Home » Central Government: ಹೊಸ ಸಿಮ್ ತೆಗೆಯುವುದು ಇನ್ನು ಸುಲಭವಲ್ಲ! ಕೇಂದ್ರ ಜಾರಿಗೆ ತರಲಿದೆ ಹೊಸ ನಿಯಮ!

Central Government: ಹೊಸ ಸಿಮ್ ತೆಗೆಯುವುದು ಇನ್ನು ಸುಲಭವಲ್ಲ! ಕೇಂದ್ರ ಜಾರಿಗೆ ತರಲಿದೆ ಹೊಸ ನಿಯಮ!

0 comments

Central Government New Rule: ಇಂದಿನ ಯುಗದಲ್ಲಿ ಮೊಬೈಲ್ ಬಳಕೆ ಮಾಡದೇ ಇರುವವರೇ ವಿರಳ. ಮೊಬೈಲ್ ಬಳಕೆ ಮಾಡುವಾಗ ಸಂವಹನ ನಡೆಸುವುದಕ್ಕಾಗಿ ಸಿಮ್ ಅತ್ಯವಶ್ಯಕ. ನೀವೇನಾದರೂ ಹೊಸ ಸಿಮ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ಮಾಹಿತಿ ತಿಳಿದಿರುವುದು ಅವಶ್ಯಕ.

ಕೇಂದ್ರ ಸರ್ಕಾರ (Central Government)ಸಿಮ್ ಕಾರ್ಡ್ (Sim Card)ಬಗ್ಗೆ ಮಹತ್ವದ ನಿರ್ಣಯವನ್ನು ಪ್ರಕಟಿಸಿದೆ. ಇತ್ತೀಚಿನ ದಿನಗಳಲ್ಲಿ, ಸೈಬರ್ ವಂಚನೆಗಳು ದೇಶಾದ್ಯಂತ ಬಹಳ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ದೇಶಾದ್ಯಂತ ಸುಮಾರು 67,000 ಸಿಮ್ ಕಾರ್ಡ್ ಡೀಲರ್‌ಗಳನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಿದ್ದಾರೆ.

ಇದರ ಜೊತೆಗೆ ವಂಚನೆಯನ್ನು ತಡೆಯಲು ಸರ್ಕಾರ ಸಿಮ್ ಕಾರ್ಡ್ ಡೀಲರ್‌ನ ಪೊಲೀಸ್ ವೆರಿಫಿಕೆಶನ್ ಕಡ್ಡಾಯಗೊಳಿಸಿರುವ ಕುರಿತು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ ಇದರ ಜೊತೆಗೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ‘ಸಂಪರ್ಕ’ ನೀಡುವ ಸೌಲಭ್ಯವನ್ನು ಸ್ಥಗಿತ ಮಾಡಿದಂತಾಗುತ್ತದೆ. ಮತ್ತೊಂದು ಮುಖ್ಯ ವಿಚಾರವೇನೆಂದರೆ, SIM ತೆಗೆದುಕೊಳ್ಳುವ ವ್ಯಕ್ತಿಯ KYC ಅನ್ನು ಸಹ ಮಾಡಲಾಗುತ್ತದೆ. KYC ಸಂಸ್ಥೆ ಇಲ್ಲವೇ ಖರೀದಿದಾರರ ಗುರುತು ಮತ್ತು ವಿಳಾಸವನ್ನು ದೃಢೀಕರಿಸಲು ನೆರವಾಗುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಮಾಡಿಸಲಾಗುತ್ತಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ವಂಚನೆ ಕೃತ್ಯಗಳಲ್ಲಿ ತೊಡಗಿರುವ ಸುಮಾರು 66,000 ಖಾತೆಗಳನ್ನು ವಾಟ್ಸಾಪ್ ನಿರ್ಬಂಧ ಹೇರಿದೆ. ವಂಚನೆ ತಡೆಯಲು ಸಿಮ್ ಕಾರ್ಡ್ ಡೀಲರ್‌ನ ಪೊಲೀಸ್ ವೆರಿಫಿಕೆಶನ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಈ ನಿಯಮ ಉಲ್ಲಂಘಿಸುವ ಡೀಲರ್ ಗೆ 10 ಲಕ್ಷ ರೂ. ದಂಡ ವಿಧಿಸಲಾಗುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಮೇ 2023 ರಿಂದ, ಸಿಮ್ ಕಾರ್ಡ್ ವಿತರಕರ ವಿರುದ್ಧ 300 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಕೇಂದ್ರ ಸರ್ಕಾರ ಸುಮಾರು 52 ಲಕ್ಷ ಮೊಬೈಲ್ ಸಂಪರ್ಕ ಬಂದ್ ಮಾಡಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದು, 67,000 ಡೀಲರ್‌ಗಳ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

You may also like