Home » ESIC Karnataka Recruitment 2023: ಫ್ರೊಫೆಸರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ! ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ, ಮಾಸಿಕ 2.30 ಲಕ್ಷ ವೇತನ!

ESIC Karnataka Recruitment 2023: ಫ್ರೊಫೆಸರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ! ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ, ಮಾಸಿಕ 2.30 ಲಕ್ಷ ವೇತನ!

0 comments

ESIC Karnataka Recruitment 2023: ಕೆಲಸವಿಲ್ಲದೆ ಖಾಲಿ ಕೂತಿರುವವರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಜೊತೆಗೆ ಕೆಲಸಕ್ಕಾಗಿ ಹುಡುಕಾಡಿ ಬೇಸತ್ತವರಿಗೂ ಶುಭ ಸುದ್ದಿಯೇ ಇದು. ಹೌದು, ನಿರುದೋಗಿಗಳೇ ನಿಮಗಿದೋ ಸುವರ್ಣವಕಾಶ. ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (Employees State Insurance Corporation Karnataka) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ.

ಒಟ್ಟು 14 ಮೆಡಿಕಲ್ ಟೀಚಿಂಗ್ ಫ್ಯಾಕಲ್ಟಿ ಹುದ್ದೆಗಳು ಖಾಲಿ ಇದ್ದು, ನೀವು ಕೂಡ ಹುದ್ದೆಗೆ (ESIC Recruitment 2023) ಸೇರಲು ಆಸಕ್ತಿ ಹೊಂದಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ಹೆಸರು & ಸಂಖ್ಯೆ:
ಪ್ರೊಫೆಸರ್ – 2
ಅಸೋಸಿಯೇಟ್ ಪ್ರೊಫೆಸರ್- 7
ಅಸಿಸ್ಟೆಂಟ್ ಪ್ರೊಫೆಸರ್- 5

ಪ್ರಮುಖ ದಿನಾಂಕ : ಆಗಸ್ಟ್ 24, 2023 ರಂದು ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ.

ವಯೋಮಿತಿ : ಗರಿಷ್ಠ 67 ವರ್ಷ
ವಯೋಮಿತಿ ಸಡಿಲಿಕೆ: ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

ಮಾಸಿಕ ವೇತನ :
ಪ್ರೊಫೆಸರ್- ₹ 2,33,919
ಅಸೋಸಿಯೇಟ್ ಪ್ರೊಫೆಸರ್- ₹ 1,55,551
ಅಸಿಸ್ಟೆಂಟ್ ಪ್ರೊಫೆಸರ್- ₹ 1,33,640

ಉದ್ಯೋಗ ಸ್ಥಳ : ಬೆಂಗಳೂರು (Bengaluru)

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಸಂದರ್ಶನ ನಡೆಯುವ ದಿನ:
• ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಆಗಸ್ಟ್ 23 ರಂದು ಸಂದರ್ಶನ ನಡೆಯಲಿದೆ.
• ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಆಗಸ್ಟ್ 24 ರಂದು ಸಂದರ್ಶನ ನಡೆಯಲಿದೆ.

ಸಂದರ್ಶನ ನಡೆಯುವ ಸ್ಥಳ :
ಹೊಸ ಶೈಕ್ಷಣಿಕ ಬ್ಲಾಕ್
ESIC MC & PGIMSR
ರಾಜಾಜಿನಗರ
ಬೆಂಗಳೂರು

ಹೆಚ್ಚಿನ ಮಾಹಿತಿಗಾಗಿ :
ದೂರವಾಣಿ ಸಂಖ್ಯೆ : 080-23125571
ಇ-ಮೇಲ್ ಐಡಿ : esipgi.rajblr@gmail.com

You may also like