IAS Intresting Question: ಕೆಲವು ಲೆಕ್ಕಗಳನ್ನು ನೀವು ನೋಡಿಯೇ ಇರುತ್ತೀರಿ. ಯಾವ ಕಡೆಯಿಂದ ಕೂಡಿಸಿ ಗುಣಿಸಿ ಭಾಗಿಸಿ ತೂಗಿ ನೋಡಿದರೂ ಲೆಕ್ಕ ತಪ್ಪುತ್ತದೆ. ಅಂತಹ ಅತ್ಯಂತ ಕನ್ಫ್ಯೂಸ್ ಆಗುವ ಒಂದು ಫಜಲ್ ಅನ್ನು ಕೊನೆಗೂ ಇಲ್ಲಿ ಸಾಲ್ವ್ ಮಾಡಲಾಗಿದೆ. ಅಷ್ಟೇ ಅಲ್ಲ, ಅದನ್ನು ಎಲ್ಲರಿಗೂ ಅರ್ಥವಾಗುವಂತೆ, ಸಾಮಾನ್ಯ ಭಾಷೆಯಲ್ಲಿ ಇಲ್ಲಿ ಹೇಳಲಾಗಿದೆ. ಈ ಪಜಲ್ ನ ಮಜಾವನ್ನು ನೀವೂ ಅನುಭವಿಸಿ ಮತ್ತು ಕೊನೆಗೆ ಉತ್ತರವನ್ನು ಕೂಡಾ ಪಡೆದುಕೊಳ್ಳಿ, ಈ ಪೋಸ್ಟ್ ಅನ್ನು ನಿಮ್ಮ ಗೆಳೆಯರಿಗೂ ಹಂಚಿಕೊಳ್ಳಿ (IAS Intresting Question).
ನಿಮಗೆ ತಮಿಳು ಚಿತ್ರಗಳನ್ನು ನೋಡುವ ಹವ್ಯಾಸ ಇದ್ದರೆ ಈ ಉತ್ತರಿಸಲಾಗದನ್ನು ಕೇಳಿಯೇ ಇರುತ್ತೀರಿ ಪ್ರಖ್ಯಾತ ತಮಿಳು ನಟ ವಡಿವೇಲು ಒಂದು ರೂಪಾಯಿ ಗಾಗಿ ಏಟು ತಿನ್ನುವ ಈ ಸನ್ನಿವೇಶ ದ ಕಥೆ ನೀವು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ.
ಹೌದು, ವಡಿವೇಲು ಮತ್ತು ಸೌಂದರ್ ರಾಜನ್ ಎನ್ನುವ ಇಬ್ಬರು ಗೆಳೆಯರು ಸೇರಿಕೊಂಡು ತಲಾ 25 ರೂಪಾಯಿ ಹಾಕಿ ಕೋಳಿ ಕೊಂಡು ಭರ್ಜರಿ ಪಾರ್ಟಿ ಮಾಡಲು ಕೊಳ್ಳಲು ಪ್ಲಾನ್ ಮಾಡುತ್ತಾರೆ. ಅದರಂತೆ ಇಬ್ಬರೂ, ತಲಾ 25 ರೂಪಾಯಿ ಹಾಕಿ ಸೌಂದರ್ ರಾಜನ್ ವಡಿವೇಲುವನ್ನು ಕೋಳಿ ಅಂಗಡಿಗೆ ಕಳಿಸುತ್ತಾನೆ. ವಡಿವೇಲು ಕೋಳಿ ಅಂಗಡಿಗೆ ಹೋಗಿ ಕೋಳಿ ಕೊಂಡಾಗ ಒಟ್ಟು 45 ಗೆ ಕೋಳಿ ಸಿಗುತ್ತದೆ. ಉಳಿಕೆ ಹಣ ರೂ.5 ಯಲ್ಲಿ ಎರಡು ರೂಪಾಯಿಯನ್ನು ಕೋಳಿ ಅಂಗಡಿ ಹುಡುಗನಿಗೆ ಟಿಪ್ಸ್ ನೀಡುತ್ತಾನೆ ವಡಿವೇಲು. ಹಾಗಾಗಿ ಕೋಳಿ ಅಂಗಡಿಯಿಂದ ಬರುವಾಗ 47 ರೂಪಾಯಿ ಖರ್ಚಾಗಿ, ಒಟ್ಟು 3 ಉಳಿಯುತ್ತದೆ. ಈ 3 ರೂಪಾಯಿಯನ್ನು ತನ್ನ ಹಿರಿಯ ಗೆಳೆಯ ಸೌಂದರ್ಯ ರಾಜನಿಗೆ ನೀಡುತ್ತಾನೆ ವಡಿವೇಲು. ಆಗ ಸೌಂದರ್ಯರಾಜನ್ ಹೊಸ ಲೆಕ್ಕ ಶುರು ಮಾಡುತ್ತಾನೆ: ಅದುವೇ ಇವತ್ತಿನ ಜಗದ್ಗುಖ್ಯಾತ ಫೇಮಸ್ ಆದ ತಮಿಳು ಚಿತ್ರದ ಪರಿಹರಿಸಲಾಗದ ಫಜಲ್ !
