15 years old boy thrashed: 10ರೂ.ಗಳ ಚಿಪ್ಸ್ ಪ್ಯಾಕೆಟ್ ಕದ್ದಿದ್ದಕ್ಕೆ 15 ವರ್ಷದ ಬಾಲಕನನ್ನು ಥಳಿಸಿ, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆಯೊಂದು ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಇಂತಹ ಅಮಾನವೀಯ ಘಟನೆ ನಡೆದು ಕೆಲ ದಿನಗಳಾಗಿದ್ದು, ಇದರ ವೀಡಿಯೋ ಈಗ ವೈರಲ್ ಆಗಿದೆ.
ಶಿಮ್ಲಾದ ರೋಹ್ರು ಉಪವಿಭಾಗದ ಟಿಕ್ಕರ್ ತಹಸಿಲ್ ಮಾರ್ಕೆಟ್‌ನಲ್ಲಿ ಈ ಘಟನೆ ನಡೆದಿದೆ. ವೀಡಿಯೋ ವೈರಲ್ ಆದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಐವರನ್ನು ಬಂಧಿಸಿರುವ ವರದಿಯಾಗಿದೆ.
ನೇಪಾಳದ ವ್ಯಕ್ತಿಯೋರ್ವ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಈತನ ಮಗನ ಮೇಲೆ ಹಲ್ಲೆ ಮಾಡಲಾಗಿದೆ. ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕನನ್ನು ಥಳಿಸಿ, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದಲ್ಲದೆ ಮಗನ ಕಣ್ಣಲ್ಲಿ ಮೆಣಸಿನಕಾಯಿ ಸುರಿದಿದ್ದಾರೆ ಎಂದು ತಂದೆ ಪೊಲೀಸರ ಮುಂದೆ ಹೇಳಿದ್ದಾರೆ.
ಅಂಗಡಿಯುವರು ಹೇಳಿರುವ ಪ್ರಕಾರ ಆತ ಚಿಪ್ಸ್ ಪ್ಯಾಕೆಟ್ ಮಾತ್ರವಲ್ಲದೆ, 10 ಹಾಲಿನ ಪ್ಯಾಕೆಟ್, 10 ಸ್ಟಿಂಗ್ ಬಾಟಲ್, 10ಜ್ಯೂಸ್ ಬಾಟಲ್,10 ಕಾಸ್ಟ್ಲಿ ಚಾಕ್ಲೆಟ್ ಪತ್ತೆಯಾಗಿದೆ ಎಂದು ಹೇಳುತ್ತಾರೆ. ಪೊಲೀಸರು ಅಂಗಡಿಯವನ ಮೇಲೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.
