Home » Ladakh BJP: ಮಗ ಮಾಡಿದ ತಪ್ಪಿಗೆ ಅಪ್ಪನನ್ನು ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ! ಅಷ್ಟಕ್ಕೂ ಮಗ ಮಾಡಿದ ತಪ್ಪೇನು?

Ladakh BJP: ಮಗ ಮಾಡಿದ ತಪ್ಪಿಗೆ ಅಪ್ಪನನ್ನು ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ! ಅಷ್ಟಕ್ಕೂ ಮಗ ಮಾಡಿದ ತಪ್ಪೇನು?

0 comments

Ladakh BJP: ಲೇಹ್(ಲಡಾಖ್) ಮಗ ಬೌದ್ಧ ಮಹಿಳೆ ಜತೆ ಓಡಿ ಹೋಗಿ ವಿವಾಹವಾದ ಹಿನ್ನೆಲೆ ಭಾರತೀಯ ಜನತಾ ಪಕ್ಷ (BJP)ತನ್ನ ಹಿರಿಯ ಮುಖಂಡರೊಬ್ಬರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಘಟನೆ ಲಡಾಖ್ ನಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಲಡಾಖ್ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ನಝೀರ್ ಅಹ್ಮದ್ (74ವರ್ಷ)ಅವರ ಮಗ ಒಂದು ತಿಂಗಳ ಹಿಂದೆ ಬೌದ್ಧ ಮಹಿಳೆ ಜತೆ ಓಡಿ ಹೋಗಿ ವಿವಾಹವಾಗಿದ್ದನಂತೆ. ಇದೀಗ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾಗೊಳಿಸಿರುವ ಕುರಿತು ವರದಿಯಾಗಿದೆ. ನಝೀರ್ ಅಹ್ಮದ್ ಪುತ್ರ ಮಂಝೂರ್ ಅಹ್ಮದ್ (39ವರ್ಷ), 35 ವರ್ಷದ ಬೌದ್ಧ ಮಹಿಳೆ (women )ಜೊತೆ ಕೋರ್ಟ್ ನಲ್ಲಿ(Court )ವಿವಾಹವಾಗಿದ್ದರು. ಆದರೆ , ತಂದೆ ನಝೀರ್ ಸತ್ಯ ಮರೆ ಮಾಚಿ ಮಗ ಹಜ್ ಯಾತ್ರೆಗೆ ತೆರಳಿದ್ದಾಗಿ ತಿಳಿಸಿದ್ದಾರೆ.

ನಝೀರ್ ಪುತ್ರ ಬೌದ್ಧ ಮಹಿಳೆ (Buddist Women)ಜೊತೆಗೆ ಸಂಬಂಧ ಹೊಂದಿರುವ ಕುರಿತು ಸ್ಪಷ್ಟನೆ ನೀಡುವಂತೆ ತಂದೆಯ ಪಾತ್ರವನ್ನು ಸ್ಪಷ್ಟಪಡಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ನಝೀರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಲಡಾಖ್ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ. ಬುಧವಾರ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯ ವೇಳೆ ಲಡಾಖ್ ಬಿಜೆಪಿ ಅಧ್ಯಕ್ಷ ಫುನ್ ಚೋಕ್ ಸ್ಟಾಂಜಿನ್ ಪಕ್ಷದಿಂದ ಉಚ್ಚಾಟನೆ ಮಾಡಿರುವ ಆದೇಶ ಹೊರಡಿಸಿರುವ ಕುರಿತು ವರದಿಯಾಗಿದೆ.

You may also like