ನೋಡಪ್ಪ ವಡಿವೇಲು, ಈಗ 3 ರೂಪಾಯಿ ಇದೆ ಇದನ್ನ ಇಬ್ಬರು ಹಂಚಿಕೊಳ್ಳೋಣ. ಇಬ್ಬರಿಗೂ ಒಂದೂವರೆ ಒಂದೂವರೆ ಬರುತ್ತೆ. ನಾವು ಎಷ್ಟು ಮೊದಲಿಗೆ ದುಡ್ಡು ಹಾಕಿದ್ದೇವೆ ? 25+25 = 50. ಈಗ 1.5 + 1.5 = 3 ರೂಪಾಯಿ ಬಂತು. ಅಂದರೆ ನಾವಿಬ್ಬರು ಒಟ್ಟಿಗೆ ಸೇರಿ ಹಾಕಿದ್ದು 47 ರೂಪಾಯಿ. ಆಮೇಲೆ 2 ರೂಪಾಯಿ ಟಿಪ್ಸ್ ಕೊಟ್ಟೆ. ಎಷ್ಟು ಉಳೀತು ? ವಡಿವೇಲು ಹೇಳ್ತಾನೆ – 1 ರೂಪಾಯಿ ಉಳೀತು ಅಂತ. ಹಾಗಾದ್ರೆ ಆ ಒಂದು ರೂಪಾಯಿ ಎಲ್ಲಿ, ಏನು ಮಾಡಿದೆ ? ಎಂದುಬಿಟ್ಟು ಸೌಂದರ್ ರಾಜನ್ ತನ್ನ ಗೆಳೆಯ ವಡಿವೇಲುಗೆ ಸಿಕ್ಕಾಪಟ್ಟೆ ಹೊಡೀತಾನೆ. ಇದು ಜನಪ್ರಿಯ ತಮಿಳು ಚಿತ್ರ ಒಂದರ ಫಜಲ್ ಸೀಕ್ವೆನ್ಸ್. ಇವತ್ತಿಗೂ ಆ ಒಂದು ರೂಪಾಯಿ ಎಲ್ಲಿ ಹೋಗಿದೆ ಎನ್ನುವ ಲೆಕ್ಕ ಹಲವರಿಗೆ ಸಿಕ್ಕಿಲ್ಲ. ಅದರ ಪಕ್ಕಾ ಲೆಕ್ಕ ನಾವಿಲ್ಲಿ ನೀಡುತ್ತಿದ್ದೇವೆ.
ಉತ್ತರ ಇಲ್ಲಿದೆ ನೋಡಿ:
ಕೋಳಿಗೆ 45 ರೂಪಾಯಿ. ಟಿಪ್ಸ್ 2 ರೂಪಾಯಿ. ಉಳಿಕೆ ಹಣ ರೂ.3 ಒಟ್ಟು 50 ರೂಪಾಯಿ ಆಯ್ತು. ಆದರೆ ಸೌಂದರ್ ರಾಜನ್ ಉಳಿಕೆ ಹಣ ರೂ.3 ರೂಪಾಯಿಯನ್ನು ಇಬ್ಬರಿಗೂ ಹಂಚಿ ಒಂದುವರೆ – ಒಂದುವರೆ ರೂಪಾಯಿ ಲೆಕ್ಕ ಹಾಕಿ ಅದನ್ನು ಮೊದಲಿಗೆ ತಾವು ಕೊಟ್ಟ 25 ರೂಪಾಯಿ 25 ರೂಪಾಯಿಗಳಿಂದ ಕಳೆಯಲು ಹೇಳುತ್ತಾನೆ. (25-1.5=23.5). ರೂಪಾಯಿ 23.5 ಒಬ್ಬ ಹಾಕಿದ ಹಣ. ಇಬ್ಬರದ್ದೂ ಸೇರಿದರೆ 47 ರೂಪಾಯಿ ಆಗುತ್ತದೆ. 47 ರೂಪಾಯಿಗೆ 2 ರೂಪಾಯಿ ಟಿಪ್ಸ್ ಕೂಡಾ ಸೇರಿಸಲು ಹೇಳಿದಾಗ, ಒಟ್ಟು ಮೊತ್ತ 49 ರೂಪಾಯಿ ಆಗುತ್ತದೆ. 