Free Health Insurance: ರಾಜಸ್ಥಾನ (Rajastan) ಸರ್ಕಾರವು ರಾಜ್ಯದ ಜನರಿಗೆ 25 ಲಕ್ಷ ಮೊತ್ತದ ಉಚಿತ ಆರೋಗ್ಯ ವಿಮೆ (Free Health Insurance) ಘೋಷಿಸಿದೆ. ಈ ಮೂಲಕ ಆ ರಾಜ್ಯದ ಜನರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ವಾರ್ಷಿಕ ಆದಾಯ 8 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಇದ್ದರೆ ರಾಜಸ್ಥಾನ ಸರ್ಕಾರವು ಈ ಉಚಿತ ಆರೋಗ್ಯ ವಿಮೆಯನ್ನು ನೀಡುತ್ತದೆ.
ಚಿರಂಜೀವಿ ಆರೋಗ್ಯ ವಿಮಾ ಯೋಜನೆ’ (Chiranjeevi Health Insurance Scheme) ಅಡಿಯಲ್ಲಿ ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರಿಗೆ 25 ಲಕ್ಷ ರೂ. ಮೊತ್ತದ ಉಚಿತ ಆರೋಗ್ಯ ವಿಮೆಯನ್ನು ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವು ಘೋಷಿಸಿದೆ.
ಸಾಮಾನ್ಯ, ಇತರೆ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಸೇರಿದಂತೆ ಎಲ್ಲಾ ವರ್ಗಗಳ 8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರವೇ ಪಾವತಿಸಲಿದೆ. ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಜನರು ‘ಚಿರಂಜೀವಿ ಸ್ವಾಸ್ಥ್ಯ ಬಿಮಾ ಯೋಜನೆ’ಯ ಪ್ರೀಮಿಯಂನ್ನು ಪಾವತಿಸಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೇಳಿದ್ದಾರೆ.
ಅಂದಹಾಗೆ ‘ಚಿರಂಜೀವಿ ಆರೋಗ್ಯ ವಿಮಾ ಯೋಜನೆ’ಯನ್ನು ರಾಜಸ್ಥಾನ ಸರ್ಕಾರವು 2021ರಲ್ಲಿ ಪ್ರಾರಂಭಿಸಿತು. ಹಿಂದಿನ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ನೀಡಲಾಗುತ್ತಿತ್ತು. ಸರ್ಕಾರದಿಂದ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳ ಅಪಘಾತ ವಿಮೆ ನೀಡಲಾಗುತ್ತಿದೆ. ಈ ಯೋಜನೆಯಡಿ ಕುಟುಂಬಗಳು ಪಾರ್ಶ್ವವಾಯು, ಹೃದಯ ಶಸ್ತ್ರಚಿಕಿತ್ಸೆ, ನರಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ, ಕೋವಿಡ್ -19, ಕಪ್ಪು ಶಿಲೀಂಧ್ರ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು. ಬಳಿಕ 2022-23ರಲ್ಲಿ 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳವಾಗಿ, ಇದೀಗ ಈ ಮೊತ್ತವನ್ನು 2023-24ಕ್ಕೆ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಮಂಗಳೂರು: ಪಕ್ಕದ ಮನೆ ಮಹಿಳೆ ಸ್ನಾನವನ್ನು ಕದ್ದು ನೋಡಿ ವೀಡಿಯೋ ರೆಕಾರ್ಡ್, ಅರೆಸ್ಟ್ ಆದ ಹುಡುಗ !
