Kerala: ತನ್ನ ಸ್ವಾರ್ಥಕ್ಕಾಗಿ ಇನ್ನೊಂದು ಜೀವ ತೆಗೆದು ಆದರೂ ಬಾಳಬೇಕು ಎಂಬ ಹಂಬಲದಿಂದ, ನರ್ಸ್ ವೇಷ ಹಾಕಿಕೊಂಡು ಗರ್ಭಿಣಿಯನ್ನು ಕೊಲೆ (Murder) ಮಾಡಲು ಯತ್ನಿಸಿದ ಹೀನಾಯ ಘಟನೆ ಬೆಳಕಿಗೆ ಬಂದಿದೆ.
ಕಾಯಂಕುಲಂ ಪುಲ್ಲುಕುಳಂಗರ( Kerala) ಮೂಲದ ಅಪ್ಪು ಎಂಬವರ ಪತ್ನಿ ಅನುಷಾ (25) ಎಂಬವಳು, ಗರ್ಭಿಣಿ ಸ್ನೇಹಾಳ ಪತಿ ಅರುಣ್ ಅವರ ಪ್ರಿಯತಮೆ ಆಗಿದ್ದಳು. ಹೇಗಾದರೂ ಮಾಡಿ ಸ್ನೇಹಳಾ ಸಂಸಾರ ಒಡೆದು ತಾನು ಅರುಣ್ ಜೊತೆಗೆ ಬಾಳಬೇಕು ಎಂದು ಅನುಷಾ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ.
ನಾಲ್ಕು ದಿನಗಳ ಹಿಂದೆ ಸ್ನೇಹ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅನುಷಾ ಇದೇ ಸರಿಯಾದ ಸಮಯ ಅಂದುಕೊಂಡು, ಫಾರ್ಮಸಿ ವ್ಯಾಸಂಗ ಮುಗಿಸಿರುವ ಅನುಷಾ ರಕ್ತನಾಳದಲ್ಲಿ ಗಾಳಿ ಸೇರಿದರೆ ಆಗಬಹುದಾದ ಅಪಾಯವನ್ನು ಮನಗಂಡು, ಅನುಷಾ ನರ್ಸ್ ರೂಪದಲ್ಲಿ ಆಸ್ಪತ್ರೆಗೆ ಬಂದಿದ್ದಾಳೆ. ಪ್ರಸವದ ನಂತರ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಹಾಳ ಕೊಠಡಿ ತಲುಪಿದ ಅನುಷಾ, ಖಾಲಿ ಸಿರಿಂಜ್‌ನಿಂದ ಸ್ನೇಹಾಳ ರಕ್ತನಾಳಗಳಿಗೆ ಗಾಳಿಯನ್ನು ತುಂಬಿಸಿ ಕೊಲ್ಲಲು ಪ್ರಯತ್ನಿಸಿದ್ದಾಳೆ.
ಕಾರ್ಯವಿಧಾನ ಮುಗಿಸಿ ಕೊಠಡಿಯಿಂದ ಹೊರಬಂದಾಗ ಸ್ನೇಹಾಳ ತಾಯಿ ಇದನ್ನು ನೋಡಿ ಅನುಮಾನಗೊಂಡು ಆಕೆಯನ್ನು ತಡೆದಿದ್ದಾರೆ. ಬಳಿಕ ಸ್ನೇಹಾಳ ತಾಯಿ ನರ್ಸಿಂಗ್ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ. ನರ್ಸ್ಗಳು ಹಿರಿಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪುಲಿಕ್ಕೇಶ್ ಪೊಲೀಸರು ಆಗಮಿಸಿ ಆರೋಪಿತ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯ ಸಿಬ್ಬಂದಿ ಮತ್ತು ಗರ್ಭಿಣಿ ತಾಯಿಯ ಅನುಮಾನವೇ ಸ್ನೇಹಾಳ ಜೀವ ಉಳಿಸುವಲ್ಲಿ ಕೆಲಸ ಮಾಡಿದೆ.
ಇನ್ನು ಸ್ನೇಹಾಗೆ ಆರೋಪಿತ ಮಹಿಳೆ ಅನುಷಾ ನಾಲ್ಕು ಬಾರಿ ಸಿರಿಂಜ್ ಚುಚ್ಚಿದ್ದಾರೆ. ಏರ್ ಇಂಜೆಕ್ಷನ್ ನಂತರ ಸ್ನೇಹಾ ಅವರಿಗೆ ಹೃದಯಾಘಾತವಾಗಿದೆ, ಆದರೆ, ಅವರ ಪ್ರಸ್ತುತ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಅನುಷಾಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
“ನಾವು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಅವಳು ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಮೇಲೆ ಇಂಟರ್ನೆಟ್ ಬೇಕಾಗೇ ಅಲ್ಲ; ಕೇಂದ್ರದಿಂದ ಲೈವ್ ಟಿವಿ ಚಾನೆಲ್ ವೀಕ್ಷಣೆಯ ಸೂಪರ್ ಪ್ಲಾನ್ !
