Karkala:ಕೆಸರಿನಲ್ಲಿ ಹೂತು ಹೋಗಿದ್ದ ಗೋವೊಂದನ್ನು ಬೈಕ್ ಸವಾರರಿಬ್ಬರು ಮೇಲೆತ್ತಿ ರಕ್ಷಿಸಿದ ಘಟನೆಯೊಂದು ಅಮಾಸೆಬೈಲು ಬಳಿ ನಡೆದಿದ್ದು, ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವೀಕ್ಷಣೆಯೊಂದಿಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ (Karkala).

ಮಳೆಗಾಲದ ಆನಂದ ಸವಿಯಲು ಜಾಲಿ ರೈಡ್ ಹೊರಟಿದ್ದ ಸವಾರರಾದ ಅರುಣ್ ಹಾಗೂ ಸಾಯಿಕಿರಣ್ ಶೆಟ್ಟಿ ಎಂಬವರು ಅಮಾಸೆಬೈಲು ಬಳಿ ಬರುತ್ತಿದ್ದಂತೆ ಕೆಸರಿನಲ್ಲಿ ಹೂತು ಹೋಗಿ, ಪ್ರಾಣ ರಕ್ಷಣೆಗೆ ಚಡಪಡಿಸುತ್ತಿತ್ತು.ಈ ವೇಳೆ ಇದೇ ರಸ್ತೆಯಾಗಿ ಬರುತ್ತಿದ್ದ ಸವಾರರು ದೃಶ್ಯವನ್ನು ಗಮನಿಸಿದ್ದು, ಕೂಡಲೇ ಗೋವಿನ ರಕ್ಷಣೆಗೆ ಮುಂದಾದರು.
ತಮ್ಮ ಕಾರ್ಯದ ಬಳಿಕ ರಕ್ಷಣೆ ನಡೆಸಿದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಯುವಕರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುವುದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆಯುತ್ತಿದೆ.
ಇದನ್ನೂ ಓದಿ: ಹಿಜ್ಬುಲ್ ಉಗ್ರ ಅಣ್ಣನಿಗೆ ತಮ್ಮನ ಟಕ್ಕರ್; ತಿರಂಗಾ ಹಾರಿಸಿ ದೇಶ ಭಕ್ತಿ ಪ್ರದರ್ಶಿಸಿದ ತಮ್ಮ!
