ಉಡುಪಿ: ನಗರದ ಖಾಸಗಿ ಕಾಲೇಜಿನ (Udupi College) ಟಾಯ್ಲೆಟ್ ನಲ್ಲಿ ಬಾಲಕಿಯರ ವೀಡಿಯೋ ಮಾಡಿದ್ದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿ (CID) ವಹಿಸಿದೆ.
ಉಡುಪಿಯ ಕಾಲೇಜಿನ ಮೂವರು ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಥಳೀಯ ನರ್ಸಿಂಗ್ ಕಾಲೇಜಿನ ಟಾಯ್ಲೆಟ್‍ನಲ್ಲಿ ಮೊಬೈಲ್ ಇರಿಸಿ ಹಿಂದೂ ಯುವತಿಯ ವಿಡೀಯೋ ಚಿತ್ರಿಕರಿಸಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಕಾಲೇಜಿನ ಆಡಳಿತ ಮಂಡಳಿ ಮಂಡಳಿ ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿ ಕ್ಷಮಾಪಣೆ ಪತ್ರ ಪಡೆದು ಎಚ್ಚರಿಕೆ ಕೊಟ್ಟು ಕಳಿಸಿತ್ತು. ಕೆಲ ದಿನಗಳ ನಂತರ ವಿಷಯ ಬಹಿರಂಗವಾಗಿ ಬಹುದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು. ಬಳಿಕ ಈ ವಿಚಾರ ಬೆಳಕಿಗೆ ಬಂದಿದ್ದು ಮಲ್ಪೆ ಪೊಲೀಸ್ ಠಾಣೆಯಲ್ಲಿ ಜು.26 ರಂದು ಸುಮೋಟೋ ಕೇಸ್ ದಾಖಲಾಗಿತ್ತು.
ಕಳೆದ ತಿಂಗಳು ಜುಲೈ 18 ರಂದು ನಡೆದಿದ್ದ ಟಾಯ್ಲೆಟ್ ವೀಡಿಯೋ ಘಟನೆ ರಾಜ್ಯದೆಲ್ಲೆಡೆ ದೊಡ್ಡ ಮಟ್ಟದ ಗದ್ದಲಕ್ಕೆ ಕಾರಣವಾಗಿತ್ತು. ರಾಜ್ಯಾದ್ಯಂತ ಬಿಜೆಪಿ, ಎಬಿವಿಪಿ ಹಾಗೂ ಹಿಂದೂಪರ ಸಂಘಟನೆಗಳು ಘಟನೆಯನ್ನು ಖಂಡಿಸಿ ಭಾರೀ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಸಲಾಗಿತ್ತು. ಮಹಿಳಾ ಆಯೋಗದ ಅಧ್ಯಕ್ಷ ಕೃಷ್ಣ ಸಹ ಉಡುಪಿಗೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದರು. ತದನಂತರ ನಡೆದ ಬೆಳವಣಿಗೆಯಲ್ಲಿ ಟಾಯ್ಲೆಟ್ ನಲ್ಲಿ ಕ್ಯಾಮರಾ ಇಟ್ಟಿದ್ದರು ಎನ್ನಲಾದ ಹುಡುಗಿಯರು ಪೊಲೀಸ್ ತರಿಕೆಯಲ್ಲಿ ತಪ್ಪು ಒಪ್ಪಿಕೊಂಡಿದ್ದರು. ಈ ಪ್ರಕರಣವನ್ನು ಎಸ್‍ಐಟಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಬಿಜೆಪಿ ಮನವಿ ಮಾಡಿತ್ತು.
ಈ ಪ್ರಕರಣವನ್ನು ಮೊದಲು ಸ್ಥಳೀಯ ಮಲ್ಪೆಯ ವೃತ್ತ ನಿರೀಕ್ಷಕ ಮಂಜುನಾಥ ಗೌಡ ತನಿಖೆ ನಡೆಸುತ್ತಿದ್ದರು. ಬಳಿಕ ತನಿಖಾಧಿಕಾರಿಯ ಬದಲಾವಣೆ ಮಾಡುವಂತೆ ಒತ್ತಡಗಳು ಬಂದ ಬಳಿಕ ಪ್ರಕರಣವನ್ನು ಅವರಿಂದ ಕುಂದಾಪುರ ಡಿವೈಎಸ್‍ಪಿ ಬೆಳ್ಳಿಯಪ್ಪ ತನಿಖೆ ಜವಾಬ್ದಾರಿ ವಹಿಸಿಕೊಂಡಿದ್ದರು. ಇದೀಗ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ. ಹೊಸ ವೇಗದಿಂದ ತನಿಖೆ ಸಾಗಲಿದೆ ಎನ್ನಲಾಗಿದೆ.
ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ನಡೆಸಲಾಗಿದೆ ಎಂಬ ಆರೋಪವಿದ್ದು, ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿ.ಐ.ಡಿ ಗೆ ವಹಿಸಿ ಆದೇಶಿಸಲಾಗಿದೆ.
– ಮುಖ್ಯಮಂತ್ರಿ @siddaramaiah pic.twitter.com/3aVKquZYQ6— CM of Karnataka (@CMofKarnataka) August 7, 2023
