Man billionaire overnight: ಅದೆಷ್ಟೋ ಜನರು ಲಾಟರಿ ಟಿಕೆಟ್ ನಿಂದಾಗಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗುತ್ತಾರೆ. ಆದರೆ ಈ ಪ್ರಕರಣ ಸ್ವಲ್ಪ ವಿಭಿನ್ನವಾಗಿದೆ. ಹೌದು, ಮನೆ ಕ್ಲೀನಿಂಗ್ ವೇಳೆ ಸಿಕ್ಕ ಅಪ್ಪನ ಹಳೆ ಪಾಸ್‌ಬುಕ್ ನಿಂದಾಗಿ ಮಗ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ (Man billionaire overnight) ಘಟನೆ ಬೆಳಕಿಗೆ ಬಂದಿದೆ.
ನೀವು ಕೇಳಿರುತ್ತೀರಾ ಹಿರಿಯರು ತಮ್ಮಲ್ಲಿದ್ದ ಆಭರಣಗಳನ್ನು ಭೂಮಿಯಲ್ಲಿ ಹೂತಿಡುತ್ತಾರೆ. ಈಗಲೂ ಹಲವರು ಹಣದ ಉಳಿತಾಯಕ್ಕಾಗಿ ಎಲ್ಲೆಲ್ಲೋ ಸಂದಿಗಳಲ್ಲಿ ಸಿಕ್ಕ ಚಿಕ್ಕ ಚಿಕ್ಕ ಜಾಗಗಳಲಿಲ್ಲಿ ಹಣವನ್ನು ಸಂಗ್ರಹಿಸಿಡುತ್ತಾರೆ. ಇಲ್ಲೂ ಇಂತಹದೇ ಘಟನೆ ನಡೆದಿರುವುದು. ಚಿಲಿ ರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು.
ಇಲ್ಲಿನ ಎಕ್ಸಿಕ್ವಿಯೆಲ್ ಹಿನೊಜೋಸಾ ಎಂಬಾತ ಒಮ್ಮೆ ಮನೆಯನ್ನು ಶುಚಿಗೊಳಿಸುತ್ತಿದ್ದನು. ಈ ವೇಳೆ ಮನೆಯ ಹಳೆಯ ಸಾಮಾನುಗಳಿದ್ದ ಕೋಣೆಯನ್ನೂ ಶುಚಿಗೊಳಿಸಿದ್ದಾನೆ. ಅಲ್ಲಿ ಆತನಿಗೆ ಅತ್ಯಲ್ಪ ಶಿಲಾಖಂಡರಾಶಿ ಎಂದು ಕಡೆಗಣಿಸಿದ್ದ ಕಸದ ರಾಶಿಯಲ್ಲಿ ಒಂದು ನಿಗರ್ವಿ ವಸ್ತು ಸಿಕ್ಕಿತು. ಅದು ಬಹಳ ದೀರ್ಘ ಸಮಯದ ಹಿಂದೆಯೇ ಕಳೆದುಹೋಗಿದ್ದ ತನ್ನ ತಂದೆಯ ಬ್ಯಾಂಕ್ ಪಾಸ್ ಎಂದು ಆತನ ಅರಿವಿಗೆ ಬಂದಿತು.
ಸುಮಾರು, 1960-70ರ ದಶಕದಲ್ಲಿ, ಎಕ್ಸಿಕ್ವಿಯೆಲ್‌ನ ತಂದೆ ಮುಂದೆ ಯಾವತ್ತಾದರೂ ಮನೆ ಖರೀದಿಸಲು 1.40 ಲಕ್ಷ ಚಿಲಿಯ ಪೆಸೊಗಳನ್ನು ಈ ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದರು. ಆ ಮೊತ್ತವು ಇಂದಿನ ಡಾಲರ್‌ಗಳಲ್ಲಿ ಸರಿಸುಮಾರು $163 ಅಥವಾ 13,480 ಭಾರತೀಯ ರೂಪಾಯಿಗಳಿಗೆ ಸಮವಾಗಿದೆ. ಆ ದಶಕದಲ್ಲಿ ಇದರ ಮೌಲ್ಯ ತುಂಬಾ ಹೆಚ್ಚಿತ್ತು. ಆದರೆ, ಈ ಬ್ಯಾಂಕ್ ಪಾಸ್‌ಬುಕ್ ಬಹಳ ಹಿಂದೆಯೇ ಕಳೆದು ಹೋಗಿತ್ತು. ತಂದೆ ಇದನ್ನು ಹುಡುಕಿ ಬೇಸತ್ತಿದ್ದರು. ನಂತರ ಒಂದು ದಶಕದ ಹಿಂದೆ ಅವರ ತಂದೆ ಮೃತರಾಗಿದ್ದು, ಅವರೊಂದಿಗೆ ಈ ಪಾಸ್‌ಬುಕ್ ನೆನಪೂ ಸಹ ಮಾಸಿ ಹೋಗಿತ್ತು.