50 ರೂಪಾಯಿಯಲ್ಲಿ 49 ಖರ್ಚಾದರೆ, ಇನ್ನುಳಿದ 1 ರೂಪಾಯಿ ಎಲ್ಲಿ ಎನ್ನುತ್ತಾನೆ ಸೌಂದರ್ ರಾಜನ್. ಮೇಲ್ನೋಟಕ್ಕೆ ಸೌಂದರ್ ರಾಜನ್ ಕೇಳುತ್ತಿರುವುದು ಸರಿ ಅನಿಸಿದರೂ, ಮ್ಯಾಥಮೆಟಿಕಲಿ ಇದು ತಪ್ಪು. ಯಾಕೆಂದರೆ ಟಿಪ್ಸ್ ಕೊಟ್ಟು ಕಳೆದ ನಂತರ ಬಂದದ್ದು ಮೂರು ರೂಪಾಯಿ ಹಣ. ಅದರಲ್ಲಿ ಮತ್ತೆ ಎರಡು ರೂಪಾಯಿ ಕಳೆಯಲು ಹೇಳುವುದು ಸರಿಯಾದ ಲೆಕ್ಕವಲ್ಲ. ಒಟ್ಟಾರೆ ಹೇಳಬೇಕೆಂದರೆ ಇಲ್ಲಿ ಪ್ರಶ್ನೆಯೇ ತಪ್ಪಾಗಿದೆ. ಲೆಕ್ಕ ಬಾರದ ಮುಗ್ಧ ವಡಿವೇಲುವನ್ನು ಆಟ ಆಡಿಸಲು ಸೌಂದರ್ ರಾಜನ್ ಹೂಡಿದ ಗಣಿತದ ಫಜಲ್ ಇದಾಗಿದ್ದು ಈ ಸನ್ನಿವೇಶ ನೋಡುಗರನ್ನು ಕನ್ಫ್ಯೂಷನ್ ಗೆ ದೂಡುತ್ತದೆ ಮತ್ತು ಇನ್ನಿಲ್ಲದ ಮಜಾ ನೀಡುತ್ತದೆ. ನಾವು ಈಗ ಇದರ ಉತ್ತರವನ್ನು ನೀಡಿದ್ದು ಇನ್ನಷ್ಟು ನಿಮ್ಮ ಕ್ಲಾರಿಟಿಗಾಗಿ ಇಂತಹುದೇ ಇನ್ನೊಂದು ಲೆಕ್ಕ ಇಲ್ಲಿ ನೀಡಿದ್ದೇವೆ.
ಉದಾಹರಣೆ 2: ಮೊದಲು 50 ರೂಪಾಯಿ ಇರುತ್ತದೆ. ಅದನ್ನು ಈ ರೀತಿಯಾಗಿ ಖರ್ಚು ಮಾಡುತ್ತಾರೆ.
Example-1:

Example 2:

ಗೆಳೆಯರೇ ಈ ಎರಡು ಲೆಕ್ಕಗಳ ಮೂಲಕ ನಾವಿವತ್ತು ಅತ್ಯಂತ ಕನ್ಫ್ಯೂಷನ್ ಆಗುವ ಗಣಿತದ ಆಕರ್ಷಕ ಫಜಲ್ ಒಂದರ ಪರಿಹಾರವನ್ನು ಇಲ್ಲಿ ನೀಡಿದ್ದೇವೆ. ಮತ್ತಷ್ಟು ಇಂಥದ್ದೇ ರೋಚಕ ವಿಷಯಗಳ ಜತೆ ಬರ್ತೇವೆ. www.hosakannada.com ಓದುತ್ತಾ ಇರಿ. ಹ್ಯಾಪಿ ಇಂಡಿಪೆಂಡೆನ್ಸ್ ಡೇ !
ಇದನ್ನೂ ಓದಿ: Lakshmi Hebbalkar: ಉಡುಪಿ ‘ವಾಶ್ ರೂಂ ಪ್ರಕರಣ ಪ್ರಗತಿಯಲ್ಲಿದೆ’ ! ಸಿಐಡಿ ತನಿಖೆ ಬಗ್ಗೆ ಏನಂದ್ರು ಸಚಿವೆ ಹೆಬ್ಬಾಳ್ಕರ್ ?!
