Home » Chalavadi Narayana Swamy: ‘ ಮುಸ್ಲಿಮರ ಓಟು ನಮಗೆ ಬೇಡ ‘ ಕೆಲವರ ಮಾತಿನ ತೆವಲಿಗೆ ಬರ್ತಿದ್ದ ಮುಸ್ಲಿಮರ 30 % ಓಟುಗಳೂ ತೇಲಿ ಹೋದ್ವು : ಛಲವಾದಿ ಹೇಳಿಕೆ

Chalavadi Narayana Swamy: ‘ ಮುಸ್ಲಿಮರ ಓಟು ನಮಗೆ ಬೇಡ ‘ ಕೆಲವರ ಮಾತಿನ ತೆವಲಿಗೆ ಬರ್ತಿದ್ದ ಮುಸ್ಲಿಮರ 30 % ಓಟುಗಳೂ ತೇಲಿ ಹೋದ್ವು : ಛಲವಾದಿ ಹೇಳಿಕೆ

0 comments
Chalavadi Narayana Swamy

Chalavadi Narayana swamy: ವಿಧಾನ ಪರಿಷತ್ ಸದಸ್ಯ ಬಿಜೆಪಿ ಮುಖಂಡ ನಾರಾಯಣಸ್ವಾಮಿ ಸ್ವಪಕ್ಷೀಯರ ವಿರುದ್ಧ ಆರೋಪ ಒಂದನ್ನು ಹೊರಿಸಿದ್ದು, ಹಿಂದೂಗಳು ಓಟ್ ಹಾಕಿದರೆ ಸಾಕು ಗೆದ್ದು ಬಿಡುತ್ತೇವೆ, ಮುಸ್ಲಿಂ ಮತಗಳು ನಮಗೆ ಬೇಡ ಎಂಬ ಹೇಳಿಕೆಯಿಂದಲೇ ಬಿಜೆಪಿಗೆ ಮುಸ್ಲಿಂ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಸ್ವಪಕ್ಷೀಯರ ವಿರುದ್ಧ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ನಾರಾಯಣಸ್ವಾಮಿ (Chalavadi Narayana swamy) ಯಾದಗಿರಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಮಗೆ ಮುಸ್ಲಿಂಮರ ಓಟ್ ಬೇಡ, ಹಿಂದೂಗಳು ಓಟ ಹಾಕಿದರೆ ಸಾಕು ಗೆದ್ದು ಬಿಡುತ್ತೇವೆ ಅಂತ ಬಿಜೆಪಿ ಯವರು ತಮ್ಮ ಮಾತಿನ ಬರದಲ್ಲಿ ಹೇಳಿ ಬಿಡುತ್ತಾರೆ.

ಆದರೆ, ಅವರ ಮಾತುಗಳು ಇಲ್ಲಿ ನಮಗೆ ಅನುಭವಿಸುವಂತೆ ಆಗುತ್ತವೆ. ನಾವು ಒಂದು ಸಮುದಾಯವನ್ನು ಹೊರಗಿಟ್ಟು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಇಂತಹ ಅನಗತ್ಯ ಹೇಳಿಕೆಗಳಿಂದ ನಮಗೆ ಬರುತ್ತಿದ್ದ ಮುಸ್ಲಿಂ ಸಮುದಾಯದ ಶೇ.30ರಷ್ಟು ಮತಗಳೂ ತಪ್ಪಿದಂತಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಮುಸ್ಲಿಂ ಮತಗಳು ನಮಗೆ ಬೇಡ ಎಂದು ವಿಜಯಪುರ ಶಾಸಕ ಯತ್ನಾಳ್ ಹಾಗೂ ಮಾಜಿ ಸಚಿವ ಈಶ್ವರಪ್ಪ ಅವರ ಹೇಳಿಕೆಗೆ ನಾರಾಯಣಸ್ವಾಮಿ ಪರೋಕ್ಷ ವಾಗ್ದಾಳಿ ನೀಡಿದ್ದಾರೆ.

ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮೀ 2000 ರೂ. ನಿಮ್ಮ ಖಾತೆಗೆ ಬೀಳೋ ದಿನಾಂಕ ಫಿಕ್ಸ್ ; ಸರ್ಕಾರದ ಆದೇಶ !

You may also like