Home » Yashwant Guruji Prediction: ಇವರೇ ವಿರೋಧ ಪಕ್ಷದ ನಾಯಕ! ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ !!!

Yashwant Guruji Prediction: ಇವರೇ ವಿರೋಧ ಪಕ್ಷದ ನಾಯಕ! ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ !!!

0 comments
Yashwant Guruji Prediction

Yashwant Guruji Prediction: ಈ ಹಿಂದೆ ರಾಷ್ಟ್ರ ರಾಜಕಾರಣದ ಕುರಿತು ಭವಿಷ್ಯ‌ ನುಡಿದಿದ್ದ ನೊಣವಿನಕೆರೆಯ ಕಾಲಜ್ಞಾನಿ ಡಾ. ಯಶವಂತ ಗುರೂಜಿ ಅವರು ಇದೀಗ ವಿರೋಧ ಪಕ್ಷದ ನಾಯಕ ಸ್ಥಾನದ ಕುರಿತು ಸ್ಫೋಟಕ ಭವಿಷ್ಯ (Yashwant Guruji Prediction) ನುಡಿದಿದ್ದಾರೆ. ಗುರೂಜಿ ಭವಿಷ್ಯದ ಪ್ರಕಾರ ಯಾರಾಗ್ತಾರೆ ವಿರೋಧ ಪಕ್ಷದ ನಾಯಕ ?!.

ಡಾ. ಯಶ್ವಂತ ಗುರೂಜಿ ಅವರು ವಿರೋಧ ಪಕ್ಷದ ನಾಯಕ ಸ್ಥಾನದ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದು, ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರೇ ವಿರೋಧ ಪಕ್ಷದ ನಾಯಕರಾಗ್ತಾರೆ ಎಂದು ಹೇಳಿದ್ದಾರೆ.

 

Yashwant Guruji Prediction

Image source: Deccan herald

 

ಗ್ರಹಗತಿಗಳ ಬಲಾಬಲಗಳ ಆಧಾರದ ಮೇಲೆ ಯತ್ನಾಳ್‌ಗೆ ಆ ಯೋಗ ಇದೆ. ತಾಳೆ ಹಾಕಿ ನೋಡಿದ್ರೆ ಯತ್ನಾಳ್‌ರೇ ವಿರೋಧ ಪಕ್ಷದ ನಾಯಕ. ನಾಯಕನ ಸ್ಥಾನ ಯತ್ನಾಳ್‌ಗೇ ಸಿಗೋದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂಬರುವ ಅಮಾವಾಸ್ಯೆ ಬಳಿಕ ಯತ್ನಾಳ್ ವಿರೋಧ ಪಕ್ಷದ ನಾಯಕ ಆಗ್ತಾರೆ ಎಂದು ತುಮಕೂರಿನ ನೊಣವಿನಕೆರೆಯಲ್ಲಿ ಯಶ್ವಂತ ಗುರೂಜಿ ಸ್ಟೋಟಕ ಭವಿಷ್ಯ ನುಡಿದಿದ್ದಾರೆ.

ಈ ಹಿಂದೆ ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು, ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಯಶವಂತ ಗುರೂಜಿ ಅವರು ಭವಿಷ್ಯ ನುಡಿದಿದ್ದರು. ಆ ನಂತರ ರಾಷ್ಟ್ರ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದು, ಮುಂದಿನ ಚುನಾವಣೆಯಲ್ಲಿ ಮಹಿಳೆಯೊಬ್ಬಳು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಇಂದಿರಾ ಗಾಂಧಿ ಬಳಿಕ ಇದೇ ಮೊದಲ ಬಾರಿಗೆ ದೇಶವನ್ನು ಆಳುತ್ತಾಳೆ. ಎಂದು ಭವಿಷ್ಯವನ್ನು ನುಡಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಈ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸ್ಥಾನದ ಬಗ್ಗೆ ಭವಿಷ್ಯ‌ ನುಡಿದಿದ್ದಾರೆ.

ಇದನ್ನೂ ಓದಿ: Neetu Singh: ಮುದುಕಿಗೆ ರಾಹುಲ್‌ ಗಾಂಧಿ ಫ್ಲೈಯಿಂಗ್‌ ಕಿಸ್‌ ಕೊಡ್ತಾರಾ? ನಮ್ಮಲ್ಲಿ ಹುಡುಗಿಯರಿಗೆ ಬರ ಇಲ್ಲ- ಕಾಂಗ್ರೆಸ್‌ ಶಾಸಕಿ ಹೇಳಿಕೆ !

You may also like