ಇದೀಗ ಮನೆ ಸುಚಿಗೊಳಿಸುವಾಗ ಮಗನಿಗೆ ತಂದೆಯ ಪಾಸ್ ಬುಕ್ ಸಿಕ್ಕಿದೆ. ಆದರೆ, ಈ ಪಾಸ್‌ಬುಕ್‌ಗೆ ಸಂಬಂಧಿಸಿದ ಬ್ಯಾಂಕ್ ತುಂಬಾ ಸಮಯದ ಹಿಂದೆಯೇ ಬಂದ್ ಆಗಿತ್ತು. ಹಾಗಾಗಿ ಎಕ್ಸಿಕ್ವಿಯೆಲ್ ಖುಷಿ ಮಾಯವಾಯಿತು. ಆದರೆ, “ರಾಜ್ಯ ಖಾತರಿ” ಎಂಬ ಪದಗುಚ್ಚ ಈತನಿಗೆ ಸಹಕಾರಿಯಾಯಿತು. ಅಂದರೆ, ಬ್ಯಾಂಕಿನಲ್ಲಿ ಹೂಡಿಕೆ ಮಾಡಿರುವ ಹಣ ಹಿಂದಿರುಗಿಸುವಲ್ಲಿ ಬ್ಯಾಂಕ್ ವಿಫಲವಾದಲ್ಲಿ ಅದನ್ನು ಸರ್ಕಾರ ಮರುಪಾವತಿಸುತ್ತದೆ.
ಆದರೆ, ಪ್ರಸ್ತುತ ಸರ್ಕಾರ “ರಾಜ್ಯ ಖಾತರಿ”ಗೆ ಬದ್ಧವಾಗಿರಲು ಹಿಂದೇಟು ಹಾಕಿತ್ತು. ಇದರಿಂದಾಗಿ ಎಕ್ಸಿಕ್ವಿಯೆಲ್ ತನ್ನ ತಂದೆಯ ಹೂಡಿಕೆಯ ಹಣವನ್ನು ಪಡೆಯಲು ಕೋರ್ಟ್ ಮೆಟ್ಟಿಲೇರಬೇಕಾಯಿತು. ನಂತರ, ನ್ಯಾಯಾಲಯವು ಎಕ್ಸಿಕ್ವಿಯೆಲ್ ಪರವಾಗಿ ತೀರ್ಪು ನೀಡಿತು. ಎಕ್ಸಿಕ್ವಿಯೆಲ್ ಪರವಾಗಿ ತೀರ್ಪು ನೀಡಿದ ನ್ಯಾಯಾಲಯವು 1.2 ಮಿಲಿಯನ್ ಡಾಲರ್‌ಗಳಿಗೆ (ಅಂದಾಜು 10 ಕೋಟಿ ಭಾರತೀಯ ರೂಪಾಯಿಗಳು) 1 ಬಿಲಿಯನ್ ಚಿಲಿಯ ಪೆಸೊಗಳನ್ನು, ಇದರೊಂದಿಗೆ ಈ ಹಣಕ್ಕೆ ತಗುಲುವ ಸಂಚಿತ ಬಡ್ಡಿ ಮತ್ತು ಭತ್ಯೆಗಳನ್ನು ಎಕ್ಸಿಕ್ವಿಯೆಲ್ ಅವರಿಗೆ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
