Home » Priyank Kharge: ‘ಅರಗ’ರ ಕುರಿತು ಮತ್ತೆ ಹರಿಹಾಯ್ದ ಖರ್ಗೆ !! RSS, ಅಂಬೇಡ್ಕರ್ ಉಲ್ಲೇಖಿಸಿ ಪ್ರಿಯಾಂಕ್ ಹೇಳಿದ್ದೇನು?

Priyank Kharge: ‘ಅರಗ’ರ ಕುರಿತು ಮತ್ತೆ ಹರಿಹಾಯ್ದ ಖರ್ಗೆ !! RSS, ಅಂಬೇಡ್ಕರ್ ಉಲ್ಲೇಖಿಸಿ ಪ್ರಿಯಾಂಕ್ ಹೇಳಿದ್ದೇನು?

by Mallika
0 comments
Priyank Kharge

Priyank Kharge: ಮಾಜಿ ಗೃಹ ಸಚಿವರ ಮತ್ತು ಸಚಿವ ಪ್ರಿಯಾಂಕ ಖರ್ಗೆ ಜಗಳ ಜೋರಾಗುತ್ತಿದೆ. ಇದೀಗ ಎಐಸಿಸಿ ಅಧ್ಯಕ್ಷ, ದೇಶದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮೈ ಬಣ್ಣದ ಕುರಿತು ಮಾಜಿ ಗೃಹ ಸಚಿವ, ಬಿಜೆಪಿ ನಾಯಕ ಆರಗ ಜ್ಞಾನೇಂದ್ರ (Araga Jnanendra) ಆಡಿರುವ ಮಾತಿನ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ವಾಗ್ದಾಳಿ ನಡೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಸಚಿವ ಈಶ್ವರ್ ಖಂಡ್ರೆ(Eshwar Khandre) ಅವರ ವಿಚಾರವಾಗಿ ಮಾಜಿ ಸಚಿವ ಆರಗ ಜ್ಞಾನೇಂದ್ರ(Araga Jnanendra )ಆಡಿರುವ ಮಾತು ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದು, ಕಾಂಗ್ರೆಸ್-ಬಿಜೆಪಿ (congress -BJP) ಪಡೆ ನಡುವೆ ಕಾಳಗ ಸೃಷ್ಟಿಸಿದೆ. ಈ ಸಂಬಂಧ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

‘ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ಧಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಸಕ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಇವರು , ಅರಗ ಜ್ಞಾನೇಂದ್ರರವರು ಇದು ಕೇವಲ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿದ ಅವಮಾನ ಅಲ್ಲ. ಇದು ಇಡೀ ಹಿಂದುಳಿದ ವರ್ಗದವರಿಗೆ ಮಾಡಿದ ಅವಮಾನ ಆಗಿದೆ. ಅವರು ಈಶ್ವರ್ ಖಂಡ್ರೆ ಅವರಿಗೆ ಹೇಳಲು ಹೋಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿದ್ದೀನಿ ಅಂತಿದ್ದಾರಲ್ಲ, ಹಾಗಾದ್ರೆ ಈಶ್ವರ ಖಂಡ್ರೆ ಅವರಿಗೆ ಹೀಗೆ ಅವಮಾನ ಮಾಡಬೇಕಾ? ಎಂದು ಮರು ಪ್ರಶ್ನಿಸಿದ್ದಾರೆ.

ಹಿಂದುಳಿದವರು ಬೆಳೆಯುತ್ತಿದ್ದಾರೆ ಅಂದ್ರೆ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.ಆರಗ ಜ್ಞಾನೇಂದ್ರ ಬಗ್ಗೆ ನನಗೆ ಅಪಾರ ಗೌರವ ಇತ್ತು‌, ಆದರೆ ಈಗ ಒಂಚೂರು ಗೌರವ ಇಲ್ಲ. ಇವರ ಈ ಮೈ ಬಣ್ಣದ ಯೋಚನೆಗಳನ್ನು ಗಮನಿಸಿದರೆ, ಇದು ಪಕ್ಕಾ ಆರ್ ಎಸ್ ಎಸ್ ಮೆಂಟಾಲಿಟಿ. ಇಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ನಮ್ಮ ದೇಶವು ಆರ್ ಎಸ್ ಎಸ್ ತತ್ವದ ಮೇಲೆ ನಡೆಯುತ್ತಿಲ್ಲ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಆಡಳಿತ ನಡೆಯುತ್ತಿದೆ. ಅವರ ಕ್ಷಮೆ ನಮಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇನ್ನು ಓದಿ: IRCTC Bali Tour: ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್- IRCTC ಕೊಡ್ತು ಹೊಸ ಬಂಪರ್ ಆಫರ್ 

You may also like