ್ರ ನಾಲ್ಕು ವರ್ಷ ಕ್ಸೇವಿಯರ್ ರಾತ್ರಿಯ ವೇಳೆ ಕೆಲವು ಪಾತ್ರೆಗಳನ್ನು ಉಪಯೋಗಿಸಿ ಆಟವಾಡುತ್ತಿದ್ದ. ಬಾಲಕ ಆಟವಾಡುತ್ತ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿದ್ದಾನೆ. ಕೆಲ ಹೊತ್ತು ಹಾಗೇ ಆಟವಾಡಿದ್ದಾನೆ. ನಂತರ ಪಾತ್ರೆ ತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ ಪಾತ್ರೆ ತಲೆಯಿಂದ ಹೊರಬರಲಿಲ್ಲ. ಇದರಿಂದ ಗಾಬರಿಗೊಂಡ ಬಾಲಕ ಚೀರಾಡಲು ಆರಂಭಿಸಿದ್ದಾನೆ.

ಮಗುವಿನ ಚೀರಾಟ ನೋಡಿದ ಪೋಷಕರು ಗಾಬರಿಗೊಂಡಿದ್ದಾರೆ. ನೋಡಿದ್ರೆ ಪಾತ್ರೆ ತಲೆಯಲ್ಲಿ ಸಿಕ್ಕಿಹಾಕಿಕೊಂಡಿದೆ ನಂತರ ಮನೆಯವರು ಆತನ ತಲೆಯಿಂದ ಪಾತ್ರೆಯನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಬಳಿಕ ಗಾಬರಿಯಿಂದ
ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ತಕ್ಷವೇ ಹತ್ತಿರದಲ್ಲೇ ಇರುವ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಪೊಲೀಸ್ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ದಳಗಳು, ಪಾತ್ರೆ ತುಂಡರಿಸುವ ಸಲಕರಣೆಗಳನ್ನು ತಂದು ಯಶಸ್ವಿಯಾಗಿ ಪಾತ್ರೆ ತೆಗೆಯಲಾಗಿದೆ.

ಪೊಲೀಸರು ವಿಭಿನ್ನ ರೀತಿಯಲ್ಲಿ ಪಾತ್ರೆ ಕತ್ತರಿಸಿ ತೆಗೆದಿದ್ದಾರೆ. ಹೌದು,
ಗಾಬರಿಗೊಂಡಿದ್ದ ಬಾಲಕನ ಸಮಾಧಾನಿಸಲು, ಕಾರ್ಯಾಚರಣೆ ವೇಳೆ ಅಡ್ಡಿಯಾಗದಿರಲು ಪೊಲೀಸರು ಮೊಬೈಲ್‌ನಲ್ಲಿ ವಿಡಿಯೋ ಹಾಕಿ ಬಾಲಕನ ಕೈಗೆ ಕೊಟ್ಟಿದ್ದಾರೆ. ಬಳಿಕ ಪೊಲೀಸರು ಕಾರ್ಯಾಚರಣೆ ಆರಂಭಿಸಿ, ಬಾಲಕನಿಗೆ ಅಪಾಯವಾಗದಂತೆ ಪಾತ್ರೆಯನ್ನು ಕತ್ತರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ

 

 

ಇದನ್ನು ಓದಿ: Belthangady: ಉಜಿರೆ ಕಾಲೇಜು ಹಿಂದೂ ಹುಡುಗಿಗೆ ಡ್ರಾಪ್ ಕೊಟ್ಟ ಮುಸ್ಲಿಂ ಚಾಲಕ, ಧರ್ಮಸ್ಥಳದಲ್ಲಿ ಹಲ್ಲೆ !

You may